ಕರ್ನಾಟಕ

karnataka

ETV Bharat / bharat

ಇಬ್ಬರು ಹುಡುಗಿಯರ ಮೇಲೆ 6 ಜನ ಕಾಮುಕರಿಂದ ಗ್ಯಾಂಗ್​ ರೇಪ್​!

ಅಸ್ಸೋಂನಲ್ಲಿ ಹೇಯ ಕೃತ್ಯವೊಂದು ನಡೆದಿದೆ. ಕರಿಮ್‌ಗಂಜ್ ಜಿಲ್ಲೆಯ ನೀಲಾಂಬಜಾರ್‌ನಲ್ಲಿ ಇಬ್ಬರು ಹುಡುಗಿಯರ ಮೇಲೆ 6 ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

two-girls-brutally-raped-by-6-men-in-assams-karimganj-district
ಇಬ್ಬರು ಬಾಲಕಿಯರ ಮೇಲೆ 6 ಜನ ಕಾಮುಕರಿಂದ ಅತ್ಯಾಚಾರ

By

Published : Nov 15, 2020, 9:16 AM IST

ಕರೀಮ್‌ಗಂಜ್ (ಅಸ್ಸೋಂ): ಕರೀಮ್‌ಗಂಜ್ ಜಿಲ್ಲೆಯಲ್ಲಿ ಇಬ್ಬರು ಹುಡುಗಿಯರ ಮೇಲೆ 6 ಜನ ಕಾಮುಕರು ಅಟ್ಟಹಾಸ ಮೆರೆದಿರುವ ಬಗ್ಗೆ ವರದಿಯಾಗಿದೆ.

ವರದಿಗಳ ಪ್ರಕಾರ ಕರಿಮ್‌ಗಂಜ್ ಜಿಲ್ಲೆಯ ನೀಲಾಂಬಜಾರ್‌ನಲ್ಲಿ ಇಬ್ಬರು ಹುಡುಗಿಯರ ಮೇಲೆ 6ಮಂದಿ ಪುರುಷರು ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹುಡುಗಿಯರು ಸಿಲ್ಚಾರ್ ವೈದ್ಯಕೀಯ ಕಾಲೇಜಿನಿಂದ ಬಾಡಿಗೆ ಕಾರಿನಲ್ಲಿ ತ್ರಿಪುರಕ್ಕೆ ಹಿಂದಿರುಗುತ್ತಿದ್ದರು. ತಮ್ಮ ತಾಯಿಯನ್ನು ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು ಎನ್ನಲಾಗ್ತಿದೆ.

ನಿಲಾಂಬಜಾರ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಇಬ್ಬರು ಹುಡುಗಿಯರನ್ನು ಕರೆತಂದು, ಕಾರು ಚಾಲಕ ಸೇರಿದಂತೆ 6 ಜನರು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಕಾರು ಚಾಲಕ ರಸ್ತೆಯ ಮಧ್ಯದಲ್ಲಿ ತಪ್ಪು ತಿರುವು ಪಡೆದು ಇತರ ಐದು ಜನರೊಂದಿಗೆ ಅತ್ಯಾಚಾರಕ್ಕೆ ಯತ್ನಿಸಿದಾಗ ರಾತ್ರಿ ಸುಮಾರು 1 ಗಂಟೆ ಆಗಿತ್ತು.

ಘಟನೆ ಕುರಿತು ಪೊಲೀಸ್​ ಅಧಿಕಾರಿ ಮಾಹಿತಿ

ಈ ಕುರಿತು ಬಜಾರಿಸರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂತ್ರಸ್ತೆಯರು ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣದ ತನಿಖೆ ಆರಂಭಿಸಲಾಗಿದೆ. ಪೊಲೀಸರು ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಅಬ್ದುಲ್ ಅಹಾದ್ ಎಂದು ಗುರುತಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ABOUT THE AUTHOR

...view details