ಹೈದರಾಬಾದ್:ಯುವತಿಯ ಮೇಲೆ ಇಬ್ಬರು ದುರುಳರು ಅತ್ಯಾಚಾರ ಎಸಗಿರುವ ಘಟನೆ ಶನಿವಾರ ಮಧ್ಯರಾತ್ರಿ ಹೈದರಾಬಾದ್ನ ಹಳೆ ಬಸ್ತಿ ಬಂಡ್ಲಗುಡ ಎಂಬಲ್ಲಿ ನಡೆದಿದೆ. ಘಟನೆ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಗೌಸನಗರದ ಮುಳಕಲಪೆಂಟ ಶ್ರೀಕಾಂತ್ (22) ಮತ್ತು ಅಫಜಲಗಂಜ್ನ ಪಾನಗಂಟಿ ಕಾಶಿವಿಶ್ವನಾಥ್ (32) ಬಂಧಿತರು.
ಘಟನೆಯ ಪೂರ್ಣ ವಿವರ:ಇನ್ಸ್ಪೆಕ್ಟರ್ ಮೊಹಮ್ಮದ್ ಶಾಕಿರ್ ಅಲಿ ಪ್ರತಿಕ್ರಿಯಿಸಿ, "ಸಂತ್ರಸ್ತ ಯುವತಿ (21) ಸೂರ್ಯಪೇಟೆ ಮೂಲದವಳು. ತನ್ನ ಸಹೋದರ ಹಾಗೂ ತಾಯಿಯೊಂದಿಗೆ ಮನೆಯಲ್ಲಿ ವಾಸವಾಗಿದ್ದಳು. ಶನಿವಾರ ತನ್ನ ಸಹೋದರನೊಂದಿಗೆ ಯಾವುದೋ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾಳೆ. ಇದರಿಂದ ಕೋಪಗೊಂಡಿದ್ದ ಆಕೆಯ ಸಹೋದರ ಥಳಿಸಿದ್ದಾನೆ. ನೊಂದ ಯುವತಿ ಒಂಟಿಯಾಗಿ ಬಸ್ ನಿಲ್ದಾಣಕ್ಕೆ ಬಂದು ಹೈದರಾಬಾದ್ ಬಸ್ ಹತ್ತಿದ್ದಾಳೆ. ರಾತ್ರಿ 10.40ರ ಸುಮಾರಿಗೆ ಹೈದರಾಬಾದ್ನ ಎಂಜಿಬಿಎಸ್ ಬಸ್ ನಿಲ್ದಾಣದಲ್ಲಿ ಇಳಿದಿದ್ದಾಳೆ. ಅಲ್ಲಿಂದ ಹೊರಬಂದು ಟೀ ಸ್ಟಾಲ್ನಲ್ಲಿ ಟೀ ಕುಡಿದಿದ್ದಾಳೆ. ಬಳಿಕ ಅಫ್ಜಲ್ಗಂಜ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಆರೋಪಿಗಳಾದ ಶ್ರೀಕಾಂತ್ ಮತ್ತು ಕಾಶಿವಿಶ್ವನಾಥ್ ತಮ್ಮ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದು ವಿಚಾರಿಸಿದ್ದಾರೆ. ತಾನು ಸಮೀಪದ ಪೊಲೀಸ್ ಠಾಣೆ ಹೋಗುತ್ತಿರುವುದಾಗಿ ಯುವತಿ ತಿಳಿಸಿದ್ದಾಳೆ. ಈ ವೇಳೆ ಆರೋಪಿಗಳು ನಾವೂ ಅಲ್ಲಿಗೆ ಹೋಗುತ್ತಿದ್ದೇವೆ, ನಿನ್ನನ್ನು ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿ ಬೈಕ್ ಹತ್ತಿಸಿಕೊಂಡಿದ್ದಾರೆ".