ಜೈಪುರ: ರಾಜಸ್ಥಾನ ಸರ್ಕಾರದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಮಂತ್ರಿಗಳ ವಾಕ್ಸಮರ ಮುಂದುವರಿದಿದೆ. ಸಿಎಂ ಅಶೋಕ್ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಕ್ಯಾಬಿನೆಟ್ ಸಭೆಯಲ್ಲಿ ರಾಜ್ಯ ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೋಟಾಸರ ಮತ್ತು ನಗರಾಭಿವೃದ್ಧಿ ಸಚಿವ ಶಾಂತಿ ಧಾರಿವಾಲ್ ನಡುವೆ ಪರಸ್ಪರ ವಾಗ್ಯುದ್ಧ ನಡೆದಿದೆ.
10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆ ನಡೆಸುವುದನ್ನು ನಿರ್ಧರಿಸುವ ಸಲುವಾಗಿ ಇಂದು ಸಿಎಂ ಅಶೋಕ್ ಗೆಹ್ಲೋಟ್ ಸಭೆ ಕರೆದಿದ್ದರು. ಈ ಸಮಯದಲ್ಲಿ ವ್ಯಾಕ್ಸಿನೇಷನ್ ವಿಚಾರ ಕೂಡ ಚರ್ಚಿಸಿಲಾಯಿತು. ದೋಟಸರಾ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಅಭಿಯಾನ ಪ್ರಾರಂಭಿಸಿದೆ ಎಂದು ತಿಳಿಸಿದರು. ಉಚಿತ ವ್ಯಾಕ್ಸಿನೇಷನ್ ಪಡೆಯಲು, ಜಿಲ್ಲಾ ಮಟ್ಟದಲ್ಲಿ ಸಂಗ್ರಾಹಕರಿಗೆ ಜ್ಞಾಪಕ ಪತ್ರ ನೀಡಬೇಕು ಎಂದು ಅಭಿಪ್ರಾಯ ಪಟ್ಟರು.
ಕೂಡಲೇ ಮಧ್ಯಪ್ರವೇಶಿದ ಧಾರಿವಾಲ್, ಜ್ಞಾಪಕ ಪತ್ರ ನೀಡುವ ಅವಶ್ಯಕತೆ ಏನು, ಮಂತ್ರಿಗಳ ಕೆಲಸವು ಜ್ಞಾಪಕ ಪತ್ರವನ್ನು ನೀಡುವುದೇ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿದಾಗ ಮಧ್ಯಪ್ರವೇಶಿಸಿದ ಇತರ ಸಚಿವರು, ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು.