ಕರ್ನಾಟಕ

karnataka

ETV Bharat / bharat

ವೆಂಕಯ್ಯ ನಾಯ್ಡು ಬಳಿಕ RSS ಮುಖ್ಯಸ್ಥನ ಟ್ವಿಟರ್​ ಖಾತೆಯಿಂದ ಬ್ಲೂ ಬ್ಯಾಡ್ಜ್ ಮಾಯ

ಆರ್​ಎಸ್​​ಎಸ್ ಮುಖ್ಯಸ್ಥ ಮೋಹನ್​ ಭಾಗವತ್​ ಅವರ ಖಾತೆಯಿಂದ ನೀಲಿ ಬ್ಯಾಡ್ಜ್ಅನ್ನು ಟ್ವಿಟರ್​ ತೆಗೆದು ಹಾಕಿದೆ.

By

Published : Jun 5, 2021, 12:45 PM IST

RSS chief Mohan Bhagwat
ಮೋಹನ್​ ಭಾಗವತ್

ನವದೆಹಲಿ:ಇಂದು ಬೆಳಗ್ಗೆಯಷ್ಟೇ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಯಿಂದ ನೀಲಿ ಬ್ಯಾಡ್ಜ್ ತೆಗೆದುಹಾಕಿ, ಮತ್ತೆ ಸೇರ್ಪಡೆಗೊಳಿಸಿದ್ದ ಟ್ವಿಟರ್​ ಇದೀಗ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​​ಎಸ್)ದ ಮುಖ್ಯಸ್ಥ ಮೋಹನ್​ ಭಾಗವತ್​ ಖಾತೆ ಮೇಲೆ ತನ್ನ ದೃಷ್ಟಿ ಬೀರಿದೆ.

ಮೋಹನ್​ ಭಾಗವತ್​ ಅವರ ಟ್ವಿಟರ್​ ಖಾತೆಯಲ್ಲಿದ್ದ ನೀಲಿ ಬ್ಯಾಡ್ಜ್ಅನ್ನು ತೆಗೆದುಹಾಕಿದೆ. ಆರ್​ಎಸ್​​ಎಸ್ ಮುಖ್ಯಸ್ಥನಿಗೆ ಟ್ವಿಟರ್​ನಲ್ಲಿ ಸುಮಾರು 2 ಲಕ್ಷ ಅನುಯಾಯಿಗಳಿದ್ದಾರೆ. ಮೋಹನ್​ ಭಾಗವತ್​ ಅವರ ಟ್ವಿಟರ್​ ಖಾತೆಯನ್ನು 2019ರಲ್ಲಿ ತೆರೆಯಲಾಗಿದ್ದು, ಆ ಬಳಿಕ ಯಾವುದೇ ಟ್ವೀಟ್​ಗಳನ್ನು ಅವರು ಮಾಡಿರಲಿಲ್ಲ.

ಮೋಹನ್​ ಭಾಗವತ್ ಟ್ವಿಟರ್​ ಖಾತೆ

ಟ್ವಿಟ್ಟರ್ ಪರಿಶೀಲನಾ ನೀತಿಯ ಪ್ರಕಾರ, ಅಧಿಕೃತ ಖಾತೆಯನ್ನು ಗುರುತಿಸಲು ಬ್ಲೂ ಬ್ಯಾಡ್ಜ್/ ಮಾರ್ಕ್​ ನೀಡಲಾಗುತ್ತದೆ. ನೀಲಿ ಬ್ಯಾಡ್ಜ್ ಸ್ವೀಕರಿಸಬೇಕಾದರೆ ನಿಮ್ಮ ಖಾತೆಯು ಸಕ್ರಿಯವಾಗಿರಬೇಕು. ಬಳಕೆದಾರರ ನಡುವೆ ವಿಶ್ವಾಸವನ್ನು ಕಾಪಾಡಿಕೊಳ್ಳಲು ಇದು ಸಹಕರಿಸುತ್ತದೆ. ಒಂದು ವೇಳೆ ನಿಮ್ಮ ಖಾತೆ ನಿಷ್ಕ್ರಿಯವಾಗಿದ್ದರೆ ನೀಲಿ ಬ್ಯಾಡ್ಜ್ಅನ್ನು ಟ್ವಿಟರ್​ ತೆಗೆದು ಹಾಕುತ್ತದೆ.

ಇದನ್ನೂ ಓದಿ:ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಖಾತೆಯಿಂದ ನೀಲಿ ಬ್ಯಾಡ್ಜ್ ತೆಗೆದುಹಾಕಿ ಮತ್ತೆ ಮರಳಿಸಿದ ಟ್ವಿಟರ್

ಕೆಲ ಹೊತ್ತಿನ ಹಿಂದಷ್ಟೇ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಯಿಂದ ನೀಲಿ ಬ್ಯಾಡ್ಜ್ ತೆಗೆದುಹಾಕಿದ್ದ ಟ್ವಿಟರ್​ ಮತ್ತೆ ಸೇರ್ಪಡೆಗೊಳಿಸಿತ್ತು. ಜುಲೈ 2020ರಿಂದ ವೆಂಕಯ್ಯ ನಾಯ್ಡು ಅವರ ಟ್ವಿಟರ್​ ಖಾತೆ ಆ್ಯಕ್ಟೀವ್​ ಇರದ ಕಾರಣ ಹೀಗೆ ಮಾಡಲಾಗಿತ್ತು ಎಂದು ಟ್ವಿಟರ್​ ಸ್ಪಷ್ಟನೆಯನ್ನೂ ನೀಡಿದೆ.

ABOUT THE AUTHOR

...view details