ಕಟಕ್(ಒಡಿಶಾ): ಕಟಕ್‌ನ ಮುಂಡಾಲಿ ಸೇತುವೆ ಬಳಿಯ ಮಹಾನದಿ ನದಿ ಮಧ್ಯೆ ಎರಡು ಆನೆಗಳು ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಪ್ರವಾಹದಿಂದಾಗಿ ಮಹಾನದಿಯಲ್ಲಿ ನೀರಿನ ರಭಸ ಜೋರಾಗಿದ್ದು, ಆನೆಗಳು ಕೊಚ್ಚಿಕೊಂಡು ಹೋಗುತ್ತಿವೆ. ಮುಂಡಲಿ ಸೇತುವೆ ಬಳಿ ಆನೆಗಳನ್ನು ರಕ್ಷಿಸಲು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.
Watch... "ಮಹಾನದಿ"ಯಲ್ಲಿ ಸಿಲುಕಿದ ಆನೆಗಳು: ಮುಂದುವರಿದ ರಕ್ಷಣಾ ಕಾರ್ಯಾಚರಣೆ - ಕಟಕ್‌ನ ಮುಂಡಾಲಿ ಸೇತುವೆ
ಮಹಾನದಿ ನದಿ ಮಧ್ಯೆ ಎರಡು ಆನೆಗಳು ಸಿಲುಕಿಕೊಂಡಿದ್ದು, ಮುಂಡಲಿ ಸೇತುವೆ ಬಳಿ ಆನೆಗಳನ್ನು ರಕ್ಷಿಸಲು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಮಹಾನದಿ ನದಿಯಲ್ಲಿ ಸಿಲುಕಿದ ಎರಡು ಆನೆಗಳು
ನದಿ ದಾಟುವಾಗ ನೀರಿನ ರಭಸಕ್ಕೆ ಆನೆಗಳು ತೇಲಿಕೊಂಡು ಹೋಗಿದ್ದು, ಮುಂಡಲಿ ಸೇತುವೆ ಬಳಿ ಎರಡು ಆನೆಗಳು ಪತ್ತೆಯಾಗಿವೆ. ಜೊತೆಗೆ ಉಳಿದ ನಾಲ್ಕು ಆನೆಗಳು ಆಥಗಡ್ ಶ್ರೇಣಿಯ ನುಶಾಸನ್ ಗ್ರಾಮದ ಬಳಿಯ ನದಿಯಲ್ಲಿ ಕಂಡು ಬಂದಿವೆ.