ಕರ್ನಾಟಕ

karnataka

ETV Bharat / bharat

ತಂಜಾವೂರಿನಲ್ಲಿ ನಕಲಿ ಮದ್ಯ ಕುಡಿದು ಇಬ್ಬರು ಮೃತ.. ದೇಹದಲ್ಲಿ ಸೈನೈಡ್ ಅಂಶ ಪತ್ತೆ

ತಮಿಳುನಾಡಿನ ತಂಜಾವೂರಿನಲ್ಲಿ ನಕಲಿ ಮದ್ಯ ಕುಡಿದು ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

By

Published : May 22, 2023, 7:03 PM IST

ತಂಜಾವೂರು ಜಿಲ್ಲಾಧಿಕಾರಿ ದಿನೇಶ್ ಒಲಿವರ್ ಪೊನ್‌ರಾಜ್
ತಂಜಾವೂರು ಜಿಲ್ಲಾಧಿಕಾರಿ ದಿನೇಶ್ ಒಲಿವರ್ ಪೊನ್‌ರಾಜ್

ತಮಿಳುನಾಡು : ಇಲ್ಲಿನ ತಂಜಾವೂರಿನಲ್ಲಿ ನಕಲಿ ಮದ್ಯ ಕುಡಿದು ಇಬ್ಬರು ಸಾವನ್ನಪ್ಪಿದ್ದಾರೆ. ಅವರ ದೇಹದಲ್ಲಿ ಸೈನೈಡ್ ಅಂಶವಿದೆ ಎಂಬುದು ಮರಣೋತ್ತರ ಪರೀಕ್ಷೆಯ ಫಲಿತಾಂಶದಲ್ಲಿ ದೃಢಪಟ್ಟಿದೆ. ತಂಜಾವೂರು ಜಿಲ್ಲೆಯ ಕೀಳ ಅಳಗಂ ಎಂಬಲ್ಲಿ ಸರ್ಕಾರಿ ಮದ್ಯದಂಗಡಿ (TASMAC) ನಡೆಸಲಾಗುತ್ತಿತ್ತು. ಟಾಸ್ಮಾಕ್ ಮದ್ಯದಂಗಡಿ ಬಳಿ ಬಾರ್ ನಡೆಸುತ್ತಿದ್ದರು. ಮೂಲಗಳ ಪ್ರಕಾರ, ಕುಪ್ಪುಸಾಮಿ (68) ಮತ್ತು ವಿವೇಕ್ (36) ಎಂಬ ಇಬ್ಬರು ಬಾರ್‌ನಲ್ಲಿ ಕುಡಿದಿದ್ದರು.

ಕೆಲವು ನಿಮಿಷಗಳ ನಂತರ ಕುಡಿದ ಮತ್ತಿನಲ್ಲಿದ್ದ ಕುಪ್ಪುಸಾಮಿ ಇದ್ದಕ್ಕಿದ್ದಂತೆ ಸಾವನ್ನಪ್ಪಿದರು. ವಿವೇಕ್ ಆರೋಗ್ಯ ಸ್ಥಿತಿಯೂ ಗಂಭೀರವಾಗಿತ್ತು. ವಿವೇಕ್ ಅವರನ್ನು ತಂಜಾವೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರೂ ಮೃತಪಟ್ಟಿದ್ದಾರೆ. ಘಟನೆಯ ಹಿನ್ನೆಲೆ ಅಧಿಕಾರಿಗಳು ಮದ್ಯದಂಗಡಿಗೆ ಸೀಲ್ ಹಾಕಿದ್ದಾರೆ.

ಇಬ್ಬರ ದೇಹದಲ್ಲಿ ಸೈನೈಡ್ ಪದಾರ್ಥಗಳು ಪತ್ತೆ:ತಂಜೈ ಪೂರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರು ಮೃತಪಟ್ಟಿರುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ತಂಜಾವೂರು ಜಿಲ್ಲಾಧಿಕಾರಿ ದಿನೇಶ್ ಒಲಿವರ್ ಪೊನ್‌ರಾಜ್ ಸ್ಥಳಕ್ಕೆ ಧಾವಿಸಿ ಇಬ್ಬರು ಮೃತರ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯ ನಂತರ, ಜಿಲ್ಲಾಧಿಕಾರಿ ದಿನೇಶ್ ಆಲಿವರ್ ಪೊನ್ರಾಜ್, ಇಬ್ಬರ ದೇಹದಲ್ಲಿ ಸೈನೈಡ್ ಪದಾರ್ಥಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ.

ಮೃತಪಟ್ಟವರ ಬಗೆಗೆನ ಹೆಚ್ಚಿನ ಮಾಹಿತಿಯನ್ನು ವಿಧಿವಿಜ್ಞಾನ ಕಚೇರಿಗೆ ಹಂಚಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಪ್ರಕರಣದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿ ಇಬ್ಬರಿಗೆ ಮದ್ಯ ಮಾರಾಟ ಮಾಡಿದ ನೌಕರನನ್ನು ಶೋಧಿಸಿದ್ದಾರೆ.

ಮೃತ ವಿವೇಕ್‌ಗೆ ಕೌಟುಂಬಿಕ ಸಮಸ್ಯೆ: ಇವರಿಬ್ಬರೂ ಆತ್ಮಹತ್ಯೆಗೆ ಯತ್ನಿಸಿದ್ದಾರೆಯೇ ಅಥವಾ ಮದ್ಯದಲ್ಲಿ ಸೈನೈಡ್ ಬೆರೆಸಲು ಯತ್ನಿಸಿದ್ದಾರೆಯೇ ಎಂಬುದನ್ನು ಪೊಲೀಸರು ಶಂಕಿಸಿದ್ದಾರೆ. ಏಕೆಂದರೆ ಮೃತ ವಿವೇಕ್‌ಗೆ ಕೌಟುಂಬಿಕ ಸಮಸ್ಯೆಗಳಿದ್ದು, ಪ್ರತ್ಯೇಕವಾಗಿ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ವಿವೇಕ್ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ಪೊಲೀಸರಿಗೆ ವ್ಯಕ್ತವಾಗಿತ್ತು. ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ.

ತಮಿಳುನಾಡು ನಕಲಿ ಮದ್ಯ ಕೇಸ್..​ಸಾವಿನ ಸಂಖ್ಯೆ 22 ಕ್ಕೇರಿಕೆ : ಇನ್ನೊಂದೆಡೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆ ಸೇರಿದಂತೆ ವಿವಿಧೆಡೆ ನಕಲಿ ಮದ್ಯ ಸೇವಿಸಿ ಮೃತಪಡುತ್ತಿರುವವರ ಸಂಖ್ಯೆ ಮುಂದುವರೆದಿದೆ. (ಮೇ 17-2023) ಮಂಗಳವಾರ ಮತ್ತಿಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 22ಕ್ಕೆ ಏರಿಕೆಯಾಗಿತ್ತು. ವಿಲ್ಲುಪುರಂ ಒಂದರಲ್ಲೇ ಮೂವರು ಮಹಿಳೆಯರು ಸೇರಿ 13 ಮಂದಿ ವಿಷಪೂರಿತ ಮದ್ಯಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿತ್ತು. ಪ್ರಕರಣದ ಹಿನ್ನೆಲೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಹೆಚ್‌ಆರ್‌ಸಿ) ತಮಿಳುನಾಡು ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು.

ಜಿಲ್ಲೆಯ ಮರಕ್ಕನಂನ ಎಕ್ಕಿಯಾರ್ಕುಪ್ಪಂ ಮೀನುಗಾರಿಕಾ ಪ್ರದೇಶದಲ್ಲಿ ಶನಿವಾರ ಸಂಜೆ ಜನರ ಗುಂಪೊಂದು ಮದ್ಯ ಸೇವಿಸಿತ್ತು. ಕೆಲ ಗಂಟೆಗಳ ಬಳಿಕ ಒಟ್ಟು ಮಂದಿ ಸಾವನ್ನಪ್ಪಿದ್ದರು. ಮೃತರನ್ನು ಶಂಕರ್, ಸುರೇಶ್, ಧರಣಿವೇಲ್, ರಾಜಮೂರ್ತಿ, ವಿಜಯನ್, ಮನ್ನಕಟ್ಟಿ, ಮಲರ್ವಿಜ್ಲಿ, ಅಭಿರಾಗಂ, ಕೇಶವ ವೇಲು, ಶಂಕರ್, ವಿಜಯನ್, ರಾಜವೇಲು ಮತ್ತು ಶರತ್ ಕುಮಾರ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:ತಮಿಳುನಾಡು ನಕಲಿ ಮದ್ಯ ಕೇಸ್​: ಸಾವಿನ ಸಂಖ್ಯೆ 22 ಕ್ಕೇರಿಕೆ; ಸರ್ಕಾರಕ್ಕೆ NHRC ನೋಟಿಸ್

ABOUT THE AUTHOR

...view details