ಕರ್ನಾಟಕ

karnataka

ETV Bharat / bharat

ಹಿಮಪಾತಕ್ಕೆ ಬಾಲಕಿ ಸೇರಿ ಇಬ್ಬರು ಬಲಿ : ವಿದೇಶಿ ಪ್ರವಾಸಿಗನ ರಕ್ಷಣೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಪಾತಕ್ಕೆ ಇಬ್ಬರು ಬಲಿ - ಸ್ಕೀಯಿಂಗ್​ನಲ್ಲಿ ತೊಡಗಿದ್ದ ವಿದೇಶಿ ಪ್ರವಾಸಿಗನ ರಕ್ಷಣೆ - ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂದುವರೆದ ಭಾರಿ ಹಿಮಪಾತ

two-girls-buried-alive-after-avalanche-hits-kargils-tangole
ಹಿಮಪಾತಕ್ಕೆ ಬಾಲಕಿ ಸೇರಿ ಇಬ್ಬರು ಬಲಿ : ವಿದೇಶಿ ಪ್ರವಾಸಿಗನ ರಕ್ಷಣೆ

By

Published : Jan 29, 2023, 9:58 PM IST

ಕಾರ್ಗಿಲ್​ (ಜಮ್ಮು ಮತ್ತು ಕಾಶ್ಮೀರ): ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಪಾತ ಮುಂದುವರೆದಿದೆ. ಹಿಮದ ಹಿತವನ್ನು ಸವಿಯಲು ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಇದರ ನಡುವೆ ಕೇಂದ್ರಾಡಳಿತ ಪ್ರದೇಶವಾದ ಲಡಾಖ್​​ನ ಕಾರ್ಗಿಲ್​ನಲ್ಲಿ ಹಿಮಪಾತದಡಿ ಸಿಲುಕಿ ಬಾಲಕಿ ಸೇರಿ ಇಬ್ಬರು ಮೃತಪಟ್ಟಿದ್ದಾರೆ.

ಇಲ್ಲಿನ ಟಂಗೋಲ್ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದೆ. ಭಾರೀ ಹಿಮಪಾತ ಉಂಟಾಗಿ ಕುಯ್ಸುಮ್​ (11) ಮತ್ತು ಬಿಲ್ಕಿಸ್​(23) ಎಂಬಿಬ್ಬರು ಮೃತಪಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ಹಿಮದಿಂದ ಹೊರತೆಗೆದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕಾರ್ಗಿಲ್​ ಉಪ ಆಯುಕ್ತ, ಟಂಗೋಲ್​ ಗ್ರಾಮದಲ್ಲಿ ಉಂಟಾದ ಹಿಮಪಾತದ ಬಗ್ಗೆ ಮಾಹಿತಿ ಸಿಕ್ಕ ತಕ್ಷಣವೇ ಪೊಲೀಸರು, ಯುಟಿಡಿಆರ್​ಎಫ್​​​ ಹಾಗೂ ಕಾರ್ಗಿಲ್​ ಮೆಕ್ಯಾನಿಕಲ್​ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ತಕ್ಷಣವೇ ಕಾರ್ಯಾಚರಣೆ ಆರಂಭಿಸಿ ಬಾಲಕಿಯರ ಮೃತದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಯಿತು. ಅಲ್ಲದೆ ಜಿಲ್ಲಾಡಳಿತವು ಮೃತರ ಕುಟುಂಬಗಳಿಗೆ ನೆರವನ್ನು ನೀಡಲಿದೆ ಎಂದು ತಿಳಿಸಿದ್ದಾರೆ.

ಗುಲ್ಮಾರ್ಗ್​ನ ಕಣಿವೆಯಲ್ಲಿ ಸಿಲುಕಿದ್ದ ಪ್ರವಾಸಿಗನ ರಕ್ಷಣೆ : ಬಾರಾಮುಲ್ಲಾ ಜಿಲ್ಲೆಯ ಗುಲ್ಮಾರ್ಗ್‌ನ ಸುಂದರ ಕಣಿವೆಗಳನ್ನು ನೋಡಲು ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ವಿವಿಧ ಪ್ರವಾಸಿಗರು ಸೇರಿದಂತೆ ಕಾಶ್ಮೀರದ ಜನರು ಗುಲ್ಮಾರ್ಗ್‌ನ ಹಿಮಭರಿತ ಕಣಿವೆಗಳಲ್ಲಿ ಸ್ಕೀಯಿಂಗ್ ಮಾಡುವುದನ್ನು ಕಾಣಬಹುದು. ಈ ಮೂಲಕ ಪ್ರವಾಸಿಗರು ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಆನಂದಿಸುತ್ತಿದ್ದಾರೆ.

ಇಲ್ಲಿನ ಖಾರ್ನಾಲಾ ಅರಣ್ಯದಲ್ಲಿ ಸ್ಕೀಯಿಂಗ್ ಮಾಡುವಾಗ ನಾಪತ್ತೆಯಾಗಿದ್ದ ನಾರ್ವೆಯ ಪ್ರವಾಸಿಗರನ್ನು ಪೊಲೀಸರು ಶನಿವಾರ ರಕ್ಷಿಸಿದ್ದರು. ಈ ಪ್ರವಾಸಿಗ ಗುಲ್ಮಾರ್ಗ್‌ನಲ್ಲಿ ಸ್ಕೀಯಿಂಗ್ ಮಾಡುವಾಗ ಟ್ರ್ಯಾಕ್ ಕಳೆದುಕೊಂಡು ಕಾಡಿನಲ್ಲಿ ಸಿಲುಕಿಕೊಂಡಿದ್ದರು. ಬಳಿಕ ಇವರನ್ನು ಪತ್ತೆ ಮಾಡಿ ಸ್ಥಳೀಯ ಪೊಲೀಸರು ರಕ್ಷಣೆ ಮಾಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿಯೋರ್ವರು, ವಿದೇಶಿ ಪ್ರವಾಸಿಗರೋರ್ವರು ಸ್ಕೀಯಿಂಗ್ ಮಾಡುವಾಗ ತಮ್ಮ ಟ್ರ್ಯಾಕ್ ಅನ್ನು ಕಳೆದುಕೊಂಡಿದ್ದಾರೆ. ಬಳಿಕ ಈ ವರೆಗೆ ಮರಳಿ ಬಂದಿಲ್ಲ ಎಂಬ ಮಾಹಿತಿ ಸಿಕ್ಕಿತು. ಈ ಸಂಬಂಧ ಅರಣ್ಯ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದೆವು. ಬಳಿಕ ವಿದೇಶಿ ಪ್ರವಾಸಿಗರನ್ನು ಪತ್ತೆ ಮಾಡಿ ಗುಲ್ಮಾರ್ಗ್‌ಗೆ ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಹೇಳಿದರು.

ಗುಲ್ಮಾರ್ಗ್‌ಗೆ ಆಗಮಿದ್ದ ನಾರ್ವೆಯ ಓಯ್ವಿಂದ್ ಆಮೋತ್ ಎಂಬ ವಿದೇಶಿ ಪ್ರವಾಸಿ ತನ್ನನ್ನು ರಕ್ಷಿಸಿದ ಬಾರಾಮುಲ್ಲಾ ಪೊಲೀಸರ ನೆರವಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೆ ಬಾರಾಮುಲ್ಲಾ ಎಸ್‌ಎಸ್‌ಪಿ ಅಮೋದ್ ಅಶೋಕ್ ನಾಗ್ಪುರೆ ರಕ್ಷಣಾ ತಂಡಗಳನ್ನು ಶ್ಲಾಘಿಸಿದ್ದು, ಸಿಬ್ಬಂದಿಗಳಿಗೆ ನಗದು ಬಹುಮಾನವನ್ನು ಘೋಷಿಸಿದ್ದರು.

ಜನವರಿ 13ರಿಂದ ಆರಂಭವಾಗಿರುವ ಹಿಮಪಾತ :ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಪಾತ ಮುಂದುವರೆದಿದ್ದು, ಪ್ರವಾಸಿಗರಿಗೆ ಉತ್ತಮ ಅನುಭವವನ್ನು ನೀಡುತ್ತಿದೆ. ಆದರೆ ಹಿಮಪಾತವು ವಾಹನ ಸಂಚಾರ, ವಿಮಾನ ಹಾರಾಟಕ್ಕೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕಳೆದ ಕೆಲವು ದಿನಗಳಿಂದ ಭಾರೀ ಹಿಮಪಾತವಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ ಜನವರಿ 13ರಿಂದ ಈ ವರ್ಷದ ಮೊದಲ ಋತುವಿನ ಹಿಮಪಾತ ಆರಂಭವಾಗಿದೆ.

ಇದನ್ನೂ ಓದಿ :ಹಿಮಪಾತದಿಂದ ಶ್ರೀನಗರದಲ್ಲಿ 25 ವಿಮಾನಗಳ ಹಾರಾಟ ರದ್ದು: ಹಿಮಾಚಲದಲ್ಲಿ ಹಿಮದ ಹೊದಿಕೆ

ABOUT THE AUTHOR

...view details