ಕಾಂದಿವಲಿ(ಮಹಾರಾಷ್ಟ್ರ): ಎರಡು ಮನೆಗಳು ಕುಸಿದು ಓರ್ವ ಸಾವನ್ನಪ್ಪಿ, ಮೂವರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಪಶ್ಚಿಮ ಕಾಂದಿವಲಿ ಪ್ರದೇಶದಲ್ಲಿರುವ 'ಉತ್ತರ ಭಾರತೀಯ ಸೇವಾ ಸಂಘ ಚಾಲ್'ನಲ್ಲಿ ಸಂಭವಿಸಿದೆ. ಪೊಲೀಸರು, ಅಗ್ನಿಶಾಮಕ ದಳ ಹಾಗೂ ಇತರ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ಮುಂಬೈ ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಎರಡು ಮನೆಗಳು ಕುಸಿದು ಓರ್ವ ಸಾವು, ಮೂವರಿಗೆ ಗಾಯ - ಕಾಂದಿವಲಿಯಲ್ಲಿ ಮನೆಗಳು ಕುಸಿದು ಓರ್ವ ಸಾವು
ಮಹಾರಾಷ್ಟ್ರದ ಪಶ್ಚಿಮ ಕಾಂದಿವಲಿ ಪ್ರದೇಶದಲ್ಲಿ ಎರಡು ಮನೆಗಳು ಕುಸಿದ ಪರಿಣಾಮ ಓರ್ವ ಸಾವನ್ನಪ್ಪಿ, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಎರಡು ಮನೆಗಳು ಕುಸಿದು ಓರ್ವ ಸಾವು, ಇಬ್ಬರಿಗೆ ಗಾಯ
ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ನಾಲ್ವರನ್ನು ರಕ್ಷಿಸಲಾಗಿದ್ದು, ಗಾಯಗೊಂಡವರಲ್ಲಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದ್ದಾರೆ. ಒಬ್ಬರು ಸಾವನ್ನಪ್ಪಿದ್ದಾರೆ. ಜೆಸಿಬಿ ಯಂತ್ರದ ಸಹಾಯದಿಂದ ಕಾಮಗಾರಿಯೊಂದನ್ನು ನಡೆಸುವ ವೇಳೆ ಮನೆಗಳು ಕುಸಿದಿವೆ. ಬಿಎಂಸಿ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂದು ಸ್ಥಳೀಯ ಕಾರ್ಪೊರೇಟರ್ ಕಮಲೇಶ್ ಯಾದವ್ ಆರೋಪಿಸಿದ್ದಾರೆ.
ಇದನ್ನೂ ಓದಿ:ಡಿಸಿ ಮೇಲೆ ಪ್ಯಾರ್.. ಜಿಲ್ಲಾಧಿಕಾರಿ ಕಚೇರಿ ಮುಂದೆ ಯುವತಿಯ ರಂಪಾಟ