ಅಯೋಧ್ಯೆ(ಉತ್ತರ ಪ್ರದೇಶ): ಇಂದಿನಿಂದರಾಮಮಂದಿರ ನಿರ್ಮಾಣ ಸಮಿತಿಯ ಸಭೆ ನಡೆಯಲಿದೆ. ನಿರ್ಮಾಣ ಸಮಿತಿಯ ಅಧ್ಯಕ್ಷರಾದ ನೃಪೇಂದ್ರ ಮಿಶ್ರಾ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಜಿಲ್ಲೆಯ ಸರ್ಕ್ಯೂಟ್ ಹೌಸ್‌ನಲ್ಲಿ ಈ ಸಭೆ ನಡೆಯಲಿದ್ದು, ರಾಮ ದೇವಾಲಯದ ಅಡಿಪಾಯ ತುಂಬುವ ಕಾರ್ಯದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ.
ನೃಪೇಂದ್ರ ಮಿಶ್ರಾ ಅವರು ಅಯೋಧ್ಯೆಗೆ ತಲುಪಿದ ಬಳಿಕ ರಾಮ ಮಂದಿರ ನಿರ್ಮಾಣ ಸ್ಥಳವನ್ನು ಪರಿಶೀಲನೆ ನಡೆಸಿ, ಹನುಮಂಗಾರ್ಹಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಇಂದು ಮತ್ತು ನಾಳೆ ನಡೆಯಲಿರುವ ಸಭೆಯಲ್ಲಿ ಅಡಿಪಾಯ ತುಂಬುವ ಕಾರ್ಯದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದು, ಪ್ರತಿಷ್ಠಾನದ ವಿನ್ಯಾಸದ ಕುರಿತು ಹೆಚ್ಚಿನ ಚರ್ಚೆ ನಡೆಸಲಿದ್ದಾರೆ.
ಇದನ್ನು ಓದಿ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಮೂವರ ದುರ್ಮರಣ
ಈಗಾಗಲೇ ದೇವಾಲಯದ ಅಡಿಪಾಯವನ್ನು ಅಗೆಯುವ ಕೆಲಸ 40 ಅಡಿಗಳವರೆಗೆ ನಡೆದಿದೆ. ಈಗ ಅಡಿಪಾಯ ಭರ್ತಿ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಜಿಲ್ಲೆಯ ಉನ್ನತ ಅಧಿಕಾರಿಗಳು ಸಹ ಹಾಜರಿರುತ್ತಾರೆ. ಈ ಎರಡು ದಿನಗಳ ಸಭೆಯಲ್ಲಿ ದೇವಾಲಯ ನಿರ್ಮಾಣ ಸಂಸ್ಥೆ ಟಾಟಾ ಕನ್ಸಲ್ಟೆಂಟ್, ಲಾರ್ಸೆನ್ ಮತ್ತು ಟೌಬ್ರೊ ಮತ್ತು ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಗಳು ಸಹ ಭಾಗವಹಿಸಲಿದ್ದಾರೆ.