ನವದೆಹಲಿ: ಕಳ್ಳರು ತುಂಬಾ ಚಾಲಾಕಿಗಳಾಗಿರುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಇಲ್ಲೊಂದು ಗ್ಯಾಂಗ್ ಎಷ್ಟೊಂದು ಖತರ್ನಾಕ್ ಎಂದರೆ 'ನಮಸ್ತೆ' ಹೇಳಿ ನಂತರ ಜನರನ್ನು ದರೋಡೆ ಮಾಡುತ್ತಿತ್ತು. ಈ 'ನಮಸ್ತೆ' ಗ್ಯಾಂಗ್ನ ಇಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ವಿವೇಕ್ ವಿಹಾರ ಠಾಣಾ ವ್ಯಾಪ್ತಿಯಲ್ಲಿ 'ನಮಸ್ತೆ' ಗ್ಯಾಂಗ್ನ ಇಬ್ಬರು ಖದೀಮರು ಸಂಚರಿಸುತ್ತಿದ್ದಾಗ ಪೊಲೀಸರು ತಡೆಯಲು ಯತ್ನಿಸಿದ್ದಾರೆ. ಆದರೆ, ಖದೀಮರು ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾರೆ. ಆಗ ಪೊಲೀಸರು ಕೂಡ ಪ್ರತಿ ದಾಳಿ ಮಾಡಿದ್ದು, ಎರಡೂ ಕಡೆಗಳಿಂದಲೂ ಎನ್ಕೌಂಟರ್ ಶುರುವಾಗಿದೆ. ಈ ಸಂದರ್ಭದಲ್ಲಿ ಓರ್ವನ ಕಾಲಿಗೆ ಗುಂಡು ಹಾರಿಸಿ, ಇಬ್ಬರನ್ನೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.