ಕರ್ನಾಟಕ

karnataka

ETV Bharat / bharat

ಅಟ್ಟುಕಲ್ ಪೊಂಗಲ್: ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂದು ದೇವಿಗೆ ಮೊರೆಯಿಟ್ಟ ಪುಟಾಣಿಗಳು.. - Attukal Bhagwati Temple

ಕೇರಳದ ತಿರುವನಂತಪುರಂನ ಅಟ್ಟುಕಲ್ ದೇವಿಗೆ ಪೊಂಗಲ್ ಅರ್ಪಿಸಿದ ಇಬ್ಬರು ಮಕ್ಕಳು - ರಾಹುಲ್ ಗಾಂಧಿ ಭಾರತದ ಪ್ರಧಾನಿಯಾಗಬೇಕೆಂದು ದೇವಿಗೆ ದೊಡ್ಡ ಬೇಡಿಕೆ ಸಲ್ಲಿಸಿದ ಇಬ್ಬರು ಪುಟಣಿಗಳು.

Rahul Gandhi to be the Prime Minister of India
ಅಟ್ಟುಕಲ್ ಪೊಂಗಲ್

By

Published : Mar 7, 2023, 4:42 PM IST

ತಿರುವನಂತಪುರಂ (ಕೇರಳ):'ಅಟ್ಟುಕಲ್ ಪೊಂಗಲ್' ವಿಶ್ವದ ಮಹಿಳೆಯರ ಅತಿದೊಡ್ಡ ಧಾರ್ಮಿಕ ಸಭೆಗಳಲ್ಲಿ ಒಂದಾಗಿದೆ. ಅಟ್ಟುಕಲ್ ದೇವಿ ದೇವಸ್ಥಾನವು "ಮಹಿಳಾ ಶಬರಿಮಲೆ" ಎಂದು ಜನಪ್ರಿಯವಾಗಿದೆ. ಇಲ್ಲಿ ಪ್ರತಿವರ್ಷ ಲಕ್ಷಾಂತರ ಮಹಿಳಾ ಭಕ್ತರು ದೇವರಿಗೆ ಪೊಂಗಲ್ ಅನ್ನು ಅರ್ಪಿಸಲು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಮಹಿಳೆಯರು ಇಲ್ಲಿಗೆ ಆಗಮಿಸಿ ತಮ್ಮ ಇಷ್ಟಾರ್ಥಗಳನ್ನು ಪೂರೈಸಲು ಪೊಂಗಲ ಸಲ್ಲಿಸುವುದು ವಾಡಿಕೆ.

ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂದು ದೇವಿಗೆ ಮೊರೆಯಿಟ್ಟ ಪುಟಾಣಿಗಳು..

ದೇವಿಯ ಮುಂದೆ ದೊಡ್ಡ ಬೇಡಿಕೆ ಇರಿಸಿದ ಮಕ್ಕಳು:ಈ ಬಾರಿ ಅಟ್ಟುಕಲ್ ದೇವಿಯ ಮುಂದೆ ಇಬ್ಬರು ಮಕ್ಕಳು ಪೊಂಗಲ್​ ಅನ್ನು ಸಿದ್ಧಪಡಿಸುವ ಮೂಲಕ ರಾಷ್ಟ್ರಮಟ್ಟದ ವಿಷಯವನ್ನು ಪ್ರಸ್ತಾಪಿಸಿದ್ದು ವಿಶೇಷವಾಗಿದೆ. ಈ ಪುಟಣಿಗಳು ರಾಹುಲ್ ಗಾಂಧಿ ಭಾರತದ ಪ್ರಧಾನಿಯಾಗಬೇಕು ಎಂಬ ದೊಡ್ಡ ಬೇಡಿಕೆಯನ್ನೇ ದೇವಿಯ ಮುಂದೆ ಇರಿಸಿದ್ದಾರೆ. ನಿವೇದ್ಯಾ ಮತ್ತು ನಿವೇದ್ ತಿರುವನಂತಪುರದ ಚೆರಿಯತುರಾ ನಿವಾಸಿ ಹೈದರಾಲಿಯ ಮಕ್ಕಳಿವರು.

ಭಾರತ್ ಜೋಡೋ ಯಾತ್ರೆ ತಿರುವನಂತಪುರಂ ತಲುಪಿದಾಗ ಇಬ್ಬರೂ ಪುಟಾಣಿಗಳು ರಾಹುಲ್ ಗಾಂಧಿ ಅವರನ್ನು ಭೇಟಿಯಾದ್ದರು. ಆ ದಿನ ಇಬ್ಬರನ್ನೂ ಕಾಂಗ್ರೆಸ್ ನಾಯಕರು ಅಭಿನಂದಿಸಿದ್ದಾರೆ. ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರದವರೆಗೆ ರಾಹುಲ್ ಗಾಂಧಿ ಅವರು ಬಡವರ ಅಭ್ಯುದಯಕ್ಕಾಗಿ ಭಾರತ್ ಜೋಡೋ ಯಾತ್ರೆ ಮಾಡಿದರು ಎಂದು ಮಕ್ಕಳು ಹೇಳುತ್ತಾರೆ.

ಇದು ಮಹಿಳಾ ಶಬರಿಮಲೆ:2009ರಲ್ಲಿ ಒಂದೇ ದಿನದಲ್ಲಿ 2.5 ಮಿಲಿಯನ್ ಜನರು ಭಾಗವಹಿಸಿದ್ದ, ಇದು ಮಹಿಳೆಯರ ಅತಿದೊಡ್ಡ ಧಾರ್ಮಿಕ ಸಭೆಯಾಗಿದೆ. ಈ ಮಹಿಳೆಯರ ಮಹಾ ಸಂಗಮವು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​ನಲ್ಲಿ ದಾಖಲಾಗಿದೆ. ಸ್ಥಳೀಯ ದಂತಕಥೆಯ ಪ್ರಕಾರ, ವಾರ್ಷಿಕ ಹಬ್ಬವು ತನ್ನ ಪತಿ ಕೋವಲನ್‌ಗೆ ಉಂಟಾದ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳಲು ಹೋಗುತ್ತಿರುವಾಗ, ತಮಿಳು ಮಹಾಕಾವ್ಯ 'ಸಿಲಪ್ಪಧಿಕಾರಂ'ನ ನಾಯಕಿಯ ದೈವಿಕ ಅವತಾರತಾಳಿದ ದೇವಿಗೆ ಸ್ಥಳೀಯ ಮಹಿಳೆಯರು ನೀಡಿದ ಆತಿಥ್ಯವನ್ನು ನೆನಪಿಸುತ್ತದೆ. ಇಲ್ಲಿರುವ ಅಟ್ಟುಕಲ್ ದೇವಸ್ಥಾನವನ್ನು "ಮಹಿಳಾ ಶಬರಿಮಲೆ" ಎಂದು ಕರೆಯಲಾಗುತ್ತದೆ. ಏಕೆಂದರೆ ಮಹಿಳೆಯರು ಮಾತ್ರ ವಿಶೇಷ ಆಚರಣೆಗಳನ್ನು ಮಾಡುತ್ತಾರೆ. ಆದರೆ, ಮುಖ್ಯವಾಗಿ ಪುರುಷರು ಶಬರಿಮಲೆಯಲ್ಲಿರುವ ಅಯ್ಯಪ್ಪನ ಬೆಟ್ಟಕ್ಕೆ ತೀರ್ಥಯಾತ್ರೆ ಕೈಗೊಳ್ಳುತ್ತಾರೆ.

ಅಟ್ಟುಕಲ್ ಭಗವತಿ ದೇವಸ್ಥಾನದಲ್ಲಿ ಸಂಭ್ರಮದ ಉತ್ಸವ:ಕೇರಳದ ತಿರುವನಂತಪುರಂನಲ್ಲಿರುವ ಪ್ರಸಿದ್ಧವಾದ ಯಾತ್ರಾ ಸ್ಥಳ ಅಟ್ಟುಕಲ್ ಭಗವತಿ ದೇವಸ್ಥಾನ ಹಾಗೂ ವಾರ್ಷಿಕ ಪೊಂಗಲ ಹಬ್ಬಕ್ಕೆ ಹೆಸರುವಾಸಿಯಾಗಿದೆ. ಅಟ್ಟುಕಲ್ ಪೊಂಗಲವು ತಿರುವನಂತಪುರಂನಲ್ಲಿ ಮಹಿಳೆಯರು ಮಾತ್ರ ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ. ಈ ಹಬ್ಬವನ್ನು ಅಟ್ಟುಕಲ್ ಭಗವತಿ ದೇವಿಗೆ ಸಮರ್ಪಿಸಲಾಗಿದೆ. ಅಟ್ಟುಕಲ್ ಭಗವತಿಗೆ ದೇವಿ ಕನ್ನಕಿ ಅಥವಾ ಭದ್ರಕಾಳಿ ಎಂದೂ ಈ ಭಾಗದ ಭಕ್ತರು ಕರೆಯುತ್ತಾರೆ. ಪ್ರತಿವರ್ಷ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಅಟ್ಟುಕಲ್ ಭಗವತಿ ದೇವಸ್ಥಾನದಲ್ಲಿ 10 ದಿನಗಳವರೆಗೆ ಸಂಭ್ರಮದ ಉತ್ಸವ ನಡೆಯುತ್ತದೆ. ಮಲಯಾಳಂ ಕ್ಯಾಲೆಂಡರ್ ಪ್ರಕಾರ, ಕುಂಭಂ ತಿಂಗಳಲ್ಲಿ ಆರಂಭವಾಗುತ್ತದೆ.

ಪೊಂಗಲ್ ಆಚರಣೆಯ ಇತಿಹಾಸವೇನು? :ಕನ್ನಕಿ ದೇವಿಯು ಜ್ಞಾನದ ದೇವತೆಯಾದ ಸರಸ್ವತಿ, ಸಂಪತ್ತಿನ ಅಧಿದೇವತೆ ಲಕ್ಷ್ಮಿ ಹಾಗೂ ಶಕ್ತಿ, ಇಚ್ಛೆಯ ದೇವತೆಯಾದ ಕಾಳಿಯ ಶಕ್ತಿಯ ಪ್ರತಿರೂಪ. ಕನ್ನಕಿ ದೇವಿಯು ತನ್ನ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಶಕ್ತಿ ದೇವತೆ. ಹಬ್ಬ ದಿನದಂದು ಭಕ್ತರು ಕನ್ನಕಿ ದೇವಿಗೆ ಬಳೆಗಳನ್ನು ಅರ್ಪಿಸುವುದು ವಾಡಿಕೆ. ಪೂರಂ ಎಂದು ಕರೆಯಲಾಗುವ 9ನೇ ದಿನದಂದು, ದೇವಸ್ಥಾನಕ್ಕೆ ಸಮುದ್ರೋಪಾದಿಯಲ್ಲಿ ಹರಿದು ಬರುವ ಭಕ್ತರು, ವಿವಿಧ ಆಚರಣೆಗಳು ಮತ್ತು ವಿಧಿವಿಧಾನಗಳನ್ನು ನೆರವೇರಿಸುತ್ತಾರೆ. ಹಬ್ಬದ ಹಿನ್ನೆಲೆ ಅಕ್ಕಿ, ಬೆಲ್ಲ, ತುಪ್ಪ ಮತ್ತು ತೆಂಗಿನಕಾಯಿಯಿಂದ ಮಾಡಿದ ಸಿಹಿ ಖಾದ್ಯವಾದ ಪೊಂಗಲ್​ ಅನ್ನು ಮಹಿಳಾ ಭಕ್ತರೆಲ್ಲರೂ ದೇವಸ್ಥಾನದಲ್ಲಿ ಮಣ್ಣಿನ ಮಡಕೆಗಳಲ್ಲಿ ಸಿದ್ಧಪಡಿಸುವುದು ಈ ಭಾಗದ ಸಂಪ್ರದಾಯ.

18ನೇ ಶತಮಾನದ ಕೊನೆಯಲ್ಲಿ ಪೊಂಗಲ್ ಆಚರಣೆ ಆರಂಭ:1997ರಲ್ಲಿ ಸುಮಾರು 1.5 ದಶಲಕ್ಷ ಮಹಿಳೆಯರು ಪೊಂಗಲ್​ ತಯಾರಿಕೆಯಲ್ಲಿ ಪಾಲ್ಗೊಂಡಿದ್ದರು. 2009ರಲ್ಲಿ ಸುಮಾರು 2.5 ಮಿಲಿಯನ್ ಭಕ್ತೆಯರು ಬಹುನಿರೀಕ್ಷಿತ ಉತ್ಸವಕ್ಕೆ ಭಾಗವಹಿಸಿ ಗಿನ್ನೆಸ್ ದಾಖಲೆ ನಿರ್ಮಿಸಿದರು. ಅಟ್ಟುಕಲ್ ದೇವಸ್ಥಾನವು ಸುಮಾರು 300 ವರ್ಷಗಳ ಹಿಂದೆಯೇ ಪ್ರಮುಖ ಯಾತ್ರಾ ಕೇಂದ್ರವಾಗಿತ್ತು. ತಿರುವನಂತಪುರಂ ಪ್ರದೇಶವು ಹಿಂದಿನ ತಿರುವಾಂಕೂರು ಸಾಮ್ರಾಜ್ಯದ ರಾಜಧಾನಿಯಾದ ಸಂದರ್ಭದಲ್ಲಿ ಅಂದ್ರೆ, 18ನೇ ಶತಮಾನದ ಕೊನೆಯಲ್ಲಿ ಪೊಂಗಲ್ ಆಚರಣೆ ಮತ್ತು ಐತಿಹಾಸಿಕ ದೇವಾಲಯವಿರುವ ಹಿನ್ನೆಲೆ ತುಂಬಾ ಜನಪ್ರಿಯವಾಗಿದೆ.

ಇದನ್ನೂ ಓದಿ:ನಿಷ್ಕ್ರಿಯ ಉಪಗ್ರಹ ಭೂಮಿಗಿಳಿಸುವ ಕಾರ್ಯಾಚರಣೆ ಇಂದು: ಇಸ್ರೋ ಸಕಲ ಸಿದ್ಧತೆ

ABOUT THE AUTHOR

...view details