ಕರ್ನಾಟಕ

karnataka

ETV Bharat / bharat

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಖಾತೆಯಿಂದ ನೀಲಿ ಬ್ಯಾಡ್ಜ್ ತೆಗೆದುಹಾಕಿ ಮತ್ತೆ ಮರಳಿಸಿದ ಟ್ವಿಟರ್ - ಟ್ವಿಟ್ಟರ್ ಪ

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಯಿಂದ ನೀಲಿ ಬ್ಯಾಡ್ಜ್ ತೆಗೆದುಹಾಕಿದ್ದ ಟ್ವಿಟರ್​ ಕೆಲ ಹೊತ್ತಲ್ಲೇ ಅದನ್ನು ಮರಳಿಸಿದೆ.

Twitter restores blue verified badge on VP Venkaiah Naidu's personal handle
ವೆಂಕಯ್ಯ ನಾಯ್ಡು

By

Published : Jun 5, 2021, 11:37 AM IST

ನವದೆಹಲಿ:ನಿಯಮ ಎಲ್ಲರಿಗೂ ಒಂದೇ ಎಂದು ಪ್ರತಿಪಾದಿಸುವ ಟ್ವಿಟರ್​ ದೇಶದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಯಿಂದ ನೀಲಿ ಬ್ಯಾಡ್ಜ್ ತೆಗೆದುಹಾಕಿ, ಮತ್ತೆ ಸೇರ್ಪಡೆಗೊಳಿಸಿದೆ.

ಟ್ವಿಟರ್ ಪರಿಶೀಲನಾ ನೀತಿಯ ಪ್ರಕಾರ, ಅಧಿಕೃತ ಖಾತೆಯನ್ನು ಗುರುತಿಸಲು ಬ್ಲೂ ಬ್ಯಾಡ್ಜ್/ ಮಾರ್ಕ್​ ನೀಡಲಾಗುತ್ತದೆ. ನೀಲಿ ಬ್ಯಾಡ್ಜ್ ಸ್ವೀಕರಿಸಬೇಕಾದರೆ ನಿಮ್ಮ ಖಾತೆಯು ಸಕ್ರಿಯವಾಗಿರಬೇಕು. ಬಳಕೆದಾರರ ನಡುವೆ ವಿಶ್ವಾಸವನ್ನು ಕಾಪಾಡಿಕೊಳ್ಳಲು ಇದು ಸಹಕರಿಸುತ್ತದೆ.

ನೀಲಿ ಬ್ಯಾಡ್ಜ್ ತೆಗೆದುಹಾಕಿ ಮತ್ತೆ ಮರಳಿಸಿದ ಟ್ವಿಟರ್

ಇಂದು ಬೆಳಗ್ಗೆ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆ (@MVenkaiahNaidu)ಯಿಂದ ನೀಲಿ ಬ್ಯಾಡ್ಜ್ ತೆಗೆದುಹಾಕಿದ್ದ ಟ್ವಿಟರ್​, ಅವರ ಅಧಿಕೃತ ಖಾತೆ (@VPSecretariat)ಯಲ್ಲಿ ಬ್ಯಾಡ್ಜ್ ಹಾಗೆಯೇ ಉಳಿಸಿತ್ತು. ಇದೀಗ ಮತ್ತೆ ನೀಡಿದೆ.

ವೆಂಕಯ್ಯ ನಾಯ್ಡು ಅವರ ಅಧಿಕೃತ ಟ್ವಿಟರ್​ ಖಾತೆ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟ್ವಿಟರ್​​, ಖಾತೆ ನಿಷ್ಕ್ರಿಯವಾಗಿದ್ದರೆ ಈ ಬ್ಯಾಡ್ಜ್ ತೆಗೆದು ಹಾಕಲಾಗುವುದು. ಜುಲೈ 2020ರಿಂದ ವೆಂಕಯ್ಯ ನಾಯ್ಡು ಅವರ ಟ್ವಿಟರ್​ ಖಾತೆ ಆ್ಯಕ್ಟೀವ್​ ಇರದ ಕಾರಣ ನೀಲಿ ಬ್ಯಾಡ್ಜ್ ತೆಗೆದು ಹಾಕಲಾಗಿದೆ. ಅದರೆ ಮತ್ತೆ ಬ್ಯಾಡ್ಜ್ ಅವರ ವೈಯಕ್ತಿಕ ಖಾತೆಗೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

ABOUT THE AUTHOR

...view details