ಕರ್ನಾಟಕ

karnataka

'ಟಿಪ್​ ಜಾರ್'; ಹಣ ಕಳುಹಿಸಲು ಟ್ವಿಟರ್​ ಹೊಸ ಫೀಚರ್​

ಭಾರತದ ಹಲವಾರು ಪೇಮೆಂಟ್ ಪ್ರೊವೈಡರ್​ ಕಂಪನಿಗಳನ್ನು ಈ ಟಿಪ್​ ಜಾರ್​ ಫೀಚರ್​ ಅಡಿ ತರಲು ಕಂಪನಿ ಯೋಜಿಸಿದ್ದು, ಈ ಫೀಚರ್​ ಹಲವಾರು ಭಾಷೆಗಳಲ್ಲಿ ಲಭ್ಯವಾಗಲಿದೆ. ಸದ್ಯ ಬ್ಯಾಂಡ್​ ಕ್ಯಾಂಪ್​, ಕ್ಯಾಶ್ ಆ್ಯಪ್ (ಜಾಕ್ ಡೋರ್ಸೆ ಒಡೆತನದ್ದು), ಪ್ಯಾಟ್ರಿಯಾನ್, ಪೇಪಾಲ್ ಮತ್ತು ವೆನ್ಮೊ ಮುಂತಾದ ಪೇಮೆಂಟ್​ ಪ್ರೊವೈಡರ್​ ಕಂಪನಿಗಳನ್ನು ಟಿಪ್​ ಜಾರ್​ ಒಳಗೊಂಡಿದೆ.

By

Published : May 7, 2021, 6:12 PM IST

Published : May 7, 2021, 6:12 PM IST

twitter-tests-tip-feature-in-india-know-how-you-can-pay
'ಟಿಪ್​ ಜಾರ್' ; ಹಣ ಕಳುಹಿಸಲು ಟ್ವಿಟರ್​ ಹೊಸ ಫೀಚರ್​

ನವದೆಹಲಿ: ಸಾಮಾಜಿಕ ಜಾಲತಾಣ ಕಂಪನಿ ತನ್ನ ನೂತನ 'ಟಿಪ್​ ಜಾರ್​' ಫೀಚರ್​ ಅನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿದೆ. ಭಾರತ ಸೇರಿದಂತೆ ಜಗತ್ತಿನಾದ್ಯಂತ ಇರುವ ಆ್ಯಂಡ್ರಾಯ್ಡ್​ ಹಾಗೂ ಐಓಎಸ್​ ಬಳಕೆದಾರರು ಈ ಹೊಸ ಫೀಚರ್ ಮೂಲಕ ತಮಗೆ ಬೇಕಾದ ಅಕೌಂಟಿನವರಿಗೆ ಹಣ ಸಂದಾಯ ಮಾಡುವ ಫೀಚರ್ ಇದಾಗಿದೆ.

ಸದ್ಯಕ್ಕೆ ಇಂಗ್ಲಿಷ್ ಭಾಷೆಯಲ್ಲಿ ಟ್ವಿಟರ್ ಬಳಸುವ, ಕೆಲವೇ ಕೆಲ ಲಾಭರಹಿತ ಸಂಸ್ಥೆಗಳ ಸದಸ್ಯರು, ಪತ್ರಕರ್ತರು ಹಾಗೂ ಸಾಫ್ಟವೇರ್​ ವಿನ್ಯಾಸಗಾರರಿಗೆ ಪ್ರಾಯೋಗಿಕವಾಗಿ ಈ ಟಿಪ್ ಜಾರ್​ ಫೀಚರ್​ ಬಳಕೆಗೆ ಅನುವು ಮಾಡಿಕೊಡಲಾಗಿದೆ.

ಭಾರತದ ಹಲವಾರು ಪೇಮೆಂಟ್ ಪ್ರೊವೈಡರ್​ ಕಂಪನಿಗಳನ್ನು ಈ ಟಿಪ್​ ಜಾರ್​ ಫೀಚರ್​ ಅಡಿ ತರಲು ಕಂಪನಿ ಯೋಜಿಸಿದ್ದು, ಈ ಫೀಚರ್​ ಹಲವಾರು ಭಾಷೆಗಳಲ್ಲಿ ಲಭ್ಯವಾಗಲಿದೆ. ಸದ್ಯ ಬ್ಯಾಂಡ್​ ಕ್ಯಾಂಪ್​, ಕ್ಯಾಶ್ ಆ್ಯಪ್ (ಜಾಕ್ ಡೋರ್ಸೆ ಒಡೆತನದ್ದು), ಪ್ಯಾಟ್ರಿಯಾನ್, ಪೇಪಾಲ್ ಮತ್ತು ವೆನ್ಮೊ ಮುಂತಾದ ಪೇಮೆಂಟ್​ ಪ್ರೊವೈಡರ್​ ಕಂಪನಿಗಳನ್ನು ಈಗಾಗಲೇ ಟಿಪ್​ ಜಾರ್​ ಒಳಗೊಂಡಿದೆ.

ಆಂಗ್ಲ ಭಾಷೆಯಲ್ಲಿ ಟ್ವಿಟರ್ ಬಳಸುವ ಬಳಕೆದಾರರು ಕೆಲ ಸೀಮಿತ ಸಂಖ್ಯೆ ಅಕೌಂಟುಗಳಿಗೆ ಟಿಪ್ ಅಥವಾ ಕ್ಯಾಶ್ ಗಿಫ್ಟ್​ಗಳನ್ನು ಕಳುಹಿಸಬಹುದು. ಟಿಪ್ ಜಾರ್​ ಅನ್ನು ಆನ್ ಮಾಡಿಕೊಂಡಲ್ಲಿ ಅಂಥವರ ಪ್ರೊಫೈಲ್ ಪೇಜಿನ ಫಾಲೋ ಬಟನ್ ಪಕ್ಕದಲ್ಲಿ ಇದರ ಐಕಾನ್ ಕಾಣಿಸಲಿದೆ.

ABOUT THE AUTHOR

...view details