ಹೈದರಾಬಾದ್: ತಾವು ಮದುವೆಯಾಗಲು ಬಯಸುವ ಹುಡುಗ ಶ್ರೀರಾಮನಂತೆ ಏಕಪತ್ನಿ ವ್ರತಸ್ಥನಾಗಿರಬೇಕು, ಬೇರೆ ಹೆಣ್ಣು ಮಕ್ಕಳನ್ನು ಕಣ್ಣೆತ್ತಿಯೂ ನೋಡಬಾರದು ಅನ್ನೋದು ಮಹಿಳೆಯರ ಮನದಾಳದ ಬಯಕೆ. ಬೇರೊಬ್ಬ ಯುವತಿಯನ್ನು ಪ್ರೀತಿಸುವುದಿರಲಿ, ಆಕೆಯ ಜೊತೆ ಮಾತನಾಡಿದ್ರೂ ಸಾಕು ಕೆಲವು ಯುವತಿಯರು ಕೋಪತಾಪ ತಾಳುತ್ತಾರೆ. ಆದರೆ, ಇಲ್ಲೊಂದು ವಿಭಿನ್ನವಾದ ಸ್ಟೋರಿ ಇದೆ ಓದಿ.
ಮಲೇಷ್ಯಾದಲ್ಲಿ ವಾಸವಾಗಿರುವ ಇಬ್ಬರು ಗೆಳತಿಯರಿಗೆ ಒಬ್ಬನೇ ಗಂಡ ಬೇಕಂತೆ. ಈ ಕುರಿತಂತೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಇವರು ಹಾಕಿಕೊಂಡಿರುವ ಪೋಸ್ಟ್ ನೋಡಿ, ಅನೇಕರು ಹುಬ್ಬೇರಿಸಿದ್ದು ಅರ್ಜಿ ಹಾಕುವ ಆತುರ ವ್ಯಕ್ತಪಡಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿರುವ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸೆನ್ಸೇಷನ್ ಹುಟ್ಟುಹಾಕಿದೆ. ಕಳೆದ ಕೆಲವು ವರ್ಷಗಳಿಂದ ಈ ಯುವತಿಯರು ಸ್ನೇಹಿತೆಯರಾಗಿದ್ದು, ಇದೀಗ ತಾವಿಬ್ಬರೂ ಒಬ್ಬನೇ ವ್ಯಕ್ತಿಯನ್ನು ಮದುವೆಯಾಗುವುದಾಗಿ ಹೇಳುತ್ತಿದ್ದಾರೆ. ತಮ್ಮಿಬ್ಬರ ನಿರ್ಧಾರಕ್ಕೆ ಒಪ್ಪಿಕೊಳ್ಳುವ ವ್ಯಕ್ತಿಯನ್ನು ಮದುವೆಯಾಗುವುದಾಗಿ ಬರೆದುಕೊಂಡಿದ್ದಾರೆ.