ಲಖನೌ (ಉ.ಪ್ರ): ಟ್ವಿಟ್ಟರ್ ಬಳಕೆದಾರನೊಬ್ಬ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬಾಂಬ್ ಸ್ಫೋಟಿಸಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಹಿನ್ನೆಲೆ ಯುಪಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಘಟನೆ ಕುರಿತು ಮಾತನಾಡಿರುವ ಡಿಸಿಪಿ ಪ್ರಮೋದ್ ಕುಮಾರ್ ತಿವಾರಿ, ಯುಪಿ ಪೊಲೀಸ್ ಸಹಾಯವಾಣಿಗೆ ಭಾನುವಾರ ಈ ಬೆದರಿಕೆ ಕುರಿತು ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ಇದೊಂದು ಕಿಡಿಗೇಡಿಗಳ ಕೃತ್ಯ ಇರಬಹುದು ಎನಿಸುತ್ತಿದೆ ಎಂದಿದ್ದಾರೆ.
ಈ ಟ್ವಿಟ್ಟರ್ ಖಾತೆಯು ನಕಲಿಯಾಗಿದೆ. ಬೇರೆ ಹೆಸರು ನೀಡಿ ಖಾತೆ ತೆರೆಯಲಾಗಿದೆ. ತನಿಖೆ ಮುಗಿಯುವವರೆಗೆ ಮತ್ತು ಅಧಿಕೃತ ಹೆಸರು ಪತ್ತೆಯಾಗುವವರೆಗೆ ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಜೊತೆಗೆ ಟ್ವಿಟ್ಟರ್ ಸಂಸ್ಥೆಗೂ ಈ ಬಗ್ಗೆ ಮಾಹಿತಿ ನೀಡಲು ಕೋರಲಾಗಿದೆ. ಈ ಹಿಂದೆಯೂ ಇದೇ ರೀತಿಯ ಬೆದರಿಕೆ ಹಾಕಿರುವುದು ಪತ್ತೆಯಾಗಿತ್ತು. ಈ ಬೆದರಿಕೆ ಹೊರತುಪಡಿಸಿ ಆ ಪೋಸ್ಟ್ಗೆ ಆಕ್ಷೇಪಾರ್ಹ ಕಾಮೆಂಟ್ಗಳನ್ನೂ ಸಹ ಮಾಡಲಾಗಿದೆ. ಆರೋಪಿಯನ್ನ ಶೀಘ್ರ ಬಂಧಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ:ರಾಜಸ್ಥಾನದಲ್ಲಿ ಗೋಧಿ ತುಂಬಿದ್ದ ಲಾರಿ ಪಲ್ಟಿ: ನಾಲ್ವರು ಸಾವು