ಔರಂಗಾಬಾದ್(ಮಹಾರಾಷ್ಟ್ರ):”ಹುಟ್ಟುತ್ತಾ ಹುಟ್ಟುತ್ತಾ ಅಣ್ಣ- ತಮ್ಮಂದಿರು, ಬೆಳೆಯುತ್ತಾ ಬೆಳೆಯುತ್ತಾ ದಾಯಾದಿಗಳು..” ಈ ಗಾದೆ ಅನೇಕ ಪ್ರಕರಣಗಳಲ್ಲಿ ಸಾಬೀತುಗೊಂಡಿದೆ. ಸದ್ಯ ಅಂತಹ ಮತ್ತೊಂದು ಘಟನೆ ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ನಡೆದಿದೆ.
ಜಮೀನು ವಿವಾದಕ್ಕೋಸ್ಕರ ಇಬ್ಬರು ಒಡಹುಟ್ಟಿದ ಸಹೋದರರು ಹೊಡೆದಾಡಿಕೊಂಡಿರುವ ವಿಡಿಯೋ ಸದ್ಯ ವೈರಲ್ ಆಗಿದ್ದು, ಔರಂಗಾಬಾದ್ನ ಫುಲಾಂಬ್ರಿ ತಾಲೂಕಿನ ಪಾಲ್ ಗ್ರಾಮದಲ್ಲಿ ನಡೆದಿದೆ. ಸಹೋದರರಾದ ಜಗದೀಶ್ ಕುಮಾರ್ ಹಾಗೂ ಸತೀಶ್ ಕುಮಾರ್ ಜಮೀನು ವಿಚಾರವಾಗಿ ಗದ್ದೆಯಲ್ಲೇ ಹೊಡೆದಾಡಿಕೊಂಡಿದ್ದಾರೆ.