ಜಮ್ಮು- ಕಾಶ್ಮೀರ :ಉತ್ತರ ಕುಪ್ವಾರ ಜಿಲ್ಲೆಯ ಮಚಿಲ್ ಸೆಕ್ಟರ್‌ನಲ್ಲಿ ಇಂದು ಬೆಳಗ್ಗೆ ಭಾರತದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ. ಈ ಕುರಿತು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡ ಉತ್ತರ ಸೇನಾ ಕಮಾಂಡರ್, "ಮಚಿಲ್ ಸೆಕ್ಟರ್ ಗಡಿ ಪ್ರದೇಶದಲ್ಲಿ ಇಂದು ಬೆಳಗ್ಗೆ ಭಾರತೀಯ ಸೇನೆ, ಬಿಎಸ್‌ಎಫ್ ಮತ್ತು ಜೆ & ಕೆ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಒಳನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ಉಗ್ರಗಾಮಿಗಳು ಕೊಲ್ಲಲಾಗಿದೆ. ನಾಲ್ಕು ಎಕೆ ರೈಫಲ್‌ಗಳು, ಆರು ಹ್ಯಾಂಡ್ ಗ್ರೆನೇಡ್‌ಗಳು ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಪ್ರಗತಿಯಲ್ಲಿದೆ" ಎಂದು ತಿಳಿಸಿದ್ದಾರೆ.
ಪೂಂಚ್‌ನಲ್ಲಿ ಭದ್ರತಾ ಪಡೆಗಳು ನಾಲ್ವರು ಭಯೋತ್ಪಾದಕರನ್ನು ಹತ್ಯೆಗೈದ ಒಂದು ದಿನದ ನಂತರ ಇಂದು ಮತ್ತೆ ಉಗ್ರರ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ.
ಪುಲ್ವಾಮದಲ್ಲಿ ಗುಂಡಿನ ದಾಳಿ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಸಂಗ್ರುಣಿ ಅರಣ್ಯ ಪ್ರದೇಶದಲ್ಲಿ ರಾತ್ರಿ ಗುಂಡಿನ ದಾಳಿ ನಡೆದಿದೆ. ಇಲ್ಲಿನ ಬಗೀಂದರ್ ಸಂಗ್ರುನಿ ಸೇತುವೆಯ ಬಳಿ ಅರಣ್ಯ ಇಲಾಖೆಯ ಗಸ್ತು ಪಡೆ ಮೇಲೆ ಕೆಲವು ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದು, ಘಟನೆಯಿಂದ ಮೊಹಮ್ಕಾ ಫಾರೆಸ್ಟ್‌ನ ಇಬ್ಬರು ನೌಕರರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಗೋಜಿ ಪಥೇರಿ ಬುಡ್ಗಾಮ್‌ನ ಫಾರೆಸ್ಟರ್ ಜಹಾಂಗೀರ್ ಅಹ್ಮದ್ ಚಾಚಿ ಮತ್ತು ಮೊಹಮ್ಕಾ ಫಾರೆಸ್ಟ್‌ನ ತಾತ್ಕಾಲಿಕ ಉದ್ಯೋಗಿ ಇಮ್ರಾನ್ ಯೂಸುಫ್ ವಾನಿ ಮೊನೋಚಾರಿ ಷರೀಫ್ ಎಂದು ಗುರುತಿಸಲಾಗಿದೆ. ಚಿಕಿತ್ಸೆಗಾಗಿ ಇಬ್ಬರನ್ನೂ ಮೊದಲು ಸಿಎಚ್‌ಸಿ ರಾಜಪುರಕ್ಕೆ ಕರೆದೊಯ್ಯಲಾಗಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಎಸ್‌ಎಂಹೆಚ್‌ಎಸ್ ಆಸ್ಪತ್ರೆ ಶ್ರೀನಗರಕ್ಕೆ ಸ್ಥಳಾಂತರಿಸಲಾಗಿದೆ. ಸ್ಥಳೀಯರು ಕೂಡ ಗುಂಡಿನ ದಾಳಿಯನ್ನು ದೃಢಪಡಿಸಿದ್ದು, ಘಟನೆಯನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ.