ಕಡಲೂರು (ತಮಿಳುನಾಡು): ಮೂವರು ಬಾಲಕರು ಆಟವಾಡ್ತಿದ್ದ ಸಂದರ್ಭದಲ್ಲಿ ಹಳೇ ಕಾಲದ ಕಟ್ಟಡವೊಂದು ದಿಢೀರ್ ಆಗಿ ಕುಸಿತಗೊಂಡಿದ್ದು, ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ. ಘಟನೆಯಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ತಮಿಳುನಾಡಿನ ಹಳೇ ರಾಮಪುರಂ ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ.
ಕಟ್ಟಡದ ಮೇಲ್ಛಾವಣಿ ಮತ್ತು ಗೋಡೆ ಹಠಾತ್ ಆಗಿ ಕುಸಿತಗೊಂಡಿದೆ. ಈ ವೇಳೆ ಪಕ್ಕದಲ್ಲೇ ಆಟವಾಡುತ್ತಿದ್ದ ಮಕ್ಕಳು ಅವಶೇಷಗಳಡಿ ಸಿಲುಕಿಕೊಂಡಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ 8 ಮತ್ತು 13 ವರ್ಷದ ಬಾಲಕರು ಸಾವಿಗೀಡಾಗಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿರಿ:ಕಿಚ್ಚನ ಅಭಿಮಾನಿಗಳಿಗೆ ನಿರಾಸೆ: 'ವಿಕ್ರಾಂತ್ ರೋಣ' ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆ