ಅನಂತನಾಗ್ (ಜಮ್ಮು ಮತ್ತು ಕಾಶ್ಮೀರ): ಎರಡು ಸೇನಾ ವಾಹನಗಳು ಅಪಘಾತಕ್ಕೀಡಾಗಿ ಏಳು ಜನ ಯೋಧರು ಗಾಯಗೊಂಡ ಘಟನೆ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಎಲ್ಲ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಲ್ಲಿನ ಶ್ರೀಗಫ್ವಾರಾ ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನ ಈ ಘಟನೆ ಜರುಗಿದೆ. ಅಪಘಾತದಿಂದಾಗಿ ಎರಡು ಸೇನಾ ವಾಹನಗಳು ರಸ್ತೆಯ ಮಧ್ಯದಲ್ಲಿ ಪಲ್ಟಿಯಾಗಿ ಬಿದ್ದಿವೆ. ಅಪಘಾತಕ್ಕೀಡಾದ ಈ ವಾಹನಗಳಲ್ಲಿ ಹಲವಾರು ಸೇನಾ ಸಿಬ್ಬಂದಿ ಇದ್ದರು ಎಂದು ಬಂದಿದೆ.