ನಕಾಶಿಪಾರಾ(ಪಶ್ಚಿಮ ಬಂಗಾಳ):ಮದುವೆ ಕಾರ್ಯಕ್ರಮ ಮುಗಿಸಿಕೊಂಡು ತೆರಳುತ್ತಿರುವ ವೇಳೆ ಎರಡು ಪ್ರತ್ಯೇಕ ಕಡೆಗಳಲ್ಲಿ ಅಪಘಾತಗಳು ನಡೆದಿರುವುದು ದುರಾದೃಷ್ಟಕರ ಸಂಗತಿ. ನಾಡಿಯಾ ಮತ್ತು ಕಾಲಿಂಪಾಂಗ್ ಎಂಬ ಸ್ಥಳಗಳಲ್ಲಿ ಎರಡು ಪ್ರತ್ಯೇಕವಾಗಿ ರಸ್ತೆ ಅಪಘಾತಗಳು ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಐವರು ಮೃತಪಟ್ಟಿರುವ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ.
ಮೊದಲು ನಡೆದ ಘಟನೆಯೊಂದರಲ್ಲಿ ಬೊಲೆರೊ ಕಾರೊಂದು ನದಿಗೆ ಬಿದ್ದಿದ್ದರಿಂದ ಮೂವರು ಸ್ಥಳದಲ್ಲೇ ಮೃತಪಟ್ಟರೆ. ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 31ರ ಕಲಿಂಪಾಂಗ್ ಜಿಲ್ಲೆಯ ಮೊಂಗ್‌ಪಾಂಗ್ ಪೊಲೀಸ್ ಔಟ್‌ಪೋಸ್ಟ್ ಪ್ರದೇಶದಲ್ಲಿ ರುಂಗ್‌ಡಂಗ್ ಸೇತುವೆಯಲ್ಲಿ ಈ ದುರ್ಘಟನೆ ನಡೆದಿದೆ. ಸಂತ್ರಸ್ತರು ಮದುವೆಯ ಆರತಕ್ಷತೆ ಪಾರ್ಟಿ ಮುಗಿಸಿಕೊಂಡು ಹಿಂತಿರುಗುತ್ತಿದ್ದರು.
ಬೈಕ್‌ಗೆ ಹಿಂದಿನಿಂದ ಟ್ರಕ್ ಡಿಕ್ಕಿ: ಎರಡನೇ ಅಪಘಾತವು ನಾಡಿಯಾದ ನಕಾಶಿಪಾರಾ ಒಂದರಲ್ಲಿ ಸಂಭವಿಸಿದ್ದರಿಂದ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಓರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ತಡರಾತ್ರಿ ನಕಾಶಿಪಾರಾದಲ್ಲಿನ ಜುಗ್‌ಪುರ ಫ್ಲೈಓವರ್ ಮಾರ್ಗದಲ್ಲಿ ತೆರಳುತ್ತಿದ್ದ ಬೈಕ್‌ಗೆ ಹಿಂದಿನಿಂದ ಟ್ರಕ್ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಸ್ಥಳದಿಂದ ಲಾರಿ ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ನಕಾಶಿಪಾರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನದಿ ಸೇತುವೆಯಿಂದ ಉರುಳಿದ ಬಿದ್ದ ವರನ ಕಾರ್: ಕಾಲಿಂಪಾಂಗ್ನಲ್ಲೂ ಮತ್ತೊಂದು ಪ್ರತ್ಯೇಕ ಅಪಘಾತ ನಡೆಯಿದಿದೆ. ಪ್ರಯಾಣಿಕರು ಮದುವೆ ಸಮಾರಂಭದಲ್ಲಿ ಭಾಗವಹಿಸಲು ಸಿಲಿಗುರಿಯಿಂದ ಬನಾರ್ಹತ್‌ಗೆ ಪ್ರಯಾಣಿಸುತ್ತಿದ್ದರು. ಮದುವೆ ಕಾರ್ಯಕ್ರಮ ಮುಗಿಸಿ ಹಿಂತಿರುಗುವಾಗ ಈ ಭೀಕರ ಅಪಘಾತ ಸಂಭವಿಸಿದೆ. ಹೌದು, ಕಾಲಿಂಪಾಂಗ್ ಜಿಲ್ಲೆಯ ಮೊಂಗ್‌ಪಾಂಗ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರನ ಕಾರ್ ರುಂಗ್‌ಡಂಗ್ ನದಿ ಸೇತುವೆಯಿಂದ ಉರುಳಿದ ಬಿದ್ದಿರುವ ಪರಿಣಾಮ ಚಾಲಕ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿಸಿದ ಮಾಂಗ್‌ಪಾಂಗ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು, ಗಾಯಾಳುಗಳನ್ನು ರಕ್ಷಿಸಿ, ಅವರನ್ನು ಚಿಕಿತ್ಸೆಗಾಗಿ ಓಡ್ಲಬರಿ ಆಸ್ಪತ್ರೆಗೆ ಸೇರಿಸಿದರು. ಕಾರಿನಲ್ಲಿ 9 ಮಂದಿ ಪ್ರಯಾಣಿಕರಿದ್ದರು ಎಂಬುದು ತಿಳಿದು ಬಂದಿದೆ.