ಭರತ್‌ಪುರ(ರಾಜಸ್ಥಾನ):ಅಪ್ತಾಪ್ತೆ ಮೇಲೆ ಮೂವರು ಕಾಮುಕರು ಒಂದು ತಿಂಗಳಲ್ಲಿ ಆರು ಬಾರಿ ಅತ್ಯಾಚಾರವೆಸಗಿರುವ ಘಟನೆ ಭರತ್‌ಪುರ ನಗರದ ಮಥುರಾ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ನಾಚಿಕೆಗೇಡಿನ ಸಂಗತಿ ಎಂದರೆ ಅತ್ಯಾಚಾರವೆಸಗಲು ಆರೋಪಿಗಳಿಗೆ ಬೇರೆ ಇಬ್ಬರು ಯುವತಿಯರು ಸಹಾಯ ಮಾಡಿದ್ದಾರೆಂದು ತಿಳಿದುಬಂದಿದೆ.
ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ವೈರಲ್ ಮಾಡುವುದಾಗಿ ಅಪ್ರಾಪ್ತೆಗೆ ಬೆದರಿಸಿ ಅತ್ಯಾಚಾರ ಮಾಡಿದ್ದಾರೆ. ಸಂತ್ರಸ್ತೆ ತನ್ನ ತಾಯಿ ಬಳಿ ಈ ವಿಷಯ ತಿಳಿಸಿದ್ದ ಬಳಿಕ ಮಥುರಾ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೋರ್ವನ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.
ಮೇ 3 ರಂದು 16 ವರ್ಷದ ಮಗಳನ್ನು ವಿಜಯ್ ಹನುಮಾನ್ ದೇವಸ್ಥಾನದ ಬಳಿಯ ಲೋಹಾಘರ್ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವ ಮೋನು, ತರ್ನವ್ ಮತ್ತು ಸಂತೋಷ್ ಎಂಬ ಯುವಕರು ಇಬ್ಬರು ಸ್ನೇಹಿತೆಯರ ಸಹಾಯದಿಂದ ಕರೆದೊಯ್ದಿದ್ದಾರೆ. ಅವರ ಯಾವುದೋ ಆಮಿಷಕ್ಕೆ ಒಳಗಾಗಿದ್ದಾಳೆ. ನಂತರ ಮಾದಕ ದ್ರವ್ಯ ಕುಡಿಸಿ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಮೊಬೈಲ್‌ನಿಂದ ಅಶ್ಲೀಲ ಫೋಟೋ, ವಿಡಿಯೋ ತೆಗೆದಿದ್ದಾರೆ ಎಂದು ಬಾಲಕಿ ತಾಯಿ ದೂರು ಸಲ್ಲಿಸಿದ್ದಾರೆ.