ಕರ್ನಾಟಕ

karnataka

ETV Bharat / bharat

ಅಪರಿಚಿತರಿಂದ ಗುಂಡಿನ ದಾಳಿ, ಒಬ್ಬ ಯೋಧ ಸಾವು, ಇನ್ನೊಬ್ಬರಿಗೆ ಗಾಯ: ಇಡೀ ಪ್ರದೇಶ ಸುತ್ತುವರಿದ ಭದ್ರತಾ ಪಡೆಗಳು - ಸಿಆರ್​ಪಿಎಫ್​ ಯೋಧರಿಗೆ ಗಾಯ

ಶ್ರೀನಗರದ ಮೈಸಿಮಾ ಪ್ರದೇಶದಲ್ಲಿ ಸೋಮವಾರ ಬಂದೂಕುಧಾರಿಗಳು ಏಕಾಏಕಿ ಯೋಧರ ಮೇಲೆ ಗುಂಡು ಹಾರಿಸಿದ್ದಾರೆ. ಪರಿಣಾಮ ಒಬ್ಬ ಯೋಧ ವೀರಮರಣವನ್ನಪ್ಪಿದರೆ, ಇನ್ನೊಬ್ಬರು ಗಾಯಗೊಂಡಿದ್ದಾರೆ.

Two CRPF personnel injured in firing in Srinagar
ಅಪರಿಚಿತರಿಂದ ಗುಂಡಿನ ದಾಳಿ, ಇಬ್ಬರು ಯೋಧರಿಗೆ ಗಾಯ

By

Published : Apr 4, 2022, 5:01 PM IST

Updated : Apr 4, 2022, 5:52 PM IST

ಶ್ರೀನಗರ (ಜಮ್ಮು-ಕಾಶ್ಮೀರ): ಅಪರಿಚಿತರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಸಿಆರ್​ಪಿಎಫ್​ ಯೋಧರು ಗಾಯಗೊಂಡಿದ್ದು, ಅದರಲ್ಲಿ ಒಬ್ಬ ಸಿಆರ್​ಪಿಎಫ್​ ಯೋಧ ವೀರಮರಣವನ್ನಪ್ಪಿದ್ದಾರೆ. ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಈ ದಾಳಿ ನಡೆದಿದೆ. ಗುಂಡಿನ ದಾಳಿ ಮಾಡಿ ದುಷ್ಕರ್ಮಿಗಳಿಗಾಗಿ ಭದ್ರತೆ ಪಡೆಗಳು ಶೋಧ ಕಾರ್ಯ ಆರಂಭಿಸಿವೆ.

ಇಲ್ಲಿನ ಮೈಸಿಮಾ ಪ್ರದೇಶದಲ್ಲಿ ಸೋಮವಾರ ಬಂದೂಕುಧಾರಿಗಳು ಏಕಾಏಕಿ ಯೋಧರ ಮೇಲೆ ಗುಂಡು ಹಾರಿಸಿದ್ದಾರೆ. ಪರಿಣಾಮ ಒಬ್ಬ ಯೋಧ ಅಸುನೀಗಿದರೆ, ಇನ್ನೊಬ್ಬ ಯೋಧ ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಅಪರಿಚಿತರಿಂದ ಗುಂಡಿನ ದಾಳಿ, ಒಬ್ಬ ಯೋಧ ಸಾವು, ಇನ್ನೊಬ್ಬರಿಗೆ ಗಾಯ

ಗುಂಡಿನ ದಾಳಿ ನಡೆದ ಸ್ಥಳಕ್ಕೆ ಈಗಾಗಲೇ ಹೆಚ್ಚಿನ ಸಂಖ್ಯೆಯ ಯೋಧರು ಆಗಮಿಸಿ, ಇಡೀ ಪ್ರದೇಶವನ್ನು ಸುತ್ತುವರಿದಿದ್ದಾರೆ. ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ....

ಇದನ್ನೂ ಓದಿ:ನಿವೃತ್ತ ಸೈನಿಕರನ್ನು ಕೃಷಿಯತ್ತ ಸೆಳೆಯಲು ಕೇಂದ್ರ ಸರ್ಕಾರದ ಪ್ರಯತ್ನ: ಏನಿದು ಹೊಸ ಯೋಜನೆ?

Last Updated : Apr 4, 2022, 5:52 PM IST

ABOUT THE AUTHOR

...view details