ಭದ್ರಾಡ್ರಿ(ತೆಲಂಗಾಣ):ಕಾಮುಕ ಸಹೋದರರಿಬ್ಬರು ಒಡಹುಟ್ಟಿದ ಸಹೋದರಿ ಮೇಲೆ ಬಾಲ್ಯದಿಂದಲೂ ಲೈಂಗಿಕ ಕಿರುಕುಳ ನೀಡಿರುವ ಅಮಾನವೀಯ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಸಂತ್ರಸ್ತೆ ತೆಲಂಗಾಣದ ಭದ್ರಾಡ್ರಿ ಕೊಟ್ಟಗುಡೆಮ್ ಜಿಲ್ಲೆಯಲ್ಲಿ ವಾಸವಾಗಿದ್ದು, ಮಗುವಾಗಿದ್ದಾಗಲೇ ಈಕೆಯ ತಂದೆ ಸಾವನ್ನಪ್ಪಿದ್ದರಿಂದ ಕುಟುಂಬದ ಜವಾಬ್ದಾರಿ ತಾಯಿ ಮೇಲೆ ಬಿದ್ದಿತ್ತು. 9ನೇ ತರಗತಿಯಲ್ಲಿದ್ದಾಗ(2009) ಸ್ವಂತ ಅಣ್ಣ ಕಿರುಕುಳ ನೀಡಲು ಆರಂಭಿಸಿದ್ದಾನೆ. ಈ ವೇಳೆ, ಕುಟುಂಬ ಮನುಗುರುನಲ್ಲಿ ವಾಸವಾಗಿತ್ತು.. ಇದಾದ ಬಳಿಕ ಕೊಟ್ಟಗುಡೆಮ್ಗೆ ಬಂದಿದ್ದಾರೆ. ಆಕೆ ದೊಡ್ಡವಳಾದರೂ ಅಣ್ಣ ಚಿತ್ರಹಿಂಸೆ ನೀಡುವುದನ್ನ ಮಾತ್ರ ನಿಲ್ಲಿಸಿಲ್ಲ. ಇದರ ಮಧ್ಯೆ ಅಜ್ಜಿಯ ಮನೆಗೆ ತೆರಳಿದ್ದ ವೇಳೆ ಚಿಕ್ಕಪ್ಪನ ಮಗ ಸಹ ಅದೇ ರೀತಿ ತನ್ನೊಂದಿಗೆ ನಡೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾಳೆ. ಇದರ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಸಹ ಹಾಕಿದ್ದಾನೆಂದು ಆಕೆ ಹೇಳಿಕೊಂಡಿದ್ದಾಳೆ.