ಕರ್ನಾಟಕ

karnataka

ETV Bharat / bharat

ಕುಲ್ಗಾಮ್​ನಲ್ಲಿ ಎನ್​ಕೌಂಟರ್..​ ಎಲ್​ಇಟಿಯ ಇಬ್ಬರು ಉಗ್ರರು ಹತ​ - Two LeT militants killed

ಜಮ್ಮು ಕಾಶ್ಮೀರದ ಕುಲ್ಗಾಮ್​ ಜಿಲ್ಲೆಯಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಎಲ್​ಇಟಿಯ ಇಬ್ಬರು ಉಗ್ರರನ್ನು ಸೈನಿಕರು ಬೇಟೆಯಾಡಿದ್ದಾರೆ.

militants-killed
ಉಗ್ರರು ಎನ್​ಕೌಂಟರ್​

By

Published : May 8, 2022, 3:52 PM IST

ಶ್ರೀನಗರ:ಜಮ್ಮು ಕಾಶ್ಮೀರದ ಬಂಡಿಪೋರಾದಲ್ಲಿ ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ (ಹೆಚ್‌ಎಂ) ಸಂಘಟನೆಯ ಉಗ್ರರನ್ನು ಬಂಧಿಸಿದ ಬಳಿಕ, ಕುಲ್ಗಾಮ್ ಜಿಲ್ಲೆಯ ದೇವ್‌ಸರ್ ಪ್ರದೇಶದಲ್ಲಿ ಲಷ್ಕರ್​ -ಇ- ತೊಯ್ಬಾ(ಎಲ್​ಇಟಿ) ಸಂಘಟನೆಯ ಇಬ್ಬರು ಉಗ್ರರನ್ನು ಯೋಧರು ಹೊಡೆದುರುಳಿಸಿದ್ದಾರೆ.

ಕುಲ್ಗಾಮ್​ ಜಿಲ್ಲೆಯ ದೇವ್​ಸರ್‌ನ ಚೆಯಾನ್ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ತಿಳಿದ ಪೊಲೀಸರು, ಮತ್ತು ಸಿಆರ್‌ಪಿಎಫ್ ಯೋಧರು ಕಾರ್ಯಾಚರಣೆ ಪ್ರಾರಂಭಿಸಿದರು. ಈ ವೇಳೆ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದಾಗ ಯೋಧರೂ ಸಹ ಪ್ರತಿದಾಳಿ ನಡೆಸಿದರು.

ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಇದರಲ್ಲಿ ಒಬ್ಬ ವಿದೇಶಿಗನೂ ಇದ್ದಾನೆ. ಹತನಾದ ಎಲ್​ಇಟಿ ಉಗ್ರನನ್ನು ಹೈದರ್​ ಎಂದು ಗುರುತಿಸಲಾಗಿದೆ. ಎನ್​ಕೌಂಟರ್​ ಬಳಿಕ ಸ್ಥಳದಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಓದಿ:ಜಮ್ಮು-ಕಾಶ್ಮೀರ : ಇಬ್ಬರು ಹೈಬ್ರೀಡ್ ಭಯೋತ್ಪಾದಕರ ಬಂಧನ

ABOUT THE AUTHOR

...view details