ಕರ್ನಾಟಕ

karnataka

ETV Bharat / bharat

ತಿರುಪತಿ ಉಪಚುನಾವಣೆ : ಕರುನಾಡಲ್ಲಿ ಸೇವೆ ಸಲ್ಲಿಸಿದ್ದ ರತ್ನಪ್ರಭಾಗೆ ಬಿಜೆಪಿ ಟಿಕೆಟ್​ - ನವದೆಹಲಿ

ತಿರುಪತಿಯ ಬಲ್ಲಿ ದುರ್ಜೆ ಪ್ರಸಾದ್​ ರಾವ್ ಕಳೆದ ವರ್ಷ ಕೊರೊನಾದಿಂದ ಸಾವಿಗೀಡಾಗಿದ್ದರು. ತೆರವಾಗಿದ್ದ ಸ್ಥಾನಕ್ಕೆ ಇದೀಗ ಚುನಾವಣೆ ನಡೆಯುತ್ತಿದ್ದು, ಮಾಜಿ ಐಎಎಸ್ ಅಧಿಕಾರಿ ಕೆ. ರತ್ನಪ್ರಭಾ ಅವರನ್ನು ಪಕ್ಷ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ.

by election: BJP announce Tirupati  ticket for ratnaprabha
ಕರುನಾಡಲ್ಲಿ ಸೇವೆ ಸಲ್ಲಿಸಿದ್ದ ರತ್ನಪ್ರಭಾಗೆ ತಿರುಪತಿ ಬಿಜೆಪಿ ಟಿಕೆಟ್​

By

Published : Mar 25, 2021, 11:25 PM IST

ನವದೆಹಲಿ: ಕರ್ನಾಟಕ ಸೇರಿ ವಿವಿಧ ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭೆ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದ ಬೆಳಗಾವಿ ಕ್ಷೇತ್ರಕ್ಕೆ ಮಂಗಳಾ ಅಂಗಡಿ ಹಾಗೂ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ ಮಾಜಿ ಐಎಎಸ್ ಅಧಿಕಾರಿ ಕೆ. ರತ್ನಪ್ರಭಾ​ ಅವರಿಗೆ ಬಿಜೆಪಿ ಹೈಕಮಾಂಡ್​ ಮಣೆ ಹಾಕಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಾಲ್ಕು ಸಲ ಸಂಸದರಾಗಿದ್ದ ಸುರೇಶ್ ಅಂಗಡಿ ಕಳೆದ ವರ್ಷ ಕೋವಿಡ್​ನಿಂದ ನಿಧನರಾಗಿದ್ದರು. ಈ ಕಾರಣದಿಂದಾಗಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ

ತಿರುಪತಿ ಲೋಕಸಭಾ ಉಪಚುನಾವಣೆಯ ಅಭ್ಯರ್ಥಿಯಾಗಿ ಮಾಜಿ ಐಎಎಸ್ ಅಧಿಕಾರಿ ಕೆ. ರತ್ನಪ್ರಭಾ ಅವರನ್ನು ಪಕ್ಷ ಘೋಷಣೆ ಮಾಡಿದೆ. ತಿರುಪತಿ ಬಲ್ಲಿ ದುರ್ಜೆ ಪ್ರಸಾದ್​ ರಾವ್ ಅವರು ಕೂಡ ಕಳೆದ ವರ್ಷ ಕೊರೊನಾದಿಂದ ಸಾವಿಗೀಡಾಗಿದ್ದರು.

ಆರು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಉಪಚುನಾವಣೆಗೆ ಬಿಜೆಪಿ ಒಂಬತ್ತು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಏಪ್ರಿಲ್ 17 ರಂದು ಚುನಾವಣೆ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ರಾಜ್ಯ ಕ್ಷೇತ್ರ ಹೆಸರು
1 ಆಂಧ್ರಪ್ರದೇಶ ತಿರುಪತಿ (ಲೋಕಸಭೆ) ರತ್ನಪ್ರಭಾ
2 ಕರ್ನಾಟಕ ಬೆಳಗಾವಿ(ಲೋಕಸಭೆ) ಮಂಗಳಾ ಸುರೇಶ್​ ಅಂಗಡಿ
3 ಜಾರ್ಖಂಡ್​ ಮಾದಾಪುರ್​ ಗಂಗಾ ನಾರಾಯಣ್​ ಸಿಂಗ್​
4 ಕರ್ನಾಟಕ ಬಸವ ಕಲ್ಯಾಣ ಶರಣು ಸಲಗಾರ್​
5 ಕರ್ನಾಟಕ ಮಸ್ಕಿ ಪ್ರತಾಪ್​ ಗೌಡ ಪಾಟೀಲ್​
6 ಮಧ್ಯಪ್ರದೇಶ ದಮೋಹ್ ರಾಹುಲ್ ಸಿಂಗ್​
7 ಮಿಜೋರಾಂ ಸೆರ್​ಚಿಪ್ ಲಾಲ್​ಹರಿಯಾಟ್ರೆಂಗಾ ಚಂಗ್ತೆ
8 ಒಡಿಶಾ ಪಿಪಿಲಿ ಅಶ್ರಿತ್​ ಪಟ್ನಾಯಕ್​
9 ರಾಜಸ್ಥಾನ ಸಹರಾ ರತನ್​ ಲಾಲ್​ ಜಟ್​
10 ರಾಜಸ್ಥಾನ ಸುಜಂಗಢ ಖೆಮರಾಮ್​ ಮೆಘವಾಲ್​
11 ರಾಜಸ್ಥಾನ ರಾಜಸಮಂದ್​​ ದೀಪ್ತಿ ಮಹೇಶ್ವರಿ

ABOUT THE AUTHOR

...view details