ಮುಂಬೈ:ಈಜಾಡಲು ಸಮುದ್ರಕ್ಕೆ ತೆರೆಳಿ ಇಬ್ಬರು ಮಕ್ಕಳು ಸಮುದ್ರ ಪಾಲಾಗಿದ್ದು, ಮೂವರನ್ನು ರಕ್ಷಣೆ ಮಾಡಲಾಗಿರುವ ಘಟನೆ ಶುಕ್ರವಾರ ಸಂಜೆ ಮುಂಬೈನ ವರ್ಲಿ ಬೀಚ್ನಲ್ಲಿ ನಡೆದಿದೆ.
ಕಾರ್ತಿಕ್ ಚೌಧರಿ 8, ಸವಿತಾ ಪಾಲ್ 12 ಮೃತ ಮಕ್ಕಳು. ವರ್ಲಿಯ ಕೋಳಿವಾಡದ ಹನುಮಾನ ಮಂದಿರದ ವಿಕಾಸ ಬಡಾವಣೆಯ 5 ಜನ ಮಕ್ಕಳು ಮಧ್ಯಾಹ್ನ 3:30ರ ಸುಮಾರಿಗೆ ವರ್ಲಿ ಬೀಚ್ಗೆ ಈಜಲು ಹೋಗಿದ್ದರು. ಈ ವೇಳೆ ಅಲೆಯ ಸೆಳೆತಕ್ಕೆ ಸಿಲುಕಿ 5 ಜನ ಮುಳುಗಲು ಆರಂಭಿಸಿದ್ದಾರೆ.
ಇನ್ನು ಅಲ್ಲೇ ಇದ್ದಂತಹ ಸ್ಥಳೀಯರು ಮಕ್ಕಳ ರಕ್ಷಣೆಗಾಗಿ ಸಮುದ್ರಕ್ಕೆ ಇಳಿದಿದ್ದಾರೆ. ಐದು ಜನರಲ್ಲಿ ಮೂವರನ್ನು ಮಾತ್ರ ರಕ್ಷಣೆ ಮಾಡಲು ಸಾದ್ಯವಾಗಿದ್ದು, ಇನ್ನು ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ.
ಇನ್ನು ರಕ್ಷಣೆ ಮಾಡಿದ್ದ ಮೂವರು ಮಕ್ಕಳು ಅಸ್ವಸ್ಥರಾಗಿದ್ದ ಹಿನ್ನೆಲೆ ಕೂಡಲೆ ಅವರನ್ನು ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಮಕ್ಕಳು ಚೇತರಿಸಿಕೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ:ಪಿಜಿ ಕೋರ್ಸ್ ಮುಗಿಸಿದ ಖುಷಿಯಲ್ಲಿ ಬೀಚ್ಗೆ ಹೋಗಿ ಸಮುದ್ರಪಾಲಾದ ಆಂಧ್ರದ ವಿದ್ಯಾರ್ಥಿ