ಕರ್ನಾಟಕ

karnataka

ETV Bharat / bharat

ತಮ್ಮನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಅಣ್ಣನ ಸಾವು; ಇಬ್ಬರು ಮಕ್ಕಳ ಕಳೆದುಕೊಂಡ ಪೋಷಕರು! - ತಮ್ಮನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಹಿರಿಯ ಸಹೋದರ

ಅಣ್ಣ ಮತ್ತು ತಮ್ಮ ಕೆಲವೇ ಗಂಟೆಗಳ ಅಂತರದಲ್ಲಿ ಕೊನೆಯುಸಿರೆಳೆದ ಘಟನೆ ತೆಲಂಗಾಣದ ಜಗಿತ್ಯಾಲ ಜಿಲ್ಲೆಯಲ್ಲಿ ನಡೆದಿದೆ.

brothers died in few hours between  brothers died in few hours between in Telangana  Tragedy news from Telangana  Brothers died in Telangana  ಪ್ರೀತಿಯ ಸಹೋದರನ ಅಂತ್ಯಕ್ರಿಯೆ  ಮಕ್ಕಳಿಬ್ಬರನ್ನು ಕಳೆದುಕೊಂಡ ಪೋಷಕರು  ಅಣ್ಣ ತಮ್ಮ ಕೆಲವೇ ಗಂಟೆಗಳಲ್ಲಿ ಮೃತ  ಉನ್ನತ ವ್ಯಾಸಂಗ ಮುಗಿಸಿ ಬೇರೆ ಬೇರೆ ಕಡೆ ಕೆಲಸ  ಕಿರಿಯ ಸಹೋದರನ ಅಕಾಲಿಕ ಮರಣ  ತಮ್ಮನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಹಿರಿಯ ಸಹೋದರ  ಕೆಲವೇ ಗಂಟೆಗಳಲ್ಲಿ ಸಹೋದರರಿಬ್ಬರೂ ಹೃದಯಾಘಾತದಿಂದ ಮೃತ
ಕೆಲವೇ ಗಂಟೆಯಲ್ಲಿ ಮಕ್ಕಳಿಬ್ಬರನ್ನು ಕಳೆದುಕೊಂಡ ಪೋಷಕರು

By

Published : Jan 9, 2023, 8:44 AM IST

Updated : Jan 9, 2023, 12:22 PM IST

ಜಗಿತ್ಯಾಲ (ತೆಲಂಗಾಣ) : ಅವರಿಬ್ಬರೂ ಒಡಹುಟ್ಟಿದ್ದವರು. ಆದರೆ, ಚಿಕ್ಕಂದಿನಿಂದಲೂ ಪ್ರಾಣ ಸ್ನೇಹಿತರಂತಿದ್ದರು. ಇವರಿಗೆ ಮತ್ತೊಬ್ಬ ಕಿರಿ ಸಹೋದರನೂ ಇದ್ದಾನೆ. ಉನ್ನತ ವ್ಯಾಸಂಗ ಮುಗಿಸಿ ಬೇರೆ ಬೇರೆ ಕಡೆ ಕೆಲಸ ಮಾಡುತ್ತಿದ್ದು ಹಬ್ಬ-ಹರಿದಿನಗಳಲ್ಲಿ ಒಂದೆಡೆ ಸೇರಿ ಸಂತಸದಿಂದ ಕಾಲ ಕಳೆಯುತ್ತಿದ್ದರು. ಈ ಸಂಕ್ರಾಂತಿಯನ್ನೂ ಖುಷಿಯಿಂದ ಆಚರಿಸಲು ಸಿದ್ಧತೆ ನಡೆಸುತ್ತಿರುವಾಗಲೇ ಇಬ್ಬರು ಸಹೋದರರ ಪ್ರಾಣಪಕ್ಷಿ ಹಾರಿ ಹೋಗಿದೆ.

ಹಿರಿ ಸಹೋದರನಿಗೆ ತನ್ನ ಮೊದಲನೇ ಕಿರಿ ಸಹೋದರನ ಅಕಾಲಿಕ ಮರಣವನ್ನು ಅರಗಿಸಿಕೊಳ್ಳಲಾಗಲಿಲ್ಲ. ತಮ್ಮನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಹಿರಿ ಸಹೋದರ ಅಳುತ್ತಾಲೇ ಕುಸಿದು ಬಿದ್ದು ಕೊನೆಯುಸಿರೆಳೆದರು. ಕೆಲವೇ ಗಂಟೆಗಳಲ್ಲಿ ಸಹೋದರರಿಬ್ಬರೂ ಹೃದಯಾಘಾತದಿಂದ ಮೃತಪಟ್ಟಿದ್ದು ಕುಟುಂಬಸ್ಥರು, ಸಂಬಂಧಿಕರು ತೀವ್ರ ದುಃಖಿತರಾಗಿದ್ದರು. ಇಂಥದ್ದೊಂದು ಮನಕಲಕುವ ಘಟನೆ ಜಗಿತ್ಯಾಲ ಜಿಲ್ಲೆಯ ಮೆಟ್ಪಲ್ಲಿ ಪಟ್ಟಣದಲ್ಲಿ ನಡೆಯಿತು.

ಸಂಬಂಧಿಕರು ಮತ್ತು ಸ್ಥಳೀಯರು ಹೇಳುವಂತೆ, ಮೆಟ್ಪಲ್ಲಿ ಪಟ್ಟಣದ ಬೋಗ ಭೂಷಣ್ ಅವರಿಗೆ ಮೂವರು ಗಂಡು ಮಕ್ಕಳಿದ್ದಾರೆ. ಹಿರಿಯ ಪುತ್ರ ಸಚಿನ್ (38) ಕೋರುಟ್ಲ ಪಟ್ಟಣದ ಕೆಡಿಸಿಸಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಎರಡನೇ ಮಗ ಶ್ರೀನಿವಾಸ್ (36) ಹೈದರಾಬಾದ್‌ನಲ್ಲಿ ಸಾಫ್ಟ್‌ವೇರ್ ಉದ್ಯೋಗಿ. ಮೂರನೇ ಮಗ ಅರವಿಂದ್ ಹೈದರಾಬಾದ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಶ್ರೀನಿವಾಸ್‌ಗೆ ಶನಿವಾರ ಹೈದರಾಬಾದ್‌ನಲ್ಲಿ ಹಠಾತ್‌ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟೊತ್ತಿಗಾಗಲೇ ಶ್ರೀನಿವಾಸ್​ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದರು. ಈ ಸುದ್ದಿ ತಿಳಿದು ಶ್ರೀನಿವಾಸ್​ ಪೋಷಕರು ಮತ್ತು ಸಂಬಂಧಿಕರು​ ಹೈದರಾಬಾದ್​ಗೆ ತೆರಳಿದ್ದರು. ಶ್ರೀನಿವಾಸ್​ನನ್ನು ನೋಡಿದ ಅವರ ಆಕ್ರಂದನ ಮುಗಿಲು ಮುಟ್ಟಿತ್ತು.

ಇದನ್ನೂ ಓದಿ:ಪಂಜಾಬ್​ನಲ್ಲಿ ಲಂಚ ಪ್ರಕರಣ: 2022ರಲ್ಲಿ ಮಾಜಿ ಸಚಿವರು, ಐಎಎಸ್ ಅಧಿಕಾರಿ ಸೇರಿ 172 ಆರೋಪಿಗಳ ಸೆರೆ

ಪೋಷಕರು ಮತ್ತು ಸಂಬಂಧಿಕರು ಶ್ರೀನಿವಾಸ್ ಮೃತದೇಹವನ್ನು ಸ್ವಗ್ರಾಮಕ್ಕೆ ತಂದು ಮುಂದಿನ ಕ್ರಾರ್ಯಕ್ರಮ ಕೈಗೊಂಡಿದ್ದರು. ಇತ್ತ ತನ್ನ ಸಹೋದರನ ಸಾವಿನ ಸುದ್ದಿ ಕೇಳಿದ ಸಚಿನ್ ಭಾವನಾತ್ಮಕವಾಗಿ ವಿಪರೀತ ನೋವು ಅನುಭವಿಸಿದ್ದರು. ಭಾನುವಾರ ಪಟ್ಟಣದಲ್ಲಿ ಅಂತಿಮ ಸಂಸ್ಕಾರ ನಡೆಸುತ್ತಿದ್ದಾಗಲೇ ಸಚಿನ್ ಮತ್ತಷ್ಟು ದುಃಖಿತರಾಗಿದ್ದರು. ಅಳುತ್ತಲೇ ಕುಸಿದು ಬಿದ್ದಿದ್ದರು. ಸಂಬಂಧಿಕರು ಮತ್ತು ಸ್ಥಳೀಯರು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಇತ್ತ ಪೋಷಕರು ಶ್ರೀನಿವಾಸ್​ ಅಂತ್ಯಕ್ರಿಯೆ ನೆರವೇರಿಸಿ ಆಸ್ಪತ್ರೆಗೆ ತೆರಳಿದ್ದಾರೆ.

ಆಸ್ಪತ್ರೆಯಲ್ಲಿ ಸಚಿನ್ ಅವರನ್ನು ಪರೀಕ್ಷಿಸಿದ ವೈದ್ಯರು​ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಸುದ್ದಿ ತಿಳಿದ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮನಕಲಕುವಂತಿತ್ತು. ಕೆಲವೇ ಗಂಟೆಗಳಲ್ಲಿ ಇಬ್ಬರು ಪುತ್ರರನ್ನು ಕಳೆದುಕೊಂಡೆವಲ್ಲಾ ಎಂದು ಪೋಷಕರು ರೋದಿಸುತ್ತಿದ್ದರು. ಸಚಿನ್​ ಅವರ ಅಂತ್ಯಸಂಸ್ಕಾರ ಮುಗಿಸಿದ ಪಾಲಕರು ಹಾಗೂ ಸಂಬಂಧಿಕರು ದುಃಖ ಮುಗಿಲು ಮುಟ್ಟಿತ್ತು. ಸಚಿನ್‌ಗೆ ಪತ್ನಿ ಇದ್ದಾರೆ. ಶ್ರೀನಿವಾಸ್‌ ಅವರಿಗೆ ಪತ್ನಿ ಜೊತೆ 14 ತಿಂಗಳ ಹೆಣ್ಣು ಮಗು ಇದೆ. ಎಲ್ಲರಿಗೂ ಆತ್ಮೀಯರಾಗಿದ್ದ ಅಣ್ಣ-ತಮ್ಮನ ದಿಢೀರ್‌ ಸಾವು ಗ್ರಾಮದಲ್ಲಿ ಸ್ಮಶಾನ ಮೌನ ಉಂಟುಮಾಡಿದೆ.

ಇದನ್ನೂ ಓದಿ:ಜಾರ್ಖಂಡ್‌: ಮಾರುಕಟ್ಟೆ ಪ್ರದೇಶದಲ್ಲಿ ನಿಲ್ಲಿಸಿದ್ದ ಬೈಕ್​ನಲ್ಲಿ ಬಾಂಬ್ ಸ್ಫೋಟ

Last Updated : Jan 9, 2023, 12:22 PM IST

ABOUT THE AUTHOR

...view details