ಟ್ಯುಟಿಕೋರಿನ್ (ತಮಿಳುನಾಡು): ನಜರೆತ್‌ನಲ್ಲಿ ನಿಧಿಗಾಗಿ ಗುಂಡಿ ಅಗೆಯುವ ವೇಳೆ ಉಸಿರುಗಟ್ಟಿ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ರಘುಪತಿ (47) ಮತ್ತು ನಿರ್ಮಲ್ ಗಣಪತಿ (17) ಎಂದು ಗುರುತಿಸಲಾಗಿದೆ.
ತಿರುವಳ್ಳುವರ್ ಕಾಲೋನಿಯಲ್ಲಿರುವ ತಮ್ಮ ಮನೆಯ ಹಿತ್ತಲಿನಲ್ಲಿ ನಿಧಿ ಇದೆ ಎಂದು ನಂಬಿದ್ದ ಶಿವಮಲೈ (40) ಮತ್ತು ಶಿವವೇಲನ್ (37) ಸಹೋದರರು ಕಳೆದ ಆರು ತಿಂಗಳಿನಿಂದ 40 ಅಡಿ ಆಳದ ಗುಂಡಿಯನ್ನ ಅಗೆಯುತ್ತಿದ್ದರು. ಅದರ ಪಕ್ಕದಲ್ಲೆ 7 ಅಡಿಯ ಟನಲ್ ಒಂದನ್ನು ನಿರ್ಮಿಸಿದ್ದರು.
ಮಾಣಿಕಂದನ್ ಅವರ ಮಗ ಗಣಪತಿ ಮತ್ತು ಸಾಥಾಂಕುಲಂ ಪನ್ನಂಪಾರ ಮೂಲದ ಅಲ್ವರ್ತಿರುನಗರಿ ಅಲಮರಥನ್ ಅವರ ಪುತ್ರ ರಘುಪತಿ ಅವರೊಂದಿಗೆ ಬಂದರು. ಈ ನಾಲ್ವರೂ ವಿಷಕಾರಿ ಅನಿಲವನ್ನು ಉಸಿರಾಡಿದರು ಎಂದು ಹೇಳಲಾಗುತ್ತದೆ. ಶಿವವೇಲನ್ ಅವರ ಪತ್ನಿ ರೂಪಾ ಅವರಿಗೆ ನೀರು ತರುವಾಗ ಮೂರ್ಛೆ ಹೋದರು. ಪ್ರಜ್ಞಾಹೀನ ರೂಪಾ ಅವರನ್ನು ರಕ್ಷಿಸಲು ನೆರೆಹೊರೆಯವರು ಪ್ರಯತ್ನಿಸುತ್ತಿದ್ದಂತೆ ಈ ಘಟನೆ ಬೆಳಕಿಗೆ ಬಂದಿದೆ.