ಕರ್ನಾಟಕ

karnataka

ETV Bharat / bharat

ಪಾಡುರಂಗ ರಥೋತ್ಸವದಲ್ಲಿ ದುರಂತ: ಇಬ್ಬರು ಸಾವು, ಆರು ಜನರಿಗೆ ಗಾಯ - ಕರ್ನೂಲ್​ ಅಪರಾಧ ಸುದ್ದಿ

ಹಬ್ಬದ ಸಂದರ್ಭದಲ್ಲಿ ನಡೆದ ದುರಂತದಿಂದಾಗಿ ಇಬ್ಬರು ಸಾವನ್ನಪ್ಪಿದ್ದು, ಆರು ಜನ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ಸಂಭವಿಸಿದೆ.

Two died in Panduranga fair, Two died in Panduranga fair at Kurnool, Kurnool crime news, ಪಾಂಡುರಂಗ ಜಾತ್ರೆಯಲ್ಲಿ ಇಬ್ಬರು ಸಾವು, ಕರ್ನೂಲ್​ನಲ್ಲಿ ಪಾಂಡುರಂಗ ಜಾತ್ರೆಯಲ್ಲಿ ಇಬ್ಬರು ಸಾವು, ಕರ್ನೂಲ್​ ಅಪರಾಧ ಸುದ್ದಿ,
ಪಾಡುರಂಗ ರಥೋತ್ಸವದಲ್ಲಿ ಅಪಶ್ರುತಿ

By

Published : Mar 13, 2021, 11:50 AM IST

ಕರ್ನೂಲ್:ಅರಿಕೇರಾ ಗ್ರಾಮದ ಕನುಲವಿಂದುವಿನಲ್ಲಿ ನಡೆದ ಪಾಂಡುರಂಗ ರಥೋತ್ಸವದಲ್ಲಿ ಸಂಭವಿಸಿದ ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಆರು ಜನ ಗಾಯಗೊಂಡಿದ್ದಾರೆ.

ಮಹಾ ಶಿವರಾತ್ರಿ ಪ್ರಯುಕ್ತ ಗ್ರಾಮದಲ್ಲಿ ಪಾಂಡುರಂಗ ಸ್ವಾಮಿಗೆ ಶುಕ್ರವಾರ ರಥೋತ್ಸವ ಆಯೋಜಿಸಲಾಗಿತ್ತು. ಗ್ರಾಮಸ್ಥರು ರಭಸವಾಗಿ ರಥ ಎಳೆಯುತ್ತಿರುವಾಗ, ರಥವು ವಿದ್ಯುತ್​ ತಂತಿಗಳಿಗೆ ತಗುಲಿ​ ತಂತಿ ತುಂಡಾಗಿ ನೆಲಕ್ಕೆ ಬಿದ್ದಿವೆ. ಪರಿಣಾಮ ವಿದ್ಯುತ್ ಶಾಕ್​ ತಗುಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರು ಜನ ಗಾಯಗೊಂಡಿದ್ದಾರೆ.

ಮೃತರನ್ನು ಶಿವ (25) ಮತ್ತು ಲಕ್ಷ್ಮಣ (28) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿದ್ದವರನ್ನು ಆಲೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೀಡಿತ ಕುಟುಂಬಗಳಿಗೆ ಪರಿಹಾರ

ಆಲೂರು ಘಟನೆಯಲ್ಲಿ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು ಎಂದು ಸಚಿವ ಜೈರಾಮ್ ಭರವಸೆ ನೀಡಿದ್ದಾರೆ. ಆಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತರ ಕುಟುಂಬಸ್ಥರು ಮತ್ತು ಸಂತ್ರಸ್ತರನ್ನು ಸಚಿವರು ಭೇಟಿ ಮಾಡಿದರು. ಮೃತರ ಕುಟುಂಬಗಳಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದೆಂದು ಸಚಿವ ಜೈರಾಮ್​ ಭರವಸೆ ನೀಡಿದ್ದಾರೆ.

ABOUT THE AUTHOR

...view details