ಕರ್ನಾಟಕ

karnataka

ETV Bharat / bharat

ಭಾರತೀಯ ಮಹಿಳೆಯರು ಹೆಚ್ಚು ಚರ್ಚಿಸುವ ವಿಷಯಗಳಾವುವು ಗೊತ್ತೇ? ಇಲ್ಲಿದೆ ಓದಿ.. - Social change

ಭಾರತದಲ್ಲಿ ಮಹಿಳೆಯರು ಯಾವುದರ ಬಗ್ಗೆ ನಿತ್ಯವೂ ಹೆಚ್ಚು ಚರ್ಚಿಸುತ್ತಾರೆ ಎಂಬುದರ ಬಗ್ಗೆ ಟ್ವಿಟರ್‌ ಸಂಶೋಧನಾ ವರದಿಯನ್ನು ಪ್ರಕಟಿಸಿದೆ. ಮಹಿಳೆಯರ ಟ್ವೀಟ್‌ಗಳನ್ನು ಆಧರಿಸಿ ಈ ವರದಿ ನೀಡಲಾಗಿದೆ.

Twitter
ಟ್ವಿಟರ್

By

Published : Mar 5, 2021, 3:29 PM IST

ಟ್ವಿಟರ್ ಇಂಡಿಯಾ ಆಯೋಜಿಸಿದ ಸಂಶೋಧನೆಯಲ್ಲಿ 700 ಮಹಿಳೆಯರ ಸಮೀಕ್ಷೆ ಮಾಡಲಾಗಿದೆ. ಜನವರಿ 2019ರಿಂದ ಫೆಬ್ರವರಿ 2021ರ ನಡುವೆ 7,839 ಮಹಿಳೆಯರ ಖಾತೆಗಳಿಂದ 5,22,992 ಟ್ವೀಟ್‌ಗಳನ್ನು ವಿಶ್ಲೇಷಿಸಿ ಈ ವರದಿ ನೀಡಲಾಗಿದೆ. ಮಹಿಳೆಯರು ಹೆಚ್ಚಾಗಿ ಚರ್ಚಿಸಿರುವ ವಿಷಯಗಳನ್ನು ಆಧರಿಸಿ, ಒಂಬತ್ತು ಪ್ರಮುಖ ವಿಷಯಗಳ ಪಟ್ಟಿ ಮಾಡಲಾಗಿದೆ. ಫ್ಯಾಷನ್, ಪುಸ್ತಕಗಳು, ಸೌಂದರ್ಯ, ಮನರಂಜನೆ ಮತ್ತು ಆಹಾರದ ಬಗ್ಗೆ ಹೆಚ್ಚು ಟ್ವೀಟಿಸಿರುವುದು ತಿಳಿದು ಬಂದಿದೆ.

ನಿತ್ಯದ ಹರಟೆ ಮತ್ತು ಸಂಭ್ರಮಾಚರಣೆಯ ಕ್ಷಣಗಳ ಬಗೆಗಿನ ಟ್ವೀಟ್‌ಗಳಿಗೆ ಹೆಚ್ಚು ಸರಾಸರಿ ಸಂಖ್ಯೆಯ ಲೈಕ್‌ಗಳು, ಫ್ಯಾಷನ್‌ ಪಾಯಿಂಟ್‌ಗಳು ಮತ್ತು ಅಭಿರುಚಿಗಳ ಟ್ವೀಟ್‌ಗಳಿಗೆ ಅತಿ ಹೆಚ್ಚು ಪ್ರತಿಕ್ರಿಯೆಗಳು ಹಾಗೂ ಸಮುದಾಯಗಳು, ಸವಾಲುಗಳಿಗೆ ಸಂಬಂಧಿಸಿದ ಟ್ವೀಟ್‌ಗಳು ಹೆಚ್ಚು ರಿಟ್ವೀಟ್ ಕಂಡಿವೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೂ ಮುನ್ನ ಟ್ವಿಟರ್ ಭಾರತದಲ್ಲಿ ಮಹಿಳೆಯರು ಹೆಚ್ಚು ಮಾತನಾಡುವ ವಿಷಯಗಳ ಬಗ್ಗೆ ಸಮೀಕ್ಷೆ ನಡೆಸಿ, ವರದಿಯನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಮಹಿಳೆಯರು ವೈವಿಧ್ಯಮಯ ಸಂಭಾಷಣೆಗಳೊಂದಿಗೆ ಟ್ವಿಟ್ಟರ್​​ನಲ್ಲಿ ತಮ್ಮದೇ ಆದ ಸ್ಥಾನವನ್ನು ಪಡೆದಿದ್ದಾರೆ ಎಂಬುದನ್ನು ಸಂಶೋಧನೆ ಕಂಡುಹಿಡಿದಿದೆ. ಟ್ವೀಟ್‌ಗಳ ಆಳವಾದ ನೋಟದಿಂದ ಒಂಬತ್ತು ಪ್ರಬಲ ಸಂಭಾಷಣಾ ವಿಷಯಗಳು ಹೊರಬಂದಿವೆ. ಶೇ 24.9ರಷ್ಟು ಫ್ಯಾಷನ್‌ ಪಾಯಿಂಟ್‌ಗಳು ಮತ್ತು ಅಭಿರುಚಿಗಳಿಗೆ ಸಂಬಂಧಿಸಿದ ಮಾತುಕತೆ, ಪ್ರಚಲಿತ ವಿದ್ಯಮಾನಗಳು (ಶೇ 20.8), ಸಂಭ್ರಮಾಚರಣೆಯ ಕ್ಷಣಗಳು (ಶೇ 14.5), ಸಮುದಾಯಗಳು (ಶೇ 11.7) ಹಾಗೂ ಸಾಮಾಜಿಕ ಬದಲಾವಣೆ (ಶೇ 8.7) ವಿಷಯಗಳ ಬಗ್ಗೆ ಮಹಿಳೆಯರು ಹೆಚ್ಚು ಟ್ವೀಟಿಸಿದ್ದಾರೆ.

ಚೆನ್ನೈನಲ್ಲಿ ಸಂಭ್ರಮಾಚರಣೆಯ ಕ್ಷಣಗಳು, ಸೃಜನಾತ್ಮಕ ಪ್ರದರ್ಶನ ಮತ್ತು ದೈನಂದಿನ ಹರಟೆ ವಿಷಯಗಳು ಮುಂದಿದ್ದರೆ, ಸಮುದಾಯಗಳು, ಸಾಮಾಜಿಕ ಬದಲಾವಣೆ ಮತ್ತು ಸವಾಲುಗಳ ಹಂಚಿಕೆಯಲ್ಲಿ ಬೆಂಗಳೂರು ಪ್ರಾಬಲ್ಯ ಸಾಧಿಸಿದೆ. ಫ್ಯಾಷನ್‌ ಪಾಯಿಂಟ್‌ಗಳು, ಅಭಿರುಚಿಗಳು ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಗುವಾಹಟಿಯಲ್ಲಿ ಹೆಚ್ಚು ಮಹಿಳೆಯರು ಟ್ವೀಟಿಸಿದ್ದಾರೆ.

“ನಾವು ಟ್ವಿಟರ್‌ನಲ್ಲಿ ಮಹಿಳೆಯರ ಬಗ್ಗೆ ನಮ್ಮ ತಿಳುವಳಿಕೆಯನ್ನು ಬೆಳೆಸಿಕೊಳ್ಳಲು ಈ ಸಂಶೋಧನೆಯನ್ನು ನಿಯೋಜಿಸಿದ್ದೇವೆ. ಫಲಿತಾಂಶಗಳಿಂದ ನಾವು ಬಹಳ ಪ್ರೇರಿತರಾಗಿದ್ದೇವೆ. ಈ ಒಳನೋಟಗಳು ಟ್ವಿಟರ್ ಪ್ರತಿಯೊಬ್ಬ ಮಹಿಳೆಗೆ ಎಂಬುದನ್ನು ನಮಗೆ ತೋರಿಸುತ್ತದೆ” ಎಂದು ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಹೇಳುತ್ತಾರೆ.

ಭಾರತದಲ್ಲಿ ಮಹಿಳೆಯರು ಟ್ವಿಟರ್‌ನಲ್ಲಿ ಹೆಚ್ಚು ಮಾತನಾಡಿರುವ ವಿಷಯಗಳಿವು:

1. ಪ್ಯಾಶನ್ ಪಾಯಿಂಟ್‌ಗಳು ಮತ್ತು ಆಸಕ್ತಿಗಳು (24.9%):ಮಹಿಳೆಯರು (24.9%) ಟ್ವಿಟರ್‌ಗೆ ಬರಲು ಮುಖ್ಯ ಕಾರಣವೆಂದರೆ ಅವರ ಆಸಕ್ತಿಗಳನ್ನು ಮುಂದುವರಿಸುವುದು ಮತ್ತು ಅವರ ಮನೋಭಾವವನ್ನು ಪ್ರತಿನಿಧಿಸುವುದು ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಈ ವರ್ಗದಲ್ಲಿ ಪ್ಯಾಶನ್ (30%), ಪುಸ್ತಕಗಳು (28%), ಸೌಂದರ್ಯ (25%), ಚಲನಚಿತ್ರಗಳು ಮತ್ತು ಟಿವಿ (21%), ಸಂಗೀತ (18%), ಆಹಾರ (18%), ತಂತ್ರಜ್ಞಾನ (17) %), ಕಲೆ (17%) ಮತ್ತು ಕ್ರೀಡೆ (14%). 41% ಮಹಿಳೆಯರು ಟ್ವಿಟ್ಟರ್​​ನಲ್ಲಿ ಹೊಸ ಆಸಕ್ತಿಯನ್ನು ಕಂಡುಹಿಡಿದಿದ್ದಾರೆ ಎಂದು ವರದಿ ಹೇಳುತ್ತದೆ.

2. ಪ್ರಚಲಿತ ಘಟನೆಗಳು (20.8%): ಮಾಹಿತಿ ಪಡೆಯಲು ಮಹಿಳೆಯರು ಟ್ವಿಟರ್​​ನನ್ನು ಬಳಸುತ್ತಾರೆ. ಗುವಾಹಟಿ ಮತ್ತು ದೆಹಲಿಯಲ್ಲಿ ಶೇ.20.8ರಷ್ಟು ಮಹಿಳೆಯರು ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳ ಬಗ್ಗೆ ಮಾಹಿತಿ ಪಡೆಯಲು ಟ್ವಿಟರ್‌ ಬಳಸುತ್ತಾರೆ ಎಂಬುದು ವರದಿಯಿಂದ ತಿಳಿದುಬಂದಿದೆ.

3. ಸಂಭ್ರಮಾಚರಣೆಯ ಕ್ಷಣಗಳು (14.5%): ವೃತ್ತಿಪರರಿಂದ ವೈಯಕ್ತಿಕ ಗೆಲುವುಗಳವರೆಗೆ, ಮಹಿಳೆಯರು ಜೀವನದ ಸಣ್ಣ ಸಂತೋಷಗಳನ್ನು ಟ್ವೀಟ್​ನಲ್ಲಿ ಹಂಚಿಕೊಳ್ಳುತ್ತಾರೆ. ಚೆನ್ನೈ, ಕೋಲ್ಕತ್ತಾ ಮತ್ತು ಮಧುರೈನ ಮಹಿಳೆಯರು ಇದರಲ್ಲಿ ಮುಂದಿದ್ದಾರೆ.

4. ಸಮುದಾಯಗಳು (11.7%): ವುಮೆನ್ ಸೈನ್ಸ್ ಅಥವಾ ಗರ್ಲ್ ಗೇಮರ್ಸ್ ಆಗಿರಲಿ, ಮಹಿಳೆಯರು ಸಂಪರ್ಕಿಸಲು ಟ್ವೀಟ್ ಮಾಡಲು ಇಷ್ಟಪಡುತ್ತಾರೆ. ಬೆಂಗಳೂರು, ಚೆನ್ನೈ, ಹೈದರಾಬಾದ್ ಏಸ್ ಹೊಸ ಸಂಪರ್ಕಗಳನ್ನು ಕಲ್ಪಿಸುತ್ತಿವೆ.ಟ್ವಿಟರ್​ನ ವಿಶೇಷ ವಿಷಯವೆಂದರೆ ಅದರ ಸಮುದಾಯಗಳ ವೈವಿಧ್ಯತೆ ಮತ್ತು ಜನರು ಅವುಗಳನ್ನು ರೂಪಿಸಲು ಹಾಗೂ ಭಾಗವಹಿಸಲು ಸುಲಭವಾಗಿದೆ.

5. ಸಾಮಾಜಿಕ ಬದಲಾವಣೆ (8.7%): #SheforShe ಮತ್ತು #TimesUp ನಂತಹ ಆನ್‌ಲೈನ್ ಚಳವಳಿಗಳ ಮೂಲಕ ಸಮಾಜದಲ್ಲಿ ಬದಲಾವಣೆಯನ್ನು ತರಲು ಮಹಿಳೆಯರಿಗೆ ಟ್ವೀಟ್ ಮಾಡುತ್ತಾರೆ. ಅಲ್ಲದೇ ವಿಮರ್ಶಾತ್ಮಕ ವಿಷಯಗಳ ಬಗ್ಗೆ ಬೆಳಕು ಚೆಲ್ಲುವಲ್ಲಿ ಬೆಂಗಳೂರು, ಗುವಾಹಟಿ ಮತ್ತು ದೆಹಲಿ ಮಹಿಳೆಯರು ಮುಂದಿದ್ದಾರೆ.

6. ಇಂದಿನ ಸವಾಲುಗಳು (6.9%): ಆನ್‌ಲೈನ್ ಸಂಭಾಷಣೆಗಳಲ್ಲಿ ಸಾಂತ್ವನ ಪಡೆಯಲು ಮಹಿಳೆಯರು ಪೇರೆಂಟಿಂಗ್ ಮತ್ತು ವರ್ಕಿಂಗ್‌ಫ್ರಾಮ್‌ಹೋಮ್‌ನಂತಹ ದೈನಂದಿನ ಕಷ್ಟಗಳ ಬಗ್ಗೆ ಟ್ವೀಟ್ ಮಾಡುತ್ತಾರೆ. ಬೆಂಗಳೂರು, ಹೈದರಾಬಾದ್ ಮತ್ತು ಮುಂಬೈನ ಮಹಿಳೆಯರು ಈ ವಿಷಯಕ್ಕಾಗಿ ಹೆಚ್ಚು ಟ್ವೀಟ್​ ಮಾಡುತ್ತಾರೆ.

7. ಸೃಜನಾತ್ಮಕ ಪ್ರದರ್ಶನ (4.2%): ಫೋಟೋಗ್ರಫಿಯಿಂದ ಪೋಯೆಟ್ರಿಯವರೆಗೆ, ಭಾರತೀಯ ಮಹಿಳೆಯರು ತಮ್ಮ ಸೃಜನಶೀಲತೆಯನ್ನು ಪ್ರೇಕ್ಷಕರಿಗೆ ಪ್ರದರ್ಶಿಸಲು ಟ್ವಿಟರ್​​ನನ್ನು ಬಳಸುತ್ತಾರೆ. ಚೆನ್ನೈ, ಕೋಲ್ಕತ್ತಾ ಮತ್ತು ಮುಂಬೈನ ಮಹಿಳೆಯರು ಇದರಲ್ಲಿ ಮುಂಚೂಣಿಯಲ್ಲಿದ್ದಾರೆ.

8. ಹೃದಯಪೂರ್ವಕ ತಪ್ಪೊಪ್ಪಿಗೆಗಳು (4.2%): ಆಧುನಿಕಡೇಟಿಂಗ್​​, ಮಾನಸಿಕ ಆರೋಗ್ಯ ಮತ್ತು ಹೆಚ್ಚಿನವುಗಳ ಕುರಿತು ಟ್ವೀಟ್‌ ಮಾಡಲಾಗುತ್ತಿದೆ. ಮಹಿಳೆಯರು ತಮ್ಮ ವೈಯಕ್ತಿಕ ಜೀವನದ ಅನುಭವಗಳ ಬಗ್ಗೆ ಟ್ವಿಟರ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮಧುರೈ ಮತ್ತು ಮುಂಬೈ ಮಹಿಳೆಯರು ಇದರಲ್ಲಿ ಹೆಚ್ಚು ಭಾಗಿಯಾಗಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

ಸಾರ್ವಜನಿಕ ಸಂಭಾಷಣೆಗೆ ಸುರಕ್ಷಿತ ಸ್ಥಳವನ್ನಾಗಿ ಮಾಡುವಲ್ಲಿ ಟ್ವಿಟರ್ ಪ್ರಗತಿ ಸಾಧಿಸಿದೆ. ಕಳೆದ ವರ್ಷದಲ್ಲಿ ಅನುಭವವನ್ನು ಹೆಚ್ಚು ಸಕಾರಾತ್ಮಕ, ಸುರಕ್ಷಿತ ಮತ್ತು ಆರೋಗ್ಯಕರವಾಗಿಸಲು ಟ್ವಿಟರ್ ಅನೇಕ ವೈಶಿಷ್ಟ್ಯಗಳನ್ನು ಪರಿಚಯಿಸಿದೆ.

ABOUT THE AUTHOR

...view details