ಕರ್ನಾಟಕ

karnataka

ETV Bharat / bharat

ಜರ್ನಲಿಸ್ಟ್ ರಾಣಾ ಅಯೂಬ್ ಟ್ವಿಟರ್ ಖಾತೆಗೆ ತಡೆ - ಮಾಹಿತಿ ತಂತ್ರಜ್ಞಾನ ಕಾಯ್ದೆ 2000

ಅಯೂಬ್ ಅವರ ಟ್ವೀಟ್​ಗೆ ಟೆನಿಸ್ ತಾರೆ ಮಾರ್ಟಿನಾ ನವ್ರಾಟಿಲೋವಾ ಪ್ರತಿಕ್ರಿಯೆ ನೀಡಿದ್ದು, ಹೀಗಾದ್ರೆ ಮುಂದೇನು? ತುಂಬಾ ಆತಂಕಕಾರಿ ಎಂದು ಬರೆದು, ರಾಣಾ ಅಯೂಬ್ ಬೆಂಬಲಕ್ಕೆ ನಿಂತಿದ್ದಾರೆ. ಟ್ವಿಟರ್ ನೀಡಿರುವ ನೋಟಿಸ್ ಒಂದು ಬಗ್ ಆಗಿರಬಹುದು ಅಥವಾ ಯಾವುದೋ ಹಳೆಯ ಘಟನೆಗೆ ತಡವಾಗಿ ಬಂದ ಪ್ರತಿಕ್ರಿಯೆ ಇರಬಹುದು ಎಂದು ಪ್ರಸಾರ ಭಾರತಿಯ ಮಾಜಿ ಸಿಇಓ ಶಶಿ ಶೇಖರ ವೆಂಪಾಟಿ ಬರೆದಿದ್ದಾರೆ.

twitter-withholds-journalist-rana-ayyubs-account-in-india
twitter-withholds-journalist-rana-ayyubs-account-in-india

By

Published : Jun 27, 2022, 12:26 PM IST

ನವದೆಹಲಿ:ವಿವಾದಾತ್ಮಕ ಪತ್ರಕರ್ತೆ ರಾಣಾ ಅಯೂಬ್ ಅವರ ಟ್ವಿಟರ್ ಖಾತೆಯನ್ನು ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಅನ್ವಯ ಟ್ವಿಟರ್ ಸಂಸ್ಥೆ ತಾತ್ಕಾಲಿಕವಾಗಿ ತಡೆ ಹಿಡಿದಿದೆ. ಈ ಬಗ್ಗೆ ಸ್ವತಃ ರಾಣಾ ಅಯೂಬ್ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದು, "ಹಲೋ ಟ್ವಿಟರ್, ಏನಿದೆಲ್ಲ?" (Hello @Twitter, what exactly is this?) ಎಂದು ಪ್ರಶ್ನೆ ಮಾಡಿದ್ದಾರೆ.

ಅಯೂಬ್ ಗೆ ಟ್ವಿಟರ್ ನೀಡಿದ ನೋಟಿಸ್​ ನಲ್ಲಿ ಹೀಗೆ ಬರೆಯಲಾಗಿದೆ: ಭಾರತದ ಸ್ಥಳೀಯ ಕಾಯ್ದೆಗಳನ್ನು ಪಾಲನೆ ಮಾಡುವುದಕ್ಕಾಗಿ ನಾವು ಈ ಕೆಳಗೆ ತೋರಿಸಲಾದ ಖಾತೆಯನ್ನು ದೇಶದ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ಅಡಿಯಲ್ಲಿ ತಡೆ ಹಿಡಿದಿದ್ದೇವೆ

ಅಯೂಬ್ ಅವರ ಟ್ವೀಟ್​ಗೆ ಟೆನಿಸ್ ತಾರೆ ಮಾರ್ಟಿನಾ ನವ್ರಾಟಿಲೋವಾ ಪ್ರತಿಕ್ರಿಯೆ ನೀಡಿದ್ದು,ಹೀಗಾದ್ರೆ ಮುಂದೇನು? ತುಂಬಾ ಆತಂಕಕಾರಿ ಎಂದು ಬರೆದು, ರಾಣಾ ಅಯೂಬ್ ಬೆಂಬಲಕ್ಕೆ ನಿಂತಿದ್ದಾರೆ. ಟ್ವಿಟರ್ ನೀಡಿರುವ ನೋಟಿಸ್ ಒಂದು ಬಗ್ ಆಗಿರಬಹುದು ಅಥವಾ ಯಾವುದೋ ಹಳೆಯ ಘಟನೆಗೆ ತಡವಾಗಿ ಬಂದ ಪ್ರತಿಕ್ರಿಯೆ ಇರಬಹುದು ಎಂದು ಪ್ರಸಾರ ಭಾರತಿಯ ಮಾಜಿ ಸಿಇಓ ಶಶಿ ಶೇಖರ ವೆಂಪಾಟಿ ಬರೆದಿದ್ದಾರೆ.

ವಾಷಿಂಗ್ಟನ್​​ ಪೋಸ್ಟ್ ಪತ್ರಿಕೆಗೆ ಅಂಕಣಗಾರ್ತಿಯಾಗಿರುವ ರಾಣಾ ಅಯೂಬ್ ಅವರಿಗೆ ಸೇರಿದ 1.77 ಕೋಟಿ ರೂಪಾಯಿಗಳನ್ನು ಅಕ್ರಮ ಹಣ ವರ್ಗಾವಣೆಯ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿತ್ತು. ಸಾರ್ವಜನಿಕ ಸೇವೆಗಾಗಿ ದೇಣಿಗೆಗಳನ್ನು ಸಂಗ್ರಹಿಸಿ ಅದರಿಂದ ಬಂದ ಹಣವನ್ನು ರಾಣಾ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಇಡಿ ಆರೋಪಿಸಿದೆ.

ಧರ್ಮಾಧಾರಿತವಾಗಿ ಟ್ವೀಟ್​ಗಳನ್ನು ಮಾಡುತ್ತ, ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಲುಕುವ ರಾಣಾ ಅಯೂಬ್ ಟ್ವಿಟರ್​ನಲ್ಲಿ ದೊಡ್ಡ ಸಂಖ್ಯೆಯ ಫಾಲೋವರ್​ಗಳನ್ನು ಹೊಂದಿದ್ದಾರೆ.

ಇದನ್ನು ಓದಿ:ಅಮರನಾಥ ಯಾತ್ರೆಗೂ ಮುನ್ನ ಕಾಶ್ಮೀರದಲ್ಲಿ ದಾಳಿಗೆ ಸಂಚು.. ಶಸ್ತ್ರಾಸ್ತ್ರಗಳೊಂದಿಗೆ ಉಗ್ರ ಅಂದರ್​

ABOUT THE AUTHOR

...view details