ಕರ್ನಾಟಕ

karnataka

ETV Bharat / bharat

Telangana Omicron: ತೆಲಂಗಾಣದಲ್ಲಿ ಮೊದಲ ಬಾರಿಗೆ ಎರಡು ಒಮಿಕ್ರಾನ್ ಕೇಸ್ ಪತ್ತೆ!

ತೆಲಂಗಾಣದಲ್ಲಿ ಎರಡು ಒಮಿಕ್ರಾನ್ ಸೋಂಕಿತರು ಪತ್ತೆಯಾಗಿದ್ದು, ಎಲ್ಲರೂ ಬೇರೆ ಬೇರೆ ರಾಷ್ಟ್ರಗಳಿಗೆ ಸೇರಿದವರು ಎಂದು ಅರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Two Omicron cases were registered in Telangana
Telangana Omicron: ತೆಲಂಗಾಣದಲ್ಲಿ ಮೊದಲ ಬಾರಿಗೆ ಒಮಿಕ್ರಾನ್ ಕೇಸ್ ಪತ್ತೆ

By

Published : Dec 15, 2021, 11:54 AM IST

ಹೈದರಾಬಾದ್(ತೆಲಂಗಾಣ): ಇದೇ ಮೊದಲ ಬಾರಿಗೆ ತೆಲಂಗಾಣ ರಾಜ್ಯದಲ್ಲಿ ಕೊರೊನಾ ರೂಪಾಂತರ ಒಮಿಕ್ರಾನ್ ಸೋಂಕಿತರು ಪತ್ತೆಯಾಗಿದ್ದಾರೆ. ಕೀನ್ಯಾ ಮೂಲದ 24 ವರ್ಷ ವಯಸ್ಸಿನ ಮಹಿಳೆ ಈ ತಿಂಗಳ 12ರಂದು ತೆಲಂಗಾಣಕ್ಕೆ ಬಂದಿದ್ದು, ಆಕೆಯಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ.

ಹೈದರಾಬಾದ್​ನ ಟೋಲಿಚೌಕಿ ಪ್ರದೇಶದಲ್ಲಿ ಸೋಮಾಲಿಯಾ ಮೂಲದ ಮತ್ತೊಬ್ಬ ವ್ಯಕ್ತಿಗೆ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ. ಇಬ್ಬರೂ ಸೋಂಕಿತರನ್ನು ಚಿಕಿತ್ಸೆಗಾಗಿ ತೆಲಂಗಾಣ ಇನ್ಸ್​ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆ್ಯಂಡ್ ರಿಸರ್ಚ್​ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಂದಹಾಗೆ, ತೆಲಂಗಾಣಕ್ಕೆ ಸೇರಿದ ಯಾವುದೇ ವ್ಯಕ್ತಿಯಲ್ಲಿ ಒಮಿಕ್ರಾನ್ ಸೋಂಕು ಕಂಡುಬಂದಿಲ್ಲ. ಎಲ್ಲರೂ ಬೇರೆ ರಾಷ್ಟ್ರಗಳಿಗೆ ಸೇರಿದ ವ್ಯಕ್ತಿಗಳಾಗಿದ್ದಾರೆ. ನಾಗರಿಕರು ಯಾವುದೇ ಭಯ ಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆ ಅಗತ್ಯ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:ಕೊರೊನಾ ಯಾವಾಗ ಕೊನೆಗೊಳ್ಳುತ್ತದೆ?: ವೈರಾಲಜಿಸ್ಟ್​ ನೀಡಿದ್ರು ಸಿಹಿ ಸುದ್ದಿ

ABOUT THE AUTHOR

...view details