ಪಶ್ಚಿಮ ಬಂಗಾಳ:ರೈಲ್ವೆ ಹಳಿ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾಗ ಸ್ಥಳೀಯ ರೈಲು ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಾಯಗೊಂಡ ಘಟನೆ ನಡೆದಿದೆ.
ಹಳಿ ಮೇಲೆ ನಿಂತು ಸೆಲ್ಫಿ ತೆಗೆಯುತ್ತಿದ್ದಾಗ ಡಿಕ್ಕಿ ಹೊಡೆದ ರೈಲು: ಇಬ್ಬರು ಸಾವು - Two people were killed, one injured after being hit by a local train
ಮಿಡ್ನಾಪುರದ ಕೋಸ್ಸೆ ನದಿ ಮೇಲಿನ ರೈಲ್ವೆ ಹಳಿ ಬಳಿ ನಿಂತು ಸೆಲ್ಫಿ ತೆಗೆಯುತ್ತಿದ್ದವರಿಗೆ ಲೋಕಲ್ ಟ್ರೈನ್ ಬಂದು ಗುದ್ದಿದ್ದು ಇಬ್ಬರು ಸಾವನ್ನಪ್ಪಿ, ಓರ್ವ ಗಾಯಗೊಂಡಿದ್ದಾನೆ.
ರೈಲು ಅಪಘಾತ
ನಿನ್ನೆ ಮಿಡ್ನಾಪುರದ ಕೋಸ್ಸೆ ನದಿ ಮೇಲಿನ ರೈಲ್ವೆ ಹಳಿ ಬಳಿ ಮೂವರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಲೋಕಲ್ ಟ್ರೈನ್ ಆಗಮಿಸಿದೆ. ರೈಲು ಬರುವುದನ್ನು ಯುವಕರು ಗಮನಿಸಿಲ್ಲ. ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಒಬ್ಬ ಗಾಯಗೊಂಡಿದ್ದಾನೆ. ಗಾಯಾಳುವನ್ನು ರಕ್ಷಣೆ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.