ನಾಗ್ಪುರ(ಮಹಾರಾಷ್ಟ್ರ):ಮದುವೆಗೆ ಕೇವಲ ಎರಡು ದಿನ ಬಾಕಿ ಇರುವಾಗ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿರುವ ಕಾಮುಕನೋರ್ವನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಭಾರತೀಯ ವಾಯುಸೇನೆಯಲ್ಲಿ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದ ಎಂಬುದಾಗಿ ತಿಳಿದು ಬಂದಿದೆ.
ನಾಗ್ಪುರದ ಗಿಟ್ಟಿಖಾಡನ್ನಲ್ಲಿ ಈ ಘಟನೆ ನಡೆದಿದ್ದು, 15 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿರುವ ಆರೋಪದ ಮೇಲೆ ಆದಿತ್ಯಧನರಾಜ್ ನರೇಶ್ ಶಾಹು(28) ಎಂಬಾತನ ಬಂಧನ ಮಾಡಲಾಗಿದೆ. ಈತ ವಾಯುಪಡೆಯಲ್ಲಿ ಕಾರ್ಪೋರಲ್ ಆಗಿ ಸೇವೆ ಸಲ್ಲಿಸುತ್ತಿದ್ದನು.
ಮೇ. 12ರಂದು ಮದುವೆ ನಿಶ್ಚಯಗೊಂಡಿದ್ದರಿಂದ ರಜೆಯ ಮೇಲೆ ಊರಿಗೆ ಬಂದಿದ್ದನು. ಮದುವೆಗೆ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲೇ ಅದೇ ಗ್ರಾಮದ ಬಾಲಕಿಯೋರ್ವಳ ಮನೆಗೆ ನುಗ್ಗಿ ಅತ್ಯಾಚಾರವೆಸಗಿದ್ದಾನೆ. ಇದರ ಬೆನ್ನಲ್ಲೇ ಕೃತ್ಯದ ಬಗ್ಗೆ ಹೊರಗಡೆ ಹೇಳಿದರೆ ಕೊಲೆ ಮಾಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದಾನೆ.
ಇದನ್ನೂ ಓದಿ:ಅಸನಿ ಚಂಡಮಾರುತ: ಆಂಧ್ರದ ಸಮುದ್ರ ತೀರಕ್ಕೆ ತೇಲಿ ಬಂತು ನಿಗೂಢ ಚಿನ್ನದ ರಥ!
ಪೋಷಕರು ಮನೆಗೆ ವಾಪಸ್ ಆಗಿರುವ ಸಂದರ್ಭದಲ್ಲಿ ತನ್ನ ಮೇಲೆ ನಡೆದ ದುಷ್ಕೃತ್ಯದ ಬಗ್ಗೆ ಬಾಲಕಿ ಹೇಳಿಕೊಂಡಿದ್ದಾಳೆ. ಇದರ ಬೆನ್ನಲ್ಲೇ ಪೋಷಕರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯ ಬಂಧನ ಮಾಡಿದ್ದಾರೆ. ಆದಿತ್ಯಧನರಾಜ್ ಮದುವೆ ಮಾಡಿಕೊಳ್ಳಬೇಕಾಗಿದ್ದ ಯುವತಿ ಸಹ ಬೇರೊಂದು ರಾಜ್ಯದಲ್ಲಿ ವಾಸವಾಗಿದ್ದು, ಮದುವೆ ನಾಗ್ಪುರದಲ್ಲಿ ನಿಯೋಜನೆಗೊಂಡಿದ್ದ ಕಾರಣ ಅವರೆಲ್ಲರೂ ಆಗಮಿಸಿದ್ದಾರೆ. ನಾಗ್ಪುರಕ್ಕೆ ಬರುತ್ತಿದ್ದಂತೆ ಆದಿತ್ಯಧನರಾಜ್ ಮಾಡಿರುವ ಕೃತ್ಯದ ಬಗ್ಗೆ ಗೊತ್ತಾಗಿದ್ದು, ದಿಢೀರ್ ಶಾಕ್ಗೊಳಗಾಗಿದ್ದಾರೆ.