ಕರ್ನಾಟಕ

karnataka

ETV Bharat / bharat

ಕಿರುಕುಳ ಆರೋಪ: ತಾಜ್​ಮಹಲ್​ನಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ - ವಿಡಿಯೋ - ಉತ್ತರ ಪ್ರದೇಶ

ತಾಜ್​ಮಹಲ್ ಆವರಣದಲ್ಲೇ ಪ್ರವಾಸಿಗರು ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ತಾಜ್​ಮಹಲ್​ನಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ
Two groups clashed over molestation in the Taj Mahal campus

By

Published : Mar 29, 2021, 11:12 AM IST

ಆಗ್ರಾ (ಉತ್ತರ ಪ್ರದೇಶ): ಆಗ್ರಾದಲ್ಲಿರುವ ಪ್ರೇಮಸೌಧ ತಾಜ್​ಮಹಲ್ ವೀಕ್ಷಣೆಗೆ ಬಂದಿದ್ದ ಎರಡು ಗುಂಪುಗಳ ಪ್ರವಾಸಿಗರ ನಡುವೆ ನಿನ್ನೆ ಸಂಜೆ ಗಲಾಟೆ ನಡೆದಿದೆ.

ತಾಜ್​ಮಹಲ್​ನಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ

ಕೆಲ ಯುವತಿಯರಿಗೆ ಒಂದು ಗುಂಪಿನ ಪ್ರವಾಸಿಗರು ಕಿರುಕುಳ ನೀಡಿದ್ದಾರೆ ಎಂಬ ವಿಚಾರಕ್ಕೆ ತಾಜ್​ಮಹಲ್ ಆವರಣದಲ್ಲೇ ಜಗಳ ನಡೆದಿದೆ ಎಂದು ಹೇಳಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಯುವಕರು ಮಾತ್ರವಲ್ಲ, ಯುವತಿಯರೂ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿರುವುದು ಕಂಡು ಬಂದಿದೆ.

ಇದನ್ನೂ ಓದಿ: ದೇಶದಲ್ಲಿ ನಿನ್ನೆ 68 ಸಾವಿರ ಪ್ರಕರಣ​, 291 ಸಾವು.. ಒಟ್ಟು 6 ಕೋಟಿ ಮಂದಿಗೆ ಲಸಿಕೆ

ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಹಾಗೂ ತಾಜ್​ಮಹಲ್ ಸಿಬ್ಬಂದಿ ಬಂದು ಜಗಳ ಶಾಂತಗೊಳಿಸಿದ್ದಾರೆ. ಈ ಪ್ರವಾಸಿಗರು ಪಂಜಾಬ್ ಮತ್ತು ದೆಹಲಿಯಿಂದ ಬಂದವರಾಗಿದ್ದಾರೆ. ಇನ್ನು ಘಟನೆ ಸಂಬಂಧ ಯಾರೂ ಪೊಲೀಸರಿಗೆ ದೂರು ನೀಡಿಲ್ಲ.

ABOUT THE AUTHOR

...view details