ಕರ್ನಾಟಕ

karnataka

ETV Bharat / bharat

ತೃತೀಯಲಿಂಗಿಗಳ ಮೇಲೆ ಹಲ್ಲೆ ಮಾಡಿ ಕೂದಲು ಕತ್ತರಿಸಿದ ವಿಡಿಯೋ ವೈರಲ್​: ಇಬ್ಬರ ಬಂಧನ - ತೂತುಕುಡಿ ವಿಡಿಯೋ ವೈರಲ್​

ತಮಿಳುನಾಡಿನ ತೂತುಕುಡಿಯಲ್ಲಿ ಇಬ್ಬರು ತೃತೀಯ ಲಿಂಗಿಗಳ ಮೇಲೆ ಇಬ್ಬರು ಆರೋಪಿಗಳು ಹಲ್ಲೆ ಮಾಡಿ ಅವರ ಕೂದಲನ್ನು ಕತ್ತರಿಸಿರುವ ವಿಡಿಯೋ ವೈರಲ್​ ಆಗಿದೆ.

two-arrested-for-thrashing-transwoman-in-thoothukudi
ತೃತೀಯಲಿಂಗಿಗಳ ಮೇಲೆ ಹಲ್ಲೆ ಮಾಡಿ ಕೂದಲು ಕತ್ತರಿಸಿದ ವಿಡಿಯೋ ವೈರಲ್​: ಇಬ್ಬರ ಬಂಧನ

By

Published : Oct 13, 2022, 5:01 PM IST

ಚೆನ್ನೈ (ತಮಿಳುನಾಡು):ತಮಿಳುನಾಡಿನ ತೂತುಕುಡಿಯಲ್ಲಿ ಇಬ್ಬರು ತೃತೀಯ ಲಿಂಗಿಗಳನ್ನು ನಿಂದಿಸಿ, ಅವರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಗುರುವಾರ ಬೆಳಗ್ಗೆ ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಲ್ಲೆ ಮಾಡುತ್ತಿದ್ದ ವಿಡಿಯೋ ವೈರಲ್ ಆದ ನಂತರ ಈ ಬೆಳವಣಿಗೆ ನಡೆದಿದೆ.

ತೂತುಕುಡಿಯಲ್ಲಿ ಇಬ್ಬರು ತೃತೀಯ ಲಿಂಗಿಗಳ ಮೇಲೆ ಕೆಲವರು ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿತ್ತು. ಇದಾದ ಬಳಿಕ ಸಂತ್ರಸ್ತರು ಸೇರಿದಂತೆ ಘಟನೆಯಲ್ಲಿ ಭಾಗಿಯಾಗಿರುವವರನ್ನು ಗುರುತಿಸಲಾಗಿದೆ ಎಂದು ತಮಿಳುನಾಡು ದಕ್ಷಿಣ ವಲಯ ಐಜಿ ಆಸ್ರಾ ಗರ್ಗ್ ಹೇಳಿದ್ದಾರೆ.

ಅಲ್ಲದೇ, ವಿಡಿಯೋದಲ್ಲಿ ಕಾಣಿಸಿಕೊಂಡ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದೂ ತಮಿಳುನಾಡು ದಕ್ಷಿಣ ವಲಯದ ಪೊಲೀಸ್​ ಅಧಿಕಾರಿಗಳು ಟ್ವೀಟ್​ ಮಾಡಿದ್ದಾರೆ. ಇನ್ನು, ತೃತೀಯಲಿಂಗಿಗಳ ಮೇಲೆ ಹಲ್ಲೆ ಮಾಡಿದ್ದು ಮಾತ್ರವಲ್ಲದೇ, ಅವರ ಕೂದಲನ್ನೂ ಆರೋಪಿಗಳು ಕತ್ತರಿಸಿ ಹಾಕಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ:ಹಾವೇರಿ: ಸುತ್ತಿಗೆಯಿಂದ ತಲೆಗೆ ಹೊಡೆದು ವ್ಯಕ್ತಿಯ ಬರ್ಬರ ಕೊಲೆ

ABOUT THE AUTHOR

...view details