ಖಮ್ಮಂ, ತೆಲಂಗಾಣ :ಮರವೊಂದು ಗೋಡೆಯ ಮೇಲೆ ಬಿದ್ದ ಪರಿಣಾಮ ಇಬ್ಬರು ಮಕ್ಕಳನ್ನು ಸಾವನ್ನಪ್ಪಿರುವ ಘಟನೆ ತೆಲಂಗಾಣದ ಖಮ್ಮಂ ನಗರದ ಬ್ರಾಹ್ಮಣ ಬಜಾರ್ನಲ್ಲಿ ಸಂಭವಿಸಿದೆ.
ದಿಗಂತ್ ಶೆಟ್ಟಿ (11) ಮತ್ತು ರಜಪೂತ್ ಆಯುಷ್ (6) ಎಂಬಿಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಸ್ಥಳೀಯರ ಪ್ರಕಾರ, ಮಂಗಳವಾರ ಸಂಜೆಯ ವೇಳೆ ಆರು ಮಕ್ಕಳು ಬ್ರಾಹ್ಮಣ ಬಜಾರ್‌ನ ಖಾಲಿ ಜಾಗದಲ್ಲಿ ಕ್ರಿಕೆಟ್ ಆಡಲು ತೆರಳಿದ್ದರು.
ಕ್ರಿಕೆಟ್ ಆಡುವ ವೇಳೆ ಮರವೊಂದು ಗೋಡೆಯ ಮೇಲೆ ಬಿದ್ದಿದೆ. ಆ ಗೋಡೆ ಮಕ್ಕಳ ಮೇಲೆ ಉರುಳಿದೆ. ಇದರಿಂದಾಗಿ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದಾರೆ.
ಓರ್ವ ಬಾಲಕ ಅಪಾಯದಿಂದ ಪಾರಾಗಿದ್ದು, ಇನ್ನು ಮೂವರು ಮಕ್ಕಳು ಗಾಯಗೊಂಡಿದ್ದು, ಅವರೆಲ್ಲ ಖಮ್ಮಂ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಖಮ್ಮಂ ಮೇಯರ್ ನೀರಜಾ, ಸಹಾಯಕ ಇಂಜಿನಿಯರ್ ನರಸಯ್ಯ ಹಾಗೂ ಅಗ್ನಿಶಾಮಕ ಅಧಿಕಾರಿಗಳು ಧಾವಿಸಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ:ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಬಿದ್ದ ಜೂನಿಯರ್ ಆರ್ಟಿಸ್ಟ್ ಸಾವು