ನಂದ್ಯಾಲ (ಆಂಧ್ರಪ್ರದೇಶ) : ಭಾರತೀಯ ರಿಸರ್ವ್ ಬ್ಯಾಂಕ್ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಂಡಿದೆ. ಇದನ್ನೇ ಬಂಡವಾಳ ಮಾಡಿಕೊಂಡು 15% ಕಮಿಷನ್ ಹೆಸರಿನಲ್ಲಿ 2.20 ಕೋಟಿ ರೂ ವಂಚನೆ ಮಾಡಿದ್ದ ಆರೋಪಿಗಳನ್ನು ನಂದ್ಯಾಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ನಂದ್ಯಾಲ ಡಿಎಸ್‌ಪಿ ಮಹೇಶ್ವರ ರೆಡ್ಡಿ, "ಶ್ರೀಕಾಕುಳಂ ಜಿಲ್ಲೆಯ ಸರಬುಜ್ಜಿಲಿ ಮಂಡಲದ ಟೆಲಿಕಿಪೆಂಟ ಗ್ರಾಮದ ಸೋಭನ್ ಬಾಬು ಹಾಗೂ ಅದೇ ಜಿಲ್ಲೆಯ ನಂದಿಗಂ ಮಂಡಲದ ದೇವಪುರಂ ಗ್ರಾಮದ ಚಿನ್ನಬಾಬು ಸೇರಿದಂತೆ ಆರು ಮಂದಿ ನಂದ್ಯಾಲ ಮಂಡಲದ ನೂನೆಪಲ್ಲಿಯ ಶ್ರೀನಿವಾಸ ರೆಡ್ಡಿ ಹಾಗೂ ಆತನ ಸ್ನೇಹಿತರನ್ನು ಭೇಟಿಯಾಗಿದ್ದಾರೆ. ಈ ವೇಳೆ ನಮ್ಮ ಬಳಿ 2000 ರೂ. ನೋಟುಗಳಿವೆ. ಸದ್ಯದಲ್ಲೇ ಈ 2 ಸಾವಿರ ರೂ. ಮುಖಬೆಲೆಯ ನೋಟುಗಳು ರದ್ದಾಗಲಿದ್ದು, ಯಾರಾದರೂ 500 ರೂ. ನೋಟುಗಳನ್ನು ನೀಡಿದರೆ ಶೇ.15ರಷ್ಟು ಕಮಿಷನ್ ಜೊತೆಗೆ 2000 ರೂ. ನೋಟುಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ :ಹುಬ್ಬಳ್ಳಿ +: ಮಹಿಳೆಯರಿಗೆ ರಿಯಾಯಿತಿ ಆಸೆ ತೋರಿಸಿ ಲಕ್ಷಾಂತರ ರೂ ಮೋಸ ಮಾಡಿದ ಕಂಪನಿ.. ಆರೋಪ
ಕಮಿಷನ್ ಆಸೆಗಾಗಿ ಶ್ರೀನಿವಾಸ ರೆಡ್ಡಿ ಮತ್ತು ಅವರ ಸ್ನೇಹಿತರು 500 ರೂ. ನೋಟುಗಳೊಂದಿಗೆ ರೈತನಗರಂ ಗ್ರಾಮಕ್ಕೆ ತೆರಳಿದ್ದು, ಅಲ್ಲಿ ಆರೋಪಿಗಳಿಗೆ ಒಟ್ಟು 2.20 ಕೋಟಿ ಮೌಲ್ಯದ ಐನೂರು ನೋಟುಗಳನ್ನು ನೀಡಿದ್ದಾರೆ. ಬಳಿಕ, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಈ ಬಗ್ಗೆ ಶ್ರೀನಿವಾಸ ರೆಡ್ಡಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು.