ಕರ್ನಾಟಕ

karnataka

ETV Bharat / bharat

ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಔಷಧ​ ಮಾರಾಟ: ಇಬ್ಬರ ಬಂಧನ - ವಿಜಯವಾಡ ರೆಮಿಡೆಸಿವರ್​ ಮಾರಾಟ

ಆರೋಪಿಗಳು ಬ್ಲಾಕ್​​ ಮಾರ್ಕೆಟ್​ನಲ್ಲಿ ನಕಲಿ ರೆಮ್ಡಿಸಿವಿರ್​​ ಔಷಧಗಳನ್ನು ಮಾರಾಟ ಮಾಡುತ್ತಿದ್ದರು ಎಂದು ವಿಜಯವಾಡ ಪೊಲೀಸ್​ ಕಮಿಷನರ್​​ ತಿಳಿಸಿದ್ದಾರೆ.

ರೆಮಿಡೆಸಿವರ್​
ರೆಮಿಡೆಸಿವರ್​

By

Published : Apr 29, 2021, 7:28 AM IST

ವಿಜಯವಾಡ (ಆಂಧ್ರಪ್ರದೇಶ):ನಕಲಿ ರೆಮ್ಡಿಸಿವಿರ್​ ಔಷಧವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ವಿಜಯವಾಡ ಪೊಲೀಸರು, ರೋಗಿಗಳಿಗೆ ಆಪತ್‌ಕಾಲದಲ್ಲಿ ತುರ್ತಾಗಿ ಬೇಕಿರುವ ಚುಚ್ಚುಮದ್ದುಗಳನ್ನು ವಶಪಡಿಸಿಕೊಂಡಿದ್ದಾರೆ.

ಭಾನುಪ್ರತಾಪ್​​, ವೀರಬಾಬು ಬಂಧಿತ ಆರೋಪಿಗಳು. ಇವರು ಬ್ಲಾಕ್​​ ಮಾರ್ಕೆಟ್​ನಲ್ಲಿ ನಕಲಿ ರೆಮ್ಡಿಸಿವಿರ್​​ ಔಷಧಗಳನ್ನು ಮಾರಾಟ ಮಾಡುತ್ತಿದ್ದರು.

ಭಾನುಪ್ರತಾಪ್​​ ಇಲ್ಲಿನ ಮಂಗಳಗಿರಿಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದು, ಹೈದರಾಬಾದ್​​ನ ಪವನ್​​ ಎಂಬಾತನಿಂದ 52 ಸಾವಿರ ರೂ.ಗೆ ನಾಲ್ಕು ನಕಲಿ ಔಷಧಿಗಳನ್ನು ಖರೀದಿಸಿದ್ದ. ಇವುಗಳಲ್ಲಿ ಎರಡನ್ನು ಇಲ್ಲಿನ ವೈದ್ಯಕೀಯ ಪ್ರತಿನಿಧಿ ವೀರಬಾಬುಗೆ ಒಂದಕ್ಕೆ 27 ಸಾವಿರ ರೂ.ನಂತೆ ಮಾರಾಟ ಮಾಡಿದ್ದಾನೆ. ಬಳಿಕ ವೀರಬಾಬು ಒಂದಕ್ಕೆ 37 ಸಾವಿರ ರೂ.ನಂತೆ ಮಾರಾಟ ಮಾಡಲು ಯತ್ನಿಸಿದ್ದ ಎಂದು ಆಯುಕ್ತ ಬಿ. ಶ್ರೀನಿವಾಸ್​ ತಿಳಿಸಿದ್ದಾರೆ.

ABOUT THE AUTHOR

...view details