ಕರ್ನಾಟಕ

karnataka

By

Published : Apr 6, 2022, 11:51 AM IST

Updated : Apr 6, 2022, 12:26 PM IST

ETV Bharat / bharat

ಯುವಕರಿಬ್ಬರ ಮಧ್ಯೆ ಮದುವೆ.. ಸಂಸಾರಕ್ಕೆ ಸೈ ಎಂದ ಭೂಪ, ಮದ್ಯದ ಅಮಲಿನಲ್ಲಿ ಮೈಮರೆತರಾ!?

ಇಬ್ಬರು ಪುರುಷರ ಮಧ್ಯೆ ಮದುವೆಯಾಗಿದೆ. ಕಂಠಪೂರ್ತಿ ಕುಡಿದ ಮತ್ತಿನಲ್ಲಿ ಒಬ್ಬರು ಮತ್ತೊಬ್ಬರಿಗೆ ತಾಳಿ ಕಟ್ಟಿರುವ ವಿಚಿತ್ರ ಘಟನೆ ತೆಲಂಗಾಣದ ಮೇದಕ್​ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

Men Married in Medak, Men got Married after drinking alcohol in Medak, Medak news, ಮೆಡಕ್​ನಲ್ಲಿ ವ್ಯಕ್ತಿಗಳ ನಡುವೆ ಮದುವೆ, ಮೆಡಕ್​ನಲ್ಲಿ ಕುಡಿದ ಅಮಲಿನಲ್ಲಿ ಮದುವೆ ಮಾಡಿಕೊಂಡ ಇಬ್ಬರು ಪುರಷರು, ಮೆಡಕ್​ ಸುದ್ದಿ,
ಮದುವೆ

ಮೇದಕ್​(ತೆಲಂಗಾಣ): ಜಿಲ್ಲೆಯಲ್ಲಿ ಒಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಯುವಕರಿಬ್ಬರ ಮಧ್ಯೆ ಮದುವೆ ನಡೆದಿದ್ದು, ತಾಳಿ ಕಟ್ಟಿಸಿಕೊಂಡಿರುವ ಯುವಕ ಆತನೊಂದಿಗೆ ಸಂಸಾರ ಮಾಡುವುದಾಗಿ ಹಠ ಹಿಡಿದಿದ್ದ ವಿಚಿತ್ರ ಘಟನೆ ಚಿಲಪ್​ಚೆಡ್​ ತಾಲೂಕಿನಲ್ಲಿ ನಡೆದಿದೆ.

ಏನಿದು ಘಟನೆ..ಈ ವಿಚಿತ್ರ ಮತ್ತು ಅಸಹ್ಯ ಘಟನೆ ಮೇದಕ್​ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಚಿಲಪ್​ಚೆಡ್​ ತಾಲೂಕಿನ ಚಂದೂರಿನ ನಿವಾಸಿ 22 ವರ್ಷದ ಆಟೋ ಡ್ರೈವರ್​ಗೆ ಸಂಗಾರೆಡ್ಡಿ ಜಿಲ್ಲೆಯ ಜೋಗಿಪೇಟೆಯ 21 ವರ್ಷದ ಯುವಕನ ಮಧ್ಯೆ ಮದುವೆಯಾಗಿದೆ.

ಸೇಂದಿ ದೋಸ್ತರು​:ಮೊದಲು ಇವರಿಬ್ಬರಿಗೂ ಪರಿಚಯ ಇಲ್ಲ. ಒಂದು ದಿನ ಇವರಿಬ್ಬರು ಕೋಲ್ಚರಂ ತಾಲೂಕಿನ ದುಂಪಲಕುಂಟಾದ ಸೇಂದಿ ಅಂಗಡಿಯಲ್ಲಿ ಕುಡಿಯಲು ಕುಳಿತಿದ್ದರು. ಆಗ ಇಬ್ಬರ ಮಧ್ಯೆ ಪರಿಚಯ ಬೆಳೆದಿದೆ. ಆಗಿನಿಂದಲೂ ಇಬ್ಬರು ಸೇಂದಿ ದೋಸ್ತರಾಗಿದ್ರು ಎನ್ನಲಾಗಿದೆ.

ಓದಿ:ಜ್ಯೋತಿಷಿಯ ಭವಿಷ್ಯ ನಂಬಿ ಮೇಕೆಯೊಂದಿಗೆ ವಿವಾಹವಾದ ಯುವಕ!

ಇಬ್ಬರ ಮಧ್ಯೆ ಮದುವೆ:ಈ ತಿಂಗಳು 1ನೇ ದಿನಾಕದಂದು ಇಬ್ಬರು ಕಂಠ ಪೂರ್ತಿವರೆಗೆ ಕುಡಿದಿದ್ದಾರೆ. ಕುಡಿದ ಮತ್ತಿನಲ್ಲಿ ಚಂದೂರ್​ ಯುವಕನೊಂದಿಗೆ ಜೋಗಿಪೇಟೆ ಯುವಕ ತಾಳಿ ಕಟ್ಟಿಸಿಕೊಂಡಿದ್ದಾನೆ. ಬಳಿಕ ನಡೆದಿದ್ದೇ ಬೇರೆ...

ಸಂಸಾರಕ್ಕೆ ರೆಡಿ:ತಾಳಿ ಕಟ್ಟಿಸಿಕೊಂಡ ಜೋಗಿಪೇಟೆ ಯುವಕ ಸಂಸಾರ ಮಾಡುವುದಕ್ಕೆ ರೆಡಿ ಆಗಿದ್ದಾನೆ. ಚಂದೂರ್​ ಯುವಕನೇ ನನ್ನ ಗಂಡ ಎಂದು ಆತನ ಮನೆಗೆ ಸಂಸಾರಕ್ಕೆ ಹೋಗಿದ್ದಾನೆ. ಅಲ್ಲಿ ಚಂದೂರ್​ ಯುವಕ ಪೋಷಕರು ಜೋಗಿಪೇಟೆ ಯುವಕನಿಗೆ ಬುದ್ಧಿ ಮಾತು ಹೇಳಿದ್ದಾರೆ. ಆದ್ರೂ ಸಹಿತ ಜೋಗಿಪೇಟೆ ಯುವಕ ಸಂಸಾರ ಮಾಡುವುದಾಗಿಯೇ ಹಠ ಹಿಡಿದಿದ್ದನು.

ಹಣಕ್ಕೆ ಬೇಡಿಕೆ: ಚಂದೂರ್​ ಯುವಕನ ಪೋಷಕರು ಜೋಗಿಪೇಟೆ ಯುವಕನಿಗೆ ಕಪಾಳಮೋಕ್ಷ ಮಾಡಿ ಸ್ಥಳದಿಂದ ಕಳುಹಿಸಿದ್ದಾರೆ. ಅಲ್ಲಿಂದ ಆ ಯುವಕ ನೇರ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾನೆ. ಪೊಲೀಸರು ಸ್ಥಳಕ್ಕಾಗಮಿಸಿ ಯುವಕನಿಗೆ ತಿಳಿ ಹೇಳಿದ್ದಾರೆ. ಆಗ ಜೋಗಿಪೇಟೆ ಯುವಕ 1 ಲಕ್ಷ ರೂಪಾಯಿ ಕೊಟ್ರೆ ಮಾತ್ರ ದೂರು ವಾಪಸ್​ ತೆಗೆದುಕೊಳ್ಳುವುದಾಗಿ ಹೇಳಿದ್ದಾನೆ.

ಓದಿ:ವಿದ್ಯಾರ್ಥಿನಿಯ ತಾಳಿ ಬಿಚ್ಚಿಸಿ ಪರೀಕ್ಷೆಗೆ ಕಳಿಸಿದ ಪೋಷಕರು : ಬೆಳಕಿಗೆ ಬಂದ ಬಾಲ್ಯವಿವಾಹ!

ಪಂಚಾಯ್ತಿ ನಡೆದಿದ್ದು ಹೀಗೆ: ಪೊಲೀಸರು ಗ್ರಾಮದ ಹಿರಿಯರು ಮತ್ತು ಇಬ್ಬರು ಯುವಕರ ಪೋಷಕರನ್ನು ಸ್ಥಳಕ್ಕೆ ಕರೆಸಿ ಪಂಚಾಯ್ತಿ ನಡೆಸಿದ್ದಾರೆ. ಸುಮಾರು ಗಂಟೆಗಳ ಕಾಲ ನಡೆದ ಪಂಚಾಯ್ತಿಯಲ್ಲಿ ಜೋಗಿಪೇಟೆ ಕುಟುಂಬಕ್ಕೆ 10 ಸಾವಿರ ರೂಪಾಯಿ ಪರಿಹಾರ ನೀಡುವುದರ ಮೂಲಕ ಈ ಪ್ರಕರಣ ಸುಖಾಂತ್ಯ ಕಂಡಿದೆ.

ದೂರು ವಾಪಸ್​:10 ಸಾವಿರ ಪರಿಹಾರ ಪಡೆದ ಜೋಗಿಪೇಟೆ ಯುವಕ ನೀಡಿರುವ ದೂರನ್ನು ವಾಪಸ್​ ಪಡೆದಿದ್ದಾನೆ ಎಂದು ಚಿಲಪ್‌ಚೇಡ್ ಪೊಲೀಸ್​ ಠಾಣೆಯ ಎಸ್‌ಐ ಮಹಮ್ಮದ್ ಗೌಸ್ ತಿಳಿಸಿದ್ದಾರೆ.


Last Updated : Apr 6, 2022, 12:26 PM IST

ABOUT THE AUTHOR

...view details