ಜಮ್ಮು ಮತ್ತು ಕಾಶ್ಮೀರ : ಪಾಕಿಸ್ತಾನದ ಆರೋಪಿತ ಗುಂಡಿನ ದಾಳಿಗೆ ಇಬ್ಬರು ಯೋಧರು ಗಂಭೀರ ಗಾಯಗೊಂಡಿರುವ ಘಟನೆ ಜಮ್ಮುವಿನಲ್ಲಿ ನಡೆದಿದೆ. ಇಲ್ಲಿನ ಅರ್ನಿಯಾ ಸೆಕ್ಟರ್ನಲ್ಲಿ ಪಾಕಿಸ್ತಾನ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಇಬ್ಬರು ಬಿಎಸ್ಎಫ್ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಜಮ್ಮುವಿನಲ್ಲಿ ಪಾಕ್ ಗುಂಡಿನ ದಾಳಿ ಆರೋಪ.. ಇಬ್ಬರು ಬಿಎಸ್ಎಫ್ ಯೋಧರಿಗೆ ಗಾಯ - Two BSF jawans injured
ಪಾಕಿಸ್ತಾನದ ಗುಂಡಿನ ದಾಳಿಗೆ ಇಬ್ಬರು ಯೋಧರು ಗಂಭೀರ ಗಾಯಗೊಂಡಿದ್ದಾರೆ.

ಜಮ್ಮುವಿನಲ್ಲಿ ಪಾಕ್ ಗುಂಡಿನ ದಾಳಿ : ಇಬ್ಬರು ಬಿಎಸ್ಎಫ್ ಯೋಧರಿಗೆ ಗಾಯ
Published : Oct 18, 2023, 7:58 AM IST
ಗಾಯಗೊಂಡ ಯೋಧರನ್ನು ಇಲ್ಲಿನ ಮೆಡಿಕಲ್ ಕಾಲೇಜಿಗೆ ಚಿಕಿತ್ಸೆಗೆ ಕರೆತರಲಾಗಿದೆ. ಗುಂಡಿನ ದಾಳಿಗೆ ಓರ್ವ ಯೋಧನ ಹೊಟ್ಟೆಗೆ ಗುಂಡು ತಗುಲಿದ್ದು, ಇನ್ನೋರ್ವ ಯೋಧನ ಕೈಗೆ ಗಾಯವಾಗಿದೆ. ಗಾಯಗೊಂಡ ಯೋಧರಿಗೆ ಚಿಕಿತ್ಸೆ ಮುಂದುವರೆದಿದೆ. ಗಾಯಾಳುಗಳನ್ನು ಕರೆದೊಯ್ಯುವ ದೃಶ್ಯಾವಳಿಗಳು ಲಭ್ಯವಾಗಿದೆ.
ಇದನ್ನೂ ಓದಿ :ದಕ್ಷಿಣ ಕಾಶ್ಮೀರದಲ್ಲಿ ಸೇನೆ, ಉಗ್ರರ ನಡುವೆ ಗುಂಡಿನ ಚಕಮಕಿ: ಮೂವರು ಯೋಧರಿಗೆ ಗಾಯ