ಶ್ರೀನಗರ(ಜಮ್ಮು ಕಾಶ್ಮೀರ): ಕಣಿವೆ ರಾಜ್ಯದಲ್ಲಿ 8 ತಾಸಿನಲ್ಲಿ ಎರಡು ಕಡೆ ನಿಗೂಢ ಸ್ಫೋಟಗಳು ಸಂಭವಿಸಿವೆ. ಸ್ಫೋಟದಿಂದ ಉಧಂಪುರ ನಗರ ತತ್ತರಿಸಿದೆ. ನಿನ್ನೆ ರಾತ್ರಿ ಪೆಟ್ರೋಲ್ ಬಸ್ಸಿನಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಇಂದು ಬೆಳಗ್ಗೆ 6:00 ಗಂಟೆಗೆ ಉಧ್‌ಂಪುರದ ಬಸ್ ನಿಲ್ದಾಣದಲ್ಲಿ ಮತ್ತೊಂದು ಬಸ್‌ನಲ್ಲಿ ಸ್ಫೋಟ ಸಂಭವಿಸಿದೆ. ಆದರೆ ಅದೃಷ್ಟವಶಾತ್ ಈ ಸ್ಫೋಟದಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಪಾರ್ಕ್ ಮಾಡಿದ್ದ ಬಸ್ಗಳಲ್ಲಿ ನಿಗೂಢ ಸ್ಫೋಟ ಈ ಬಸ್ ಉಧಮ್‌ಪುರದಿಂದ ರಾಮನಗರಕ್ಕೆ ಹೋಗುತ್ತಿತ್ತು. ಬೆಳಗ್ಗೆ 6:00 ಗಂಟೆಗೆ ಈ ಬಸ್‌ನಲ್ಲಿ ಸ್ಫೋಟಗೊಂಡು ಗಾಜುಗಳು ಒಡೆದಿವೆ. ಇದು ಕೇವಲ ಸ್ಫೋಟವಾಗಿರಬಹುದು ಎಂದು ಪೊಲೀಸರು ಹೇಳುತ್ತಾರೆ. ಡಿಐಜಿ ಸುಲೇಮಾನ್ ಚೌಧರಿ ಮಾತನಾಡಿ, ಇದು ಬಾಂಬ್ ಎಂದು ದೃಢೀಕರಿಸಲಾಗಿಲ್ಲ. ಆದರೆ ಇದು ಬಾಂಬ್ ಆಗಿರಬಹುದು ಎಂಬ ಊಹಾಪೋಹವಿದೆ ಎಂದು ಹೇಳಿದರು.
ಪಾರ್ಕ್ ಮಾಡಿದ್ದ ಬಸ್ಗಳಲ್ಲಿ ನಿಗೂಢ ಸ್ಫೋಟ ಇದನ್ನೂ ಓದಿ:ದೊಡ್ಡಬಳ್ಳಾಪುರದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸ್ಫೋಟ.. 30ಕ್ಕೂ ಹೆಚ್ಚು ಕಾರ್ಮಿಕರು ಪಾರು
ಬುಧವಾರ ರಾತ್ರಿ 10:30 ರ ಸುಮಾರಿಗೆ ಪೆಟ್ರೋಲ್ ಬಂಕ್ನಲ್ಲಿ ನಿಂತಿದ್ದ ಬಸ್ನಲ್ಲಿ ಇದ್ದಕ್ಕಿದ್ದಂತೆ ಭಾರಿ ಶಬ್ದದೊಂದಿಗೆ ಸ್ಫೋಟ ಸಂಭವಿಸಿತ್ತು. ಈ ವೇಳೆ ಇಬ್ಬರು ಗಾಯಗೊಂಡಿದ್ದಾರೆ. ಅದರ ಬೆನ್ನಲ್ಲೇ ಬೆಳಗ್ಗೆಯೂ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ನಲ್ಲಿ ನಿಗೂಢ ಸ್ಫೋಟ ಸಂಭವಿಸಿದೆ.
ಪಾರ್ಕ್ ಮಾಡಿದ್ದ ಬಸ್ಗಳಲ್ಲಿ ನಿಗೂಢ ಸ್ಫೋಟ ಉಧಮ್‌ಪುರ ಜಿಲ್ಲೆಯ ಡೊಮೈಲ್ ಚೌಕ್‌ನ ಪೆಟ್ರೋಲ್ ಬಂಕ್ ಬಳಿ ನಿಂತಿದ್ದ ಬಸ್‌ನೊಳಗೆ ನಿಗೂಢ ಸ್ಫೋಟ ಸಂಭವಿಸಿದೆ. ಇಬ್ಬರು ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ರಾತ್ರಿ ಪೆಟ್ರೋಲ್ ಬಂಕ್ನಲ್ಲಿ ಸಂಭವಿಸಿದ ಸ್ಫೋಟ ದೃಶ್ಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬಸ್ ಸ್ಫೋಟದ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಹೈಡ್ರೋಜನ್ ಸಿಲಿಂಡರ್ ಸ್ಫೋಟ: ಮೂವರು ಕಾರ್ಮಿಕರು ಸಜೀವ ದಹನ