ಮುಜಾಫರ್‌ನಗರ :ಜಿಲ್ಲೆಯ ಎರಡು ಖಾಸಗಿ ಶಾಲೆಗಳ ಮ್ಯಾನೇಜರ್‌ಗಳು 17 ಬಾಲಕಿಯರಿಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಪೊಲೀಸರು ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೋಷಕರ ದೂರಿನ ಮೇರೆಗೆ ಸೋಮವಾರ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡರೊಂದಿಗೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ಪುರ್ಕಾಜಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಎರಡು ಖಾಸಗಿ ಶಾಲೆಗಳ ನಿರ್ವಾಹಕರ ವಿರುದ್ಧ ಮತ್ತು ಭೋಪಾ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ, ಮಾದಕ ದ್ರವ್ಯ ವಿತರಣೆ ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಓದಿ:ವರ್ಕ್ ಫ್ರಮ್ ಹೋಂಗಾಗಿ ಹೊಸ ಕಾನೂನು ಚೌಕಟ್ಟು ನಿರ್ಮಿಸಲು ಮುಂದಾದ ಸರ್ಕಾರ!
ಶಾಲೆಯೊಂದರಲ್ಲಿ ಓದುತ್ತಿದ್ದ 17 ಬಾಲಕಿಯರನ್ನು ಪ್ರಾಯೋಗಿಕ ಪರೀಕ್ಷೆಗೆಂದು ಮತ್ತೊಂದು ಶಾಲೆಗೆ ಕರೆದೊಯ್ದಿದ್ದಾರೆ. ರಾತ್ರಿ ಅಲ್ಲಿಯೇ ಉಳಿಯಬೇಕಾದ ಸ್ಥಿತಿ ನಿರ್ಮಾಣವಾಯಿತು.
ಈ ವೇಳೆ ಶಾಲಾ ಮ್ಯಾನೇಜರ್‌ಗಳು ವಸತಿ ಗೃಹದಲ್ಲಿ ತಂಗಿದ್ದ ಬಾಲಕಿಯರಿಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಪೋಷಕರು ಪೊಲೀಸ್ ಠಾಣೆಗೆ ಸಲ್ಲಿಸಿದ್ದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಘಟನೆ ಕುರಿತು ಪುಕಾರ್ಜಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಜಿಲ್ಲಾಡಳಿತಕ್ಕೆ ಮಹಿಳಾ ಆಯೋಗ ಪತ್ರ
ಈ ಬಗ್ಗೆ ಈಟಿವಿ ಭಾರತ ಸುದ್ದಿ ಪ್ರಕಟಿಸುತ್ತಿದ್ದಂತೆ ಎಚ್ಚತ್ತ ಉತ್ತರಪ್ರದೇಶದ ಮಹಿಳಾ ಆಯೋಗ ಮುಜಾಫರ್‌ನಗರ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದು, ಘಟನೆಯ ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದೆ.
ಮುಜಾಫರ್‌ನಗರ ಜಿಲ್ಲಾಡಳಿತಕ್ಕೆ ಮಹಿಳಾ ಆಯೋಗ ಪತ್ರ