ಕರ್ನಾಟಕ

karnataka

ETV Bharat / bharat

ವ್ಯಾಕ್ಸಿನ್​​ ಹಾಕಲು ಬಂದ ಮಹಿಳಾ ಸಿಬ್ಬಂದಿ ಮೇಲೆ ಇಟ್ಟಿಗೆಯಿಂದ ಹಲ್ಲೆ.. ವಿಡಿಯೋ ವೈರಲ್ - ಮಹಿಳಾ ಸಿಬ್ಬಂದಿ ಮೇಲೆ ಇಟ್ಟಿಗೆಯಿಂದ ದಾಳಿ

ಕೋವಿಡ್​ ವ್ಯಾಕ್ಸಿನೇಷನ್ ನೀಡಲು ಬಂದ ಮಹಿಳಾ ಸಿಬ್ಬಂದಿಯೊಬ್ಬರ ಮೇಲೆ ಇಬ್ಬರು ದಾಳಿ ನಡೆಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​​ ಆಗಿದೆ.

Attack on Women health workers
Attack on Women health workers

By

Published : Dec 4, 2021, 8:19 PM IST

ಸೆಹೋರ್​​(ಮಧ್ಯಪ್ರದೇಶ):ಮಹಾಮಾರಿ ಕೊರೊನಾ ವೈರಸ್​ ತಡೆಗಟ್ಟಲು ಕೋವಿಡ್​​ ವ್ಯಾಕ್ಸಿನೇಷನ್​ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಆದರೆ, ಕೆಲವೊಂದು ರಾಜ್ಯಗಳ ಗ್ರಾಮೀಣ ಪ್ರದೇಶದಲ್ಲಿ ಜನರು ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕ್ತಿದ್ದು, ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಿರುವಂತಹ ಘಟನೆ ನಡೆಯುತ್ತಿವೆ. ಸದ್ಯ ಮಧ್ಯಪ್ರದೇಶದಲ್ಲೂ ಅಂತಹದೊಂದು ಪ್ರಕರಣ ನಡೆದಿದ್ದು, ವಿಡಿಯೋ ವೈರಲ್​​​​​​ ಆಗಿದೆ.

ಮಧ್ಯಪ್ರದೇಶದ ಸೆಹೋರ್​​​​ನಲ್ಲಿ ಈ ಘಟನೆ ನಡೆದಿದ್ದು, ವ್ಯಾಕ್ಸಿನೇಷನ್​ ನೀಡಲು ಬಂದಿದ್ದ ಮಹಿಳಾ ಸಿಬ್ಬಂದಿ ಜೊತೆ ಇಬ್ಬರು ಅನುಚಿತವಾಗಿ ವರ್ತಿಸಿದ್ದಾರೆ. ನಸ್ರಲ್ಲಗಂಜ್​​​ನ ನಿಮ್ನಾ ಗ್ರಾಮದಲ್ಲಿ ಲಸಿಕಾ ಅಭಿಯಾನದಡಿ ಮನೆ-ಮನೆಗೆ ತೆರಳಿ ವ್ಯಾಕ್ಸಿನ್​​ ನೀಡಲಾಗುತ್ತಿದೆ. ಈ ವೇಳೆ, ವ್ಯಾಕ್ಸಿನ್​​ ನೀಡಲು ತೆರಳಿದ್ದಾಗ ಮಹಿಳಾ ಸಿಬ್ಬಂದಿ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​​​​ ಆಗಿದೆ.

ವ್ಯಾಕ್ಸಿನ್​​ ಹಾಕಲು ಬಂದ ಮಹಿಳಾ ಸಿಬ್ಬಂದಿ ಮೇಲೆ ಇಟ್ಟಿಗೆಯಿಂದ ಹಲ್ಲೆ

ಇದನ್ನೂ ಓದಿರಿ:ಪ್ರೀತಿಸಿ, ಮೋಸ ಮಾಡಿದ ಯುವಕ.. ಆ್ಯಸಿಡ್ ದಾಳಿ ನಡೆಸಿದ ಯುವತಿ

ವಿಡಿಯೋ ವೈರಲ್​​ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಈಗಾಗಲೇ ಓರ್ವ ವ್ಯಕ್ತಿಯನ್ನ ಬಂಧನ ಮಾಡಿದ್ದಾಗಿ ತಿಳಿಸಿದ್ದಾರೆ. ಹಳ್ಳಿ ಹಳ್ಳಿಗೆ ತೆರಳಿ ಮಹಿಳಾ ಆರೋಗ್ಯ ಸಿಬ್ಬಂದಿ ವ್ಯಾಕ್ಸಿನೇಷನ್​ ನೀಡ್ತಿದ್ದು, ಈ ವೇಳೆ, ಅನೇಕರು ಹಲ್ಲೆ ನಡೆಸಲು ಮುಂದಾಗುವುದು ಸಾಮಾನ್ಯ ಎನ್ನುವಂತಾಗಿದೆ.

ABOUT THE AUTHOR

...view details