ಕರ್ನಾಟಕ

karnataka

ETV Bharat / bharat

ಮಕ್ಕಳಿಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿ ಕಣ್ಣು ಕಿತ್ತ ಪಾಪಿಗಳು..! - ಪಾಕೂರ್ ಜಿಲ್ಲೆಯಲ್ಲಿ ಮಕ್ಕಳ ಬರ್ಬರ ಹತ್ಯೆ

ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತೈ ಮಾಡಿ, ಕಣ್ಣು ಕಿತ್ತು, ಮೃತದೇಹಗಳನ್ನು ಕೊಟ್ಟಿಗೆಯಲ್ಲಿ ಎಸೆದು ಆರೋಪಿಗಳು ಪರಾರಿಯಾಗಿದ್ದಾರೆ.

children brutally murdered in pakur
ಮಕ್ಕಳಿಬ್ಬರನ್ನು ಬರ್ಬರವಾಗಿ ಹತ್ಯೆಗೈದು ಕಣ್ಣು ಕಿತ್ತ ಪಾಪಿಗಳು

By

Published : Jan 28, 2022, 12:17 PM IST

ಪಾಕೂರ್ (ಜಾರ್ಖಂಡ್​): ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತೈ ಮಾಡಿ ಮೃತದೇಹಗಳನ್ನು ಕೊಟ್ಟಿಗೆಯಲ್ಲಿ ಎಸೆದು ಆರೋಪಿಗಳು ಪರಾರಿಯಾಗಿರುವ ಘಟನೆ ಜಾರ್ಖಂಡ್​ನ ಪಾಕೂರ್ ಜಿಲ್ಲೆಯಲ್ಲಿ ನಡೆದಿದೆ.

ಅಷ್ಟೇ ಅಲ್ಲದೆ ಮಕ್ಕಳ ಒಂದು ಕಣ್ಣನ್ನೂ ಪಾಪಿಗಳು ಕಿತ್ತಿದ್ದಾರೆ. ಪಾಕೂರ್ ಜಿಲ್ಲೆಯ ಅಂಬಾಡಿಹಾಳ ಎಂಬ ಗ್ರಾಮದ ಪ್ರೇಮ್ ಮರಾಂಡಿ ಎಂಬವರ 10 ಮತ್ತು 11 ವರ್ಷದ ಮಕ್ಕಳು ಇವರಾಗಿದ್ದಾರೆ. ನಿನ್ನೆ ಸಂಜೆ ಸಂಬಂಧಿಕರ ಮನೆಗೆ ತೆರಳಿದ್ದ ಮಕ್ಕಳು ರಾತ್ರಿಯಾದರೂ ಮನೆಗೆ ಹಿಂತಿರುಗಲಿಲ್ಲ. ಇಂದು ಬೆಳಗ್ಗೆ ಗ್ರಾಮದಿಂದ ಸ್ವಲ್ಪ ದೂರದಲ್ಲಿರುವ ಕೊಟ್ಟಿಗೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಇದನ್ನೂ ಓದಿ: 3 ವರ್ಷದ ಹೆಣ್ಣು ಮಗುವಿನ ಮೇಲೆ 30 ವರ್ಷದ ಕಾಮುಕನಿಂದ ಅತ್ಯಾಚಾರ ಯತ್ನ!

ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details