ಕರ್ನಾಟಕ

karnataka

ETV Bharat / bharat

ಕೋವಿಡ್​ ಲಸಿಕೆಯ ಎಸ್ಕಾರ್ಟ್​​ ವಾಹನಕ್ಕೆ ಗುದ್ದಿದ ಲಾರಿ... ಇಬ್ಬರು ಪೊಲೀಸರು ಸಾವು! - East Godavari road accident

ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಸಮರ್ಲಕೋಟ ಮಂಡಲದ ಉಂಡೂರ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸರು ಮೃತಪಟ್ಟಿದ್ದಾರೆ.

Two police died as lorry hits in andhra pradesh
ಕೋವಿಡ್​ ಲಸಿಕೆಯ ಎಸ್ಕಾರ್ಟ್​​ ವಾಹನಕ್ಕೆ ಗುದ್ದಿದ ಲಾರಿ

By

Published : May 14, 2021, 9:39 AM IST

Updated : May 14, 2021, 12:27 PM IST

ಪೂರ್ವ ಗೋದಾವರಿ: ಲಾರಿ ಗುದ್ದಿ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸರು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಸಮರ್ಲಕೋಟ ಮಂಡಲದ ಉಂಡೂರ್‌ನಲ್ಲಿ ನಡೆದಿದೆ.

ಕಾಕಿನಾಡದ ತಿಮ್ಮಪುರಂ ಪೊಲೀಸ್ ಠಾಣೆಯ ಹೆಡ್​​ ಕಾನ್ಸ್​ಟೇಬಲ್​ ಸತ್ಯನಾರಾಯಣ ಹಾಗೂ ಹೋಮ್ ಗಾರ್ಡ್ ಎನ್.ಎಸ್.ರೆಡ್ಡಿ ಮೃತ ಪೊಲೀಸರಾಗಿದ್ದಾರೆ. ವಿಜಯವಾಡದಿಂದ ಬರುತ್ತಿದ್ದ ಕೋವಿಡ್ ಲಸಿಕೆ ವಾಹನಕ್ಕೆ ಬೆಂಗಾವಲಾಗಿ ಹೋಗಲು ಸೇತುವೆಯ ಬಳಿ ತಮ್ಮ ಪೊಲೀಸ್​​ ವಾಹನದ ಮುಂದೆ ನಿಂತು ಕಾಯುತ್ತಿದ್ದ ವೇಳೆ ಯಮರಾಯನಂತೆ ಬಂದ ಲಾರಿ ಗುದ್ದಿದೆ. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಕುರಿತು ಸಮರ್ಲಕೋಟ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋವಿಡ್​ ಲಸಿಕೆಯ ಎಸ್ಕಾರ್ಟ್​​ ವಾಹನಕ್ಕೆ ಗುದ್ದಿದ ಲಾರಿ

24 ಗಂಟೆಯಲ್ಲಿ ಮೂರು ಅಪಘಾತ, 9 ಜನ ಸಾವು!

ಆಂಧ್ರದಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಮೂರು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ನಿನ್ನೆ ಪೂರ್ವ ಗೋದಾವರಿ ಜಿಲ್ಲೆಯಲ್ಲೇ ಕಾರಿಗೆ ಟ್ರಕ್ ಡಿಕ್ಕಿ ಹೊಡೆದು ಐದು ತಿಂಗಳ ಮಗು ಸೇರಿ ನಾಲ್ವರು ಸಾವನ್ನಪ್ಪಿದ್ದರು. ಪ್ರಕಾಶಂ ಜಿಲ್ಲೆಯಲ್ಲಿ ಆಟೋಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಮೂವರು ರೈತರು ಬಲಿಯಾಗಿದ್ದರು. ಇದೀಗ ಇಬ್ಬರು ಪೊಲೀಸರು ಮೃತಪಟ್ಟಿದ್ದಾರೆ.

Last Updated : May 14, 2021, 12:27 PM IST

ABOUT THE AUTHOR

...view details