ಜೈಪುರ(ರಾಜಸ್ಥಾನ):ರಾಜಸ್ಥಾನದ ಉದಯಪುರದಲ್ಲಿ ನಡೆದಿರುವ ಟೈಲರ್ ಕನ್ಹಯ್ಯಾ ಲಾಲ್ ಶಿರಚ್ಛೇದ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನ ಇಂದು ಜೈಪುರ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಕರೆತರುತ್ತಿದ್ದ ಅಲ್ಲಿ ಸೇರಿದ್ದ ಆಕ್ರೋಶಿತ ಜನರ ಗುಂಪೊಂದು ಹಲ್ಲೆ ನಡೆಸಿದೆ. ಈ ವೇಳೆ ಆರೋಪಿಗಳ ಬಟ್ಟೆಯನ್ನು ಹರಿದು ಹಾಕಿದ್ದಾರೆ. ಜೈಪುರ ನ್ಯಾಯಾಲಯದ ಹೊರಗಡೆ ಈ ಘಟನೆ ನಡೆದಿದೆ.
ಆರೋಪಿಗಳನ್ನ ಪೊಲೀಸರು ವ್ಯಾನ್ನೊಳಗೆ ಕರೆದುಕೊಂಡು ಹೋಗಲು ಮುಂದಾಗುತ್ತಿದ್ದಂತೆ ಅಲ್ಲಿ ಸೇರಿದ್ದ ಜನರ ಗುಂಪು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರಿಗೆ ಯಾವುದೇ ರೀತಿಯ ಹೆಚ್ಚಿನ ತೊಂದರೆಯಾಗಿಲ್ಲ. ಆರೋಪಿಗಳನ್ನ ಜುಲೈ 12ರವರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಕಸ್ಟಡಿಗೆ ನೀಡಲಾಗಿದೆ. ಕೊಲೆ ಆರೋಪಿಗಳಾದ ರಿಯಾಜ್ ಅಖ್ತಾರಿ, ಮೊಹಮ್ಮದ್, ಮೌಸಿನ್ ಮತ್ತು ಆಸೀಫ್ ಎಂಬುವವರನ್ನ ಎನ್ಐಎ ನ್ಯಾಯಾಲಯ 10 ದಿನಗಳ ಪೊಲೀಸ್ ವಶಕ್ಕೆ ನೀಡಿ, ಆದೇಶ ಹೊರಡಿಸಿದೆ. ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನ ಟ್ವೀಟ್ ಮಾಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್ ಹಾಕಿದ್ದಕ್ಕಾಗಿ ಕನ್ಹಯ್ಯಾ ಲಾಲ್ ಅವರನ್ನು ಹಂತಕರು ಶಿರಚ್ಛೇದ ಮಾಡಿದ್ದರು.