ಹೈದರಾಬಾದ್:ಇಲ್ಲಿನ ಪಂಜಗುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಪಂಚತಾರಾ ಹೋಟೆಲ್ನಲ್ಲಿ ಜೋಡಿ ಆತ್ಮಹತ್ಯೆಗೆ ಶರಣಾಗಿದೆ. ಮೂಲತಃ ಪುದುಚೇರಿಯವರು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
34 ವರ್ಷದ ವಿಜಯ್ ಕುಮಾರ್ ಹಾಗೂ 36 ವರ್ಷದ ಶ್ಯಾಮಲಾದೇವಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಗಸ್ಟ್ 8ರಂದು ಐಟಿಸಿ ಕಾಕತಿಯಾ ಹೋಟೆಲ್ನಲ್ಲಿ ಇವರು ರೂಂ ಬಾಡಿಗೆ ಪಡೆದುಕೊಂಡಿದ್ದರು. ಇಂದು ಬೆಳಗ್ಗೆ ಆಹಾರ ಆರ್ಡರ್ ಮಾಡಿಲ್ಲ ಜತೆಗೆ ಬೆಳಗ್ಗೆಯಿಂದಲೂ ರೂಂ ಬಾಗಿಲು ಓಪನ್ ಮಾಡದ ಕಾರಣ ಅನುಮಾನದ ಮೇಲೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೋಟೆಲ್ಗೆ ಬಂದ ಪೊಲೀಸರು ಕೋಣೆಯ ಬಾಗಿಲು ಒಡೆದು ಒಳಗೆ ಹೋದಾಗ ಇಬ್ಬರ ಮೃತ ದೇಹ ಪತ್ತೆಯಾಗಿವೆ.