ಮುಂಬೈ(ಮಹಾರಾಷ್ಟ್ರ) :ಕೋವಿಡ್-19 ಹಿನ್ನೆಲೆ 10 ಮತ್ತು 12ನೇ ತರಗತಿಗಳಿಗೆ ಆನ್ಲೈನ್ ಪರೀಕ್ಷೆ ನಡೆಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಪ್ರೇರೇಪಿಸಿದ ಆರೋಪದ ಮೇಲೆ ಪ್ರಸಿದ್ಧ ಯೂಟ್ಯೂಬರ್ 'ಹಿಂದೂಸ್ಥಾನಿ ಭಾವು ಯಾನೆ ವಿಕಾಸ್ ಪಾಠಕ್' ಸೇರಿದಂತೆ ಇಬ್ಬರನ್ನು ಧಾರಾವಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತ ಎರಡನೇ ಆರೋಪಿಯನ್ನು ಇಕ್ರಾರ್ ಖಾನ್ ವಖಾರ್ ಖಾನ್ ಎಂದು ಗುರುತಿಸಲಾಗಿದೆ. ಹಿಂದೂಸ್ತಾನಿ ಭಾವು ತನ್ನ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು, ಅದರಲ್ಲಿ ಮಹಾರಾಷ್ಟ್ರದ ಶಿಕ್ಷಣ ಸಚಿವ ವರ್ಷಾ ಗಾಯಕ್ವಾಡ್ ಅವರ ನಿವಾಸದ ಬಳಿಯಿರುವ ಧಾರಾವಿ ಪ್ರದೇಶದಲ್ಲಿ ಪ್ರತಿಭಟಿಸಲು ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವಂತೆ ಅವರು ಹೇಳಿದ್ದಾರೆ.
ಕೋವಿಡ್ನಿಂದ ಅನೇಕ ಸಾವುಗಳು ಸಂಭವಿಸಿವೆ. ಈಗ ಒಮಿಕ್ರಾನ್ ರೂಪಾಂತರ ಬಂದಿದೆ. ಸರ್ಕಾರ ಮನೆಯಲ್ಲಿಯೇ ಇದ್ದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಹೇಳುತ್ತಿದೆ. ಆದ್ದರಿಂದ ಆಫ್ಲೈನ್ ಪರೀಕ್ಷೆ ನಡೆಸುವ ಮೂಲಕ ಮಕ್ಕಳ ಆರೋಗ್ಯವನ್ನು ಏಕೆ ಅಪಾಯಕ್ಕೆ ತಳ್ಳುತ್ತಿದ್ದಾರೆ ಎಂದು ಅವರು ವಿಡಿಯೋದಲ್ಲಿ ಪ್ರಶ್ನಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ