ಕರ್ನಾಟಕ

karnataka

ETV Bharat / bharat

ಮೀರತ್​​ನಲ್ಲಿ ಪ್ರೀತಿಸಿ ಮದುವೆಯಾದ ಯುವತಿಯರು; ಪೋಷಕರಿಂದ ಥಳಿತ

ಶೀರ್ಷಿಕೆ ನೋಡಿ ಕೆಲವರು ಮೂಗಿನ ಮೇಲೆ ಬೆರಳಿಟ್ಟು, ಎಂಥಾ ಕಾಲ ಬಂತಯ್ಯಾ ಎನ್ನಬಹುದು. ಆದ್ರೆ, ನಮ್ಮ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಅಲ್ಲೊಂದು ಇಲ್ಲೊಂದು ಎಂಬಂತೆ ಇಂಥ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅಭಿವೃದ್ಧಿ ಹೊಂದಿದ ಅಥವಾ ಇತರೆ ದೇಶಗಳಲ್ಲಿ ಈ ರೀತಿಯ ಪ್ರಕರಣಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಭಾರತದಲ್ಲಿ ಸದ್ಯಕ್ಕಂತೂ ಸಲಿಂಗ ವಿವಾಹದ ಸಲುವಾಗಿ ಯಾವುದೇ ಕಾನೂನುಗಳಿಲ್ಲ.

two girls got married in UP
two girls got married in UP

By

Published : Jun 30, 2022, 4:06 PM IST

ಮೀರತ್​(ಉತ್ತರ ಪ್ರದೇಶ):ಸಲಿಂಗ ವಿವಾಹ (Same Sex Marriage) ಈಗೀಗ ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದು, ಭಾರತೀಯ ಸಂಪ್ರದಾಯದಲ್ಲಿ ಇದಕ್ಕೆ ಮನ್ನಣೆ ಇಲ್ಲ. ತಮ್ಮ ಕುಟುಂಬಸ್ಥರಿಗೆ ಗೊತ್ತಿಲ್ಲದ ರೀತಿಯಲ್ಲಿ ಯುವತಿಯರು ಮದುವೆಯಾಗಿರುವ ಅನೇಕ ನಿದರ್ಶನಗಳಿವೆ. ಇದೀಗ ಉತ್ತರ ಪ್ರದೇಶದ ಮೀರತ್​​ನಲ್ಲೂ ಇದೇ ರೀತಿಯ ಪ್ರಕರಣ ನಡೆದಿದೆ.

ಒಂದೇ ಕಾಲೇಜಿ​​ನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿಯರಿಬ್ಬರು ಪರಸ್ಪರ ಪ್ರೀತಿಸಿ, ಮದುವೆಯೂ ಆಗಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದು ಕೋಪಗೊಂಡ ಕುಟುಂಬಸ್ಥರು ಯುವತಿಯರನ್ನು ಥಳಿಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಓರ್ವ ಯುವತಿ ಶಾಸ್ತ್ರಿನಗರದ ನಿವಾಸಿಯಾಗಿದ್ದಾಳೆ. ಮತ್ತೋರ್ವಳು ಲಾಲ್ಕುರ್ತಿಯವಳು. ಇಬ್ಬರು ಬಿಕಾಂ ವ್ಯಾಸಂಗ ಮಾಡುತ್ತಿದ್ದಾರೆ.

ಇದನ್ನೂ ಓದಿ:'ಪಾಪ ಕೃತ್ಯಗಳು ಹೆಚ್ಚಾದಾಗ ಸಂಹಾರ, ಹರಹರ ಮಹದೇವ್..': ಉದ್ಧವ್ ವಿರುದ್ಧ ಕಂಗನಾ ಆಕ್ರೋಶ

ಇಬ್ಬರು ಕಳೆದೊಂದು ವರ್ಷದಿಂದ ಒಟ್ಟಿಗೆ ವಾಸಿಸುತ್ತಿದ್ದರು. ಈ ನಡುವೆ ಪ್ರೇಮಾಂಕುರವಾಗಿದೆ. ಯಾರಿಗೂ ಗೊತ್ತಿಲ್ಲದ ರೀತಿಯಲ್ಲೇ ಮದುವೆಯೂ ಆಗಿದ್ದಾರೆ. ಆದರೆ, ಕಳೆದ ಕೆಲವು ದಿನಗಳ ನಂತರ ಈ ವಿಚಾರ ಸಂಬಂಧಿಕರಿಗೆ ಗೊತ್ತಾಗಿ ಯುವತಿಯರನ್ನು ವಾಪಸ್ ಮನೆಗೆ ಕರೆತಂದು ಹಲ್ಲೆ ನಡೆಸಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ಎರಡು ಕುಟುಂಬಸ್ಥರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ABOUT THE AUTHOR

...view details